ಪುಟ:ನೋವು.pdf/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ാ2, " ಇನ್ನೆಷ್ಟು ಕಾಲ ಇದನ್ನ ಸಹಿಸೊಂಡೇನು ಹೇಳಿ ?" "ಸಮಯ ಇದ್ದ ಹಾಗೆಯೇ ಇರುತ್ಯೆ, ಶ್ರೀನಿವಾಸಯ್ಯ, ಕ್ರಮೇಣ ಎಲ್ಲಾ ಸರಿಹೋಗುತ್ತೆ." " ಏನು ಸರಿಹೋಗುತ್ತೊ ನಾನು ಬೇರೆ ಕಾಣೆ." * ಭಗವಂತನ ಮೇಲೆ ಭಾರ ಹಾಕ್ಟಿಡಿ." * ಅದೊಂದೇ ನನ್ನ ಪಾಲಿಗೆ ಈಗ ಉಳಿದಿರೋದು." - ಅಲ್ಲಿಂದ ಎದ್ದು ಶ್ರೀನಿವಾಸಯ್ಯ ನದೀ ತಟಕ್ಕೆ ಹೋದರು. ಹೊಲಗಳಲ್ಲಿ ತುಂಟಾಟ ಗಳನಾಡುತ್ತಿದ್ದ ಭತ್ತದ ಎಳೆಯ ಸಸಿಗಳು ಅವರ ಮನಸ್ಸನ್ನು ತಣಿಸಿದುವು. ಹಾಗೆಯೇ ಗೊತು ಗುರಿಯಿಲ್ಲದೆ ಬಹಳ ಹೊತು ನಡೆದು, ಮೋಡ ಕವಿದ ಆಕಾಶದಲ್ಲಿ ಸೂರ್ಯ ಪಶ್ಚಿಮಾಭಿಮುಖನಾಗಿ ಮೂರು ನಾಲ್ಕು ಘಳಿಗೆಗಳಾದ ಮೇಲೆ ಮನೆಯತ್ತ ತಿರುಗಿದರು. ಚಿಕ್ಕವರೆಲ್ಲರ ಊಟವಾಗಿತು. "ನೀನೂ ಉಣ್ಣಬೇಕಾಗಿತು," ಎಂದರು ಶ್ರೀನಿವಾಸಯ್ಯ ತಾಯಿಗೆ, ಸ್ವಲ್ಪವೇ. ಸಮಯದಲ್ಲಿ ಹೆತ್ತವಳು ಇಷ್ಟೊಂದು ಮುದುಕಿಯಾದಳಲ್ಲ-ಎನ್ನಿಸಿತು ఆచారిr. ದೊಡ್ಡಮ್ಮ ಅಂದರು : " లUటశ్చా, లిన." SE 'ಮನೆಯ ಮುಂದೆ ವಿಶಾಲ ಚಪ್ಪರ, ತಳಿರು ತೋರಣ, ಮುನಿಸ್ವಾಮಿಯ ವಾಲಗದ ಜತೆಗೆ ನಗರದಿಂದ ತರಿಸಿದ ಬಾಂಡು.. ಆ ಜನರ ಬಳಿ-ಕೆಂಪು-ಹಸಿರು ದಿರಸು ಹಳ್ಳಿಯವರ ಕಣ್ಣಿಗೆ ర్చె. ಅಬುಲ್ಲನಂತೂ ನಿಶ್ಚಿತ ಕಾಲಕ್ಕಿಂತ ಮುಂಚೆಯೇ ರಸ್ತೆಯ ಕೆಲಸ ಮುಗಿಸಿದ್ದ. ಕಣಿವೇಹಳ್ಳಿಯಿಂದ ಹಿಡಿದು ಕಾಲುದಾರಿಯವರೆಗೆ ಒಂದೊಂದು ಫರ್ಲಾಂಗಿನುದ್ದಕ್ಕೂ ಕಮಾನು ಗಳನ್ನು ರಚಿಸಿದ್ದರು. ಗೌಡರ ಮಗಳ ಮದುವೆ– ಗೌಡರ ಮಗಳ ಮದುವೆ– ಎಲ್ಲ ರೈತರ ಮನೆಗಳಲ್ಲಾ ಸಡಗರ. ಸಿದ್ಧತೆಯನ್ನು ಕಂಡು ಶಾಮೇಗೌಡರು ಸಂತೃಪ್ತರು. ಆ ದಿನ ಸೂರ್ಯ ನಕ್ಕಿದ್ದ. ಹೀಗೆಯೇ ಮೂರು ದಿವಸ ಮಳೆ ಸುರಿಯದೆ ಬಿಸಿಲಿದ್ದರೆ ವಿಶೇಷ ಪೂಜೆ ನಡೆಸುವೆನೆಂದು ಗುಡಿಯ ಈಶ್ವರ ದೇವರಿಗೆ ಗೌಡರು ಹರಕೆ ಹೊತ್ರರು. ರಂಗಣ್ಣ ಒಂದು ವಾರದ ಮಟ್ಟಿಗೆ ಟ್ಯಾಕ್ಸಿಯೊಂದನ್ನು ಬಾಡಿಗೆಗೆ ಹಿಡಿದಿದ್ದ. ಭಾವನಾಗಲಿದ್ದ ಶಿವಪ್ಪನೊಡನೆ ಅವನು ಕಣಿವೇಹಳ್ಳಿಗೆ ದಾರಿ ಕವಲೊಡೆಯುವವರೆಗೂ ಆ ವಾಹನೆದಲ್ಲಿ ಬಂದ. ಅದರಲ್ಲಿ ಶೀನಪ್ಪನ ಸಹಪಾಠಿಗಳು ಮೂವರಿದ್ದರು.