ಪುಟ:ನೋವು.pdf/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು 9% ಗೋವಿಂದ ಬೊಂಬಾಯಿಯವರನ್ನು ನೋಡಿ, " ದಸ್ ಹಜಾರ್ ಸೇಠ್ ಸಾಬ್: ದಸ್ ಮಾಡೊಳ್ಳಿ.." ఎ0దో. 8. Ο ನಗರಕ್ಕೆ ಹೋಗಿ ಗೊತು ಗುರಿ ಇಲ್ಲದೆ ದಿನವಿಡೀ ಅಲೆದು, ಬಸ್ ನಿಲ್ದಾಣದ ತಂಗು ಮನೆಯ ಮೂಲೆಯಲ್ಲಿ ಮುದುಡಿ ಮಲಗಿ, ಕೊರೆಯುವ ಚಳಿಯನ್ನು ಸಹಿಸಿ, ಬೆಳಗ್ಗೆ ಎದ್ದು ಹತ್ತಿರದ ಕಾಕಾ ಹೋಟೆಲಿನಲ್ಲಿ ಚಹಾ ಕುಡಿದು, ಅಬುಲ್ಲ ಒಂದು ಬಸ್ಸು ಹತ್ತಿ ಕಣಿವೇಹಳ್ಳಿಗೆ ಅಭಿಮುಖನಾದ. ಕವಲು ದಾರಿಯ ಬಳಿ ಇಳಿದಾಗ ಅವನಿಗೆ ಆಶ್ಚರ್ಯವಾಯಿತು. ಅಲ್ಲಿದ್ದ ಹೊಸದೊಂದು ಕೈಕಂಬವನ್ನು ಕಂಡು. ಬುಡದಲ್ಲಿ ಕಪ್ಪ ಬಿಳಿ ಕಪ್ಪ ಬಿಳಿ ಪಟ್ಟೆಗಳು ಮೇಲೆ ಹಳದಿ, ಅಡ್ಡ ಹಲಗೆಯಲ್ಲಿ ಏನು ಬರೆದಿದ್ದರೊ ? ಕನ್ನಡ ಅಕ್ಷರಗಳು. ಕನ್ನಡವೊ, ಇನ್ನೊಂದೊ, ಆ ನಿರಕ್ಷರ ಕುಕ್ಷಿಗೆ ಎಲ್ಲವೂ ಒಂದೇ, ಆದರೂ ಆತ ಊಹಿಸಿಕೊಳ್ಳಬಲ್ಲ, ಕಣಿವೇಹಳ್ಳಿ ಎಂದಿರಬೇಕು ಅದರಲ್ಲಿ. ನಿನ್ನೆ ಖಾಲಿ ಜಾಗ. ಇವತು ಅಲ್ಲೆಯೊಂದು ಕಂಬ, ಊರಿನ ಬಡಗಿ ಮಾಡಿದ್ದಲ್ಲ. ನಗರದಲ್ಲೇ ಮಾಡಿಸಿರಬೇಕು. ಅಯ್ಯನವರ ಮಗನ ಕೆಲಸವೇ, ಅದರಲ್ಲೇನು ಸಂಶಯ? ಸೋಮಪುರಕ್ಕೆ ಹೋಗುವ ಲಾರಿಯಲ್ಲಿ ತಂದಿಳಿಸಿ ನೆಟ್ಟಿರಬೇಕು ನಿನ್ನೆ. –ಅಬುಲ್ಲ ಕಂಬವನ್ನು ಮುಟ್ಟಿ ನೋಡಿದ. ಕಣ್ಣಗಳನ್ನು ಕಿರಿದುಗೊಳಿಸಿ ಅಕ್ಷರಗಳನ್ನು ದಿಟ್ಟಿಸಿದ. ತಲೆಯಲ್ಲಾಡಿಸಿ, ನಿಟುಸಿರು ಬಿಟು, ದಾರಿ ನಡೆದ. - ತಾನು ಬೆವರು ಸುರಿಸಿ ಕಡಿದು ಮಾಡಿದ, ಮಾಡಿಸಿದ ದಾರಿ, ಗೌಡರ ಮಗಳ ಮದುವೆಯ ದಿನದಿಂದ ಇವತ್ತಿನವರೆಗೆ ಸುಮಾರು ಎರಡು ಎರಡೂವರೆ ತಿಂಗಳು ದಾಟಿತಲ್ಲ? ಈ ಅವಧಿ ಯಲ್ಲಿ ಕಾರು ಟ್ಯಾಕ್ಸಿಗಳು ಅದೆಷ್ಟು ಸಾರೆ ಕಣಿವೇಹಳ್ಳಿಗೆ ಬಂದು ಹೋದವು! ಗೌಡರು ಅಳಿಯನಿಗೆ ಕಾರು ಕೊಡಿಸಿದರು ; ತಮ್ಮ ಉಪಯೋಗಕ್ಕೆ ಜೋಡೆತು ಎಳೆಯುವ ಗಾಡಿ ಕೊಂಡರು. ವಾಹನಗಳು ಓಡಿ ಓಡಿ ದಾರಿಯುದ್ದಕ್ಕೂ ಸವಾನಾಂತರದಲ್ಲಿ ಎರಡು ಚರಂಡಿ ಗಳಾಗಿದ್ದುವು. ಅವುಗಳ ನಡುವೆ ಮಣ್ಣ ದಿಬ್ಬವಾಗಿತು. ಕೆಲ ದಿನಗಳಗೆ ಹಿಂದೆ ಗೋವಿಂದ ಹೇಳಿದ್ದ: “ನಿನ್ನಿಂದಾಗಿ ಕಣಿವೇಹಳ್ಳಿಯ ಹೆಸರು ಹಿಂದೂಸ್ಥಾನದಲ್ಲೆಲ್ಲಾ ಹಬ್ಬೊ ಹಾಗಾಯು, ఆబ్పల్లి." * ಅಬುಲ್ಲ ಕೇಳಿದ : * ఆదొంగి సివిల్లామియJుEరి ?" * ಹೆಂಗೆ ಅಂದ್ರೆ ? ಹರಿಭಾಯಿ ಸೇಠ್ ಬಂದ ದಿವಸ ನಿನ್ನ ರಸ್ತೆ ಇರದೇ ಹೋಗಿದ್ರೆ ಈ ಹಳ್ಳಿಯ ಭಾಗ್ಯದ ಬಾಗಿಲು ತೆರೀತಿತ್ತೇನಯ್ಯ ?” “ ಏನೋ ಗೌಡರು ಯೋಳಿದು, ಮಾಡ್ಲೆ." |5