ಪುಟ:ನೋವು.pdf/೯೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


            ನೋವು
  ಠಪ್ ಠಪ್ಪೆಂದು ಮಳೆಹನಿಗಳು ಬಿರುಸಾಗಿ ಬಿದ್ದುವು.
  ರಂಗಣ್ಣ ಕೆಳಕ್ಕೆ ಹಾರಿದ. 
  "ನಡೀ ಸುಬ್ಬೀ. ಮೈ ತೋಯಿಸ್ಕೋಬಾರದು. ಮತ್ತೆ ಜ್ವರ ಬಂದಾತು," ಎಂದ.
  ಸುಬ್ಬಿ ಇಳಿದು ನಿಂತಳು. ತಾನು ಮರುಮಾತಾಡದೆ ಮನೆಗೆ ಹೊರಟ ಅಣ್ಣನನ್ನು 

ಹಿಂಬಾಲಿಸಿದಳು.

  ...ಕರಿಯನನ್ನು ಕರೆದುಕೊಂಡು ಸಂಜೆ ಮಾರಿ ಚಾವಡಿಯತ್ತ ಹೋದ ಶಾಮೇ 

ಗೌಡರು ಆದಿನ ಮಳೆಯನ್ನು ಸ್ವಾಗತಿಸಲು ಸಿದ್ದರಾಗಿದ್ದರು. ಮಧ್ಯಾಹ್ನದ ಹೊತ್ತು ಭಣ ಗುಟ್ಟಿದ ನೆಲವೂ ಬೆವರಿದ ಮೈಯೂ ಆ ಸಂಜೆ ಮಳೆಯಾಗಬಹುದೆಂಬ ನಿರೀಕ್ಷೆಗೆ ಎಡೆ ಕೊತ್ತಿದ್ದವು.

  ಹೊತ್ತು ಕಳೆದಂತೆ ವಾತಾವರಣದಲ್ಲಾಗುತ್ತಿದ್ದ ಬದಲಾವಣೆಯನ್ನು ಗಮನಿಸಿ, ಇವತ್ತು 

ಮಳೆ ಖಂಡಿತ ಎಂದುಕೊಂಡರು ಗೌಡರು.

  ಈ ಮಳೆಯಾದೊಡನೆಯೇ ಮಾವಿನಕಾಯಿಗಳನ್ನೆಲ್ಲ ಕುಯ್ಯಿಸಿ ಫಸಲನ್ನು ನಗರಕ್ಕೆ 

ದಾಟಿಸಿ ಬಿಡಬೇಕು. ಸೊಸೈಟಿಯ ಮೂಲಕ ಗೋವಿಂದ ಈ ಕೆಲಸ ಮಾಡಿದ ಸರಿ; ಇಲ್ಲ ವಾದರೆ ತಾವೇ ಆಳುಗಳನ್ನು ಕಳುಹಿಸಿ ಮಾರಾಟ ಮುಗಿಸಿಬಿಡಬೇಕು.

  ಹೊಲ ಉಳಲು ಎಂದಿನಂತೆ ಕೃಷ್ಟೇಗೌಡ ತನ್ನ ಆಳುಗಳನ್ನೂ ಹೋರಿಗಳನ್ನೂ 

ಕಳುಹಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಅವನ ಹೊಲಗಳ ಉಳುಮೆಗೆ ತಮ್ಮ ಹೋರಿ ಗಳನ್ನೂ ಆಳುಗಳನ್ನೂ ತಾವು ಕಳುಹಿಸಬೇಕು.

  ಮುನಿಯನ ಹೆಂಡತಿ ನಿಂಗಿ ಕಾಯಿಲೆ ಮಲಗಿರುವಳೆಂಬ ಸುದ್ದಿಯನ್ನು ಕರಿಯ ತಂದ. 
  ಗೌಡರು ಹೇಳಿದರು:
  "ಏನಾಗೈತಂತೆ?”
  “ ಜರ ಅಂತೆ.” 
  ರಂಗನನ್ನು ಕೇಳಬೇಕು; ಸುಬ್ಬಿಗೋಸ್ಕರ ತಂದ ಮಾತ್ರೆಗಳೇನಾದರೂ ಉಳಿದಿದ್ದರೆ 

ಕೊಡಿಸಬೇಕು–ಎಂದು ಮನಸ್ಸಿನಲ್ಲಿ ಗುರುತು ಹಾಕಿಕೊಂಡರು ಗೌಡರು.

  ಅಬ್ದುಲ್ಲ ನಾಪತ್ತೆಯಾಗಿ ಮುನಿಯನ ಹೊಲದ ಪ್ರಶ್ನೆಯೊಂದು ಬಗೆಹರಿಯದೆ 

ಉಳಿಯಿತಲ್ಲ ಎಂಬ ಕಸಿವಿಸಿ ಗೌಡರ ಮನಸ್ಸಿಗೆ ನೆಟ್ಟ ಮುಳಾಗಿತ್ತು.

  ಭಾರವಾದ ಕಪ್ಪು ಮೋಡಗಳು ಕಣಿವೇಹಳ್ಳಿಯ ಮೇಲೆ ಚಪ್ಪರ ಕಟ್ಟಿದಾಗ 

ಗೌಡರು, "ನೀನು ಹೋಗು", ಎಂದು ಕರಿಯನಿಗೆ ಆದೇಶವಿತ್ತು, ತಾವು ಮನೆಯ ಕಡೆಗೆ ಹೊರತರು.

  ಅವರು ನೀರ ಕಾಲಿವೆಯನ್ನು ದಾಟುವ ವೇಳೆಗೆ ಹನಿಗಳು ಬಿದ್ದು ಧೋ ಧೋ 

ಎಂದು ಮಳೆ ಸುರಿಯಲಾರಂಭಿಸಿತು.

  ಅವರು ಮನೆ ಸೇರಿದಾಗ ಮೈ ಪೂರ್ತಿ ತೋಯ್ದು ಉಡುಪಿನಿಂದ ನೀರು ಧಾರೆಗಟ್ಟಿ 

ಹರಿಯುತ್ತಿತ್ತು. ಗೌಡರು ಮಾತ್ರ ಉಲ್ಲಸಿತರಾಗಿದ್ದರು.

  ಜಗಲಿಯಲ್ಲಿ ನಿಂತು, "ಸುಬ್ಬೀ, ಮೈ ಒರೆಸ್ಕೊ ಬೇಕಲ್ಲ ಮೊಗ," ಎಂದರು.
  ಮಗಳ ಧ್ವನಿ ಕೇಳಿಸಿತು;