ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಹೃಲ್ಲಾಭವು. ಭೂತದಯೆಗಿಂತ ಪುಣ್ಯವಿಲ್ಲವು. ರೋಗವಿಲ್ಲದೆ ಇರುವುದಕ್ಕಿಂತ ಸಾವೂ, ಕಪಟವಿಲ್ಲದ ಪ್ರೀತಿಗಿಂತ ಸ್ನೇಹವೂ, ವಿವೇಕಿಯಾಗುವುದ ಕ್ಕಿಂತ ಪಾಂಡಿತ್ಯವೂ ಇಲ್ಲ. ಅದುಕಾರಣ ನನಗೆ ಹುಟ್ಟಿದ ವ್ಯಸನ ದಿಂದ ನಿನ್ನ ಬಳಿಗೆ ಬಂದೆನು. ಈ ಲೋಕದಲ್ಲಿರುವ ಸಕಲಜಂತು ಗಳೂ ಹೇಗಾದರೂ ಆಹಾರವನ್ನು ಸಂಪಾದಿಸಿಕೊಳ್ಳುವುವು; ಆದರೆ ವಿವೇಕವುಳವನು ಆಹಾರಕೊಸ್ಕರ ಅನುಚಿತವಾದ ಕೆಲಸವನ್ನು ಮಾಡನು. ನೀನು ಪರೋಪಕಾರವನ್ನು ಮಾಡುವುದಕ್ಕಾಗಿ ಶ್ರಮಪ ಡುವುದು ತಪ್ಪಲ್ಲ. ಯಾರ ಕಪ್ಪವು ಪರರಿಗೆ ಉಪಯೋಗಿಸುವುದೋ ಅವನೊಬ್ಬನೇ ಪುಣ್ಯವಂತನು-ಎಂದು ಹಿರಣ್ಯಕನು ನುಡಿದನು. ಅದನ್ನು ಕೇಳಿ ಮಿತ್ರವೆಂದರನು ಇಂತೆಂದನು. ವಿವೇಕವಿಲ್ಲದವನು ಶಾಸ್ತ್ರಗಳನ್ನು ಓದಿದರೂ ಅವುಗಳಲ್ಲಿ ಹೇಳಿರುವ ಪ್ರಕಾರ ಆಚರಿಸನು. ವಿವೇಕವುಳವನು ಶಾಸ್ತ್ರಗಳನ್ನು ಓದಿ ಅವುಗಳಲ್ಲಿ ಹೇಳಿರುವ ಮೇರೆಗೆ ನಡೆದುಕೊಳ್ಳುವನು' ಶಾಸ್ತ್ರ ಗಳನ್ನು ಓದಿದವನು ಅವುಗಳಲ್ಲಿ ಹೇಳಿರುವ ಪ್ರಕಾರ ಆಚರಿಸಬೇಕು; ಇಲ್ಲದಿದ್ದರೆ ಶಾಸ್ತ್ರ ಗಳನ್ನು ಓದುವುದು ವ್ಯರ್ಥವು. ಶಾಸ್ತ್ರ ಪ್ರಕಾರ ಮಾಡಿದ ಔಷಧವನ್ನು ತೆಗೆದುಕೊಂಡರೆ ಹೊರತು ಔಷಧದ ಹೆಸರನ್ನು ಹೇಳದ ಮಾತ್ರದಿಂದಲೇ ರೋಗ ವಾಸಿಯಾಗುವುದೋ ? ಶಾಸ್ತ್ರವನ್ನು ಚೆನ್ನಾಗಿ ಓದಿಯಿದ್ದರೂ ಅದರಲ್ಲಿ ಇದು ಹೀಗೆ-ಎಂದು ಸಿದ್ಧಾಂತ ಮಾಡುವುದಕ್ಕೆ ಹೆದರುವವನಿಗೆ ಅದನ್ನು ಓದಿದುದರಿಂದ ಪ್ರಯೋಜನ ವಿಲ್ಲ. ಕುರುಡನ ಕೈಯಲ್ಲಿ ದೀಪವಿದ್ದರೆ ಅಲ್ಲಿಯ ಪದಾರ್ಥವು ಅವ ನಿಗೆ ಕಾಣಿಸುವುದೇ? ದಾತನು ಒಂದುವೇಳೆ ಯಾಚಕನಾಗುವನು ; ಯಾಚಕನು ಒಂದುವೇಳೆ ದಾತನಾಗುವನು. ಶೂರನು ಒಂದುವೇಳ ಶತ್ರುಗಳನ್ನು ಜಯಿಸುವನು, ಒಂದುವೇಳೆ ಶತ್ರುಗಳಿಂದ ಜಯಿಸಲ್ಪ ಡುವನು. ವಿದ್ವಾಂಸನು ಪ್ರಸಂಗದಲ್ಲಿ ಒಂದುವೇಳೆ ಗೆಲ್ಲುವನು; ಒಂದು ವೇಳ ಸೋಲುವನು. ಹೀಗೆ ಹಾನಿವೃದ್ದಿಗಳು ಯಾರಿಗಾದರೂ ಸರಿ ಉಂಟು. ಒಳ್ಳೆಯ ಅದೃಷ್ಟವಿರುವಾಗ ಚೆನ್ನಾಗಿ ನಡೆವುದು, ದುರ