ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಹೃಲ್ಲಾಭವು 83 ವನದಲ್ಲಿ ಪ್ರವೇಶಿಸಿದರೂ, ಪರುಷದಿಂದಲೂ ಬಲದಿಂದಲೂ ವಜ್ರಗಳಿಗೆ ಸಮಾನವಾದ ಉಗುರುಗಳ ಕೋನಗಳಿಂದಲೂ ಮದಿಸಿದ ಆನೆಗಳ ಕುಂಭ ಸ್ಥಳಗಳನ್ನು ಸೀಳಿ ರಕ್ತವನ್ನು ಹೀರಿ ಮಾಂಸವನ್ನು ಭಕ್ಷಿಸಿ ಸುಖವಾಗಿ ಇರುವುದಲ್ಲವೇ? ಲೋಕದಲ್ಲಿ ಉದ್ಯೋಗವುಳ್ಳವನು ಧನವನ್ನಾಗಲಿ ಯಶಸ್ಸನ್ನು ಗಲಿ ಮರಣವನ್ನಾಗಲಿ ಹೊಂದುವನು ; ಉದ್ಯೋಗವಿಲ್ಲದವನು ಮರಣ ವನ್ನು ಮಾತ್ರವೇ ಹೊಂದುವನಲ್ಲದೆ ಧನವನ್ನಾಗಲಿ ಯಶಸ್ಸನ್ನಾಗಲಿ ಹೊಂದಲಾರನು, ಕಪ್ಪೆಗಳು ಮಡುವನ್ನೂ ಮಿಾನುಗಳು ಕೊಳಗ ನ್ಯೂ ಹೊಂದುವ ಹಾಗೆ, ಉದ್ಯೋಗವುಳ್ಳವನು ಧನವನ್ನೂ ಸಹಾಯ ವನ್ನೂ ಹೊಂದುವನು. ಪಾಲುಮಾರಿಕೆ, ಜನ್ಮಭೂಮಿಯಲ್ಲಿಯ ಆಕೆ, ರೋಗಿಯಾಗುವಿಕೆ, ಭಯತೀಲತೆ, ಅಸಂತು, ಈ ಐದು ಪೂಜ ತೆಗೆ ವಿಫ್ಟ್ ಕಾರಣಗಳು. ಇವುಗಳನ್ನು ಪರಿಹರಿಸಿದ ಪುರುಷನು ಪೂಜೆ ನಾಗುವನು, ಪೂಜ್ಯತೆಯಿಂದ ಸಂಪತ್ತು ಉಂಟಾಗುವುದು. ಸಂಪನ್ನ ನಾದುದರಿಂದ ಸುಖಗಳನ್ನು ಅನುಭವಿಸುವನು, ಪ್ರಾಪ್ತವಾದ ಸುಖವ ನಾದರೂ ದುಃಖವನ್ನಾದರೂ ಅನುಭವಿಸಿಯೇ ತೀರಬೇಕು. ನಾವು ಕೊರದೆಯೇ ಸುಖವಾಗಲಿ ದುಃಖವಾಗಲಿ ಬರುವುದು. ಸುಖಬಂದಿ ತೆಂದು ಸಂತೋಷಿಸಬಾರದು; ದುಃಖಬಂದಿತೆಂದು ವ್ಯಸನಪಡಬಾರದು. ಉತ್ಸಾಹಸಂಪನ್ನ ಮದೀರ್ಘಸೂತ್ರ ಕ್ರಿಯಾವಿಧಿಜ್ಞ ವ್ಯಸನೇಯುಕ್ತ ಶರಂ ಕೃತಜ್ಞ ದೃಢಸಹೃದಂಚ ಲಕ್ಷ್ಮೀಘ್ನಯಂ ಯಾತಿ ನಿವಾಸಹೇತೋಃ || ಉತ್ಸಾಹಸಹಿತನ ವ್ಯಸನಗಳಲ್ಲಿ ಆಸಕ್ತನೂ ಆಗಿ ತಿಳಿವಳಿಕೆ ಯನ್ನು ಪಡೆದು ಕೆಲಸಗಳಲ್ಲಿ ಪ್ರಗಣ್ಯನಾಗಿ ಬೇಸರವಿಲ್ಲದೆ ಸ್ಥಿರಚಿ ತನಾಗಿ, ಚಿರಕ್ರಿಯನಲ್ಲದೆ ಸರ್ವಭೂತಸಮನೂ, ಮಿತಸತ್ಯಭಾಮಿ ಯ, ಪುಣ್ಯಕರ್ಮಗಳ ಮೇಲೆ ಬುದ್ದಿಯುಳ್ಳವನೂ, ಆಶ್ರಿತರಕ್ಷ ಕನೂ, ಶೂರನೂ, ಕೃತಜ್ಞನೂ, ಆದ ಪುರಷನನ್ನು ಲಕ್ಷ್ಮಿ ತನ್ನ