ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟ 84 ಪಂಚತಂತ್ರ ಕಥೆಗಳು, ಪ್ರಕ್ಕೆ ತಾನೇ ಹೊಂದುವಳು. ಕೆಲಸಮಾಡದೆ ಮೈಗಳ್ಳತನವುಳ್ಳವನಾಗಿ ಸಾಹಸವಿಲ್ಲದ ಪುರುಷನನ್ನು ಲಕ್ಷ್ಮಿ ಒಲಿಯಳು ಎಂದು ಹೇಳಲು, ಕೂರ್ಮವಿಂತೆಂದಿತು, ಎಲೆ ಹಿರಣ್ಯಕನೇ, ನೀನು ಅರವಿಲ್ಲದವನಾದರೂ ಪ್ರಜೋತ್ಸಾಹ ವುಳವನು. ಆದುದರಿಂದ ನಿನಗೇನೂ ಕಡಿಮೆಯಿಲ್ಲ. ಬುದ್ದಿವಂತನು ಒಂದುವೇಳೆ ಧನವಿಲ್ಲದವನಾದರೂ ಅವನಿಗೆ ಹೀನತೆ ಬಾರದು, ದೊಡ್ಡ ತನವೇ ಬರುವುದು, ಬುದ್ದಿಯಿಲ್ಲದವನಿಗೆ ತುಂಬ ಧನ ಬಂದರೂ ಅವನು ದೊಡ್ಡ ಮನುಷ್ಯನಾಗನು. "ಹೇಗೆಂದರೆ : ಸಿಂಹವು ಆಹಾರವಿಲ್ಲದೆ ಬಹಳ ಬಳಲಿದ್ದರೂ ಅದರ ಖ್ಯಾತಿ ಹೋಗಲಾರದು. ನಾಯನ್ನು ಚಿನ್ನದ ಒಡ ವೆಗಳಿಂದ ಅಲಂಕರಿಸಿ ಸಿಂಹಾಸನದ ಮೇಲೆ ಕುಳ್ಳಿರಿಸಿದರೂ ಅದಕ್ಕೆ ಖ್ಯಾತಿ ಬರಲಾರದು. ಕೌರವೂ, ರವೂ, ಉತ್ಸಾಹವೂ, ಸಾಹ ಸವೂ, ಶಕ್ತಿಯೂ, ಉಳ್ಳ ಪುರುಷನು ಸಮುದ್ರವನ್ನು ಗೋಪ್ಪಾದಕ್ಕೆ ಸಮಾನವಾಗಿ ಎಣಿಸುವನು ; ಮೇರು ಪರ್ವತವನ್ನು ಸುತ್ತಿಗೆ ಸಮಾನ ವಾಗಿ ನೋಡುವನು. ಅಂಥವನ ನಗರದಲ್ಲಿ ಸಂತೋಷಚಿತ್ತೆಯಾಗಿ ಲಕ್ಷ್ಮಿ ದೇವಿಯು ನಿಶ್ ಲೆಯಾಗಿ ವಾಸಮಾಡುವಳು. ಅಂತಹ ಪುಣ್ಯಪು ರುಷರು ಭೂಮಿಯಲ್ಲಿ ಬಹಳ ಹುಟ್ಟರು ; ಹುಟ್ಟಿದರೂ ನೂರಕ್ಕೆ ಸಾವಿ ರಕ್ಕೆ ಒಬ್ಬನು ಸುಜನರಿಂದ ಪೂಜಿಸಲ್ಪಟ್ಟವನಾಗಿ ಗಣನೆಗೆ ಬರುವನು, ಈ ಗುಣಗಳಿಲ್ಲದವನಲ್ಲಿ ಲಕ್ಷ್ಮಿ ಸೇರಳು. “ಉದ್ಯೋಗವಂತನಾದ ಮಹಾ ತನು ಮೇರು ಪರ್ವತದ ತುದಿಯನ್ನೂ ಪಾತಾಳದ ಆಳವನ್ನೂ ಸಮು ದ್ರದ ವಿಸ್ತೀರ್ಣವನ್ನೂ ಸ್ವಲ್ಪವಾಗಿ ಎಣಿಸುವನು-ಎನಲು, ಹಿರಣ್ಯಕ ನು -ಎಲೈ ಮಿತ್ರಮಂದರನೇ, ನೀನು ಹೇಳಿದ ನೀತಿ ವಚನಗಳನ್ನು ಕೇಳಿ ನನ್ನ ಮನಸ್ಸಿನಲ್ಲಿ ಇದ್ದ ವ್ಯಸನವೆಲ್ಲಾ ತೀರಿತು. ನೀನು ಧನ ವಂತನಾಗಿದ್ದರೂ ರವೆಯಷ್ಟಾದರೂ ಗರ್ವಪಡುವವನಲ್ಲ. ಮೇಘಗಳ ನೆರಳೂ, ದುಷ್ಟಜನರ ಪ್ರೀತಿಯ, ಯವನವೂ, ಸಂಪತ್ತೂ, ಸ್ವಲ್ಪ ಕಾಲವಿರುವುವೇ ಹೊರತು ಎಲ್ಲಾ ಕಾಲದಲ್ಲೂ ಇರವೆಂದು ದೊಡ್ಡವರು ಅವುಗಳಲ್ಲಿ ಮನಸ್ಸಿಡರು ಎಂದು ನುಡಿದನು.