ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಹೃಲ್ಲಾಭವು. 85 Generosity, ಅದನ್ನು ಕೇಳಿ ಕೂರ್ಮವು ಹಿರಣ್ಯಕನನ್ನು ನೋಡಿಯಾ ವನು ಹಂಸಗಳನ್ನು ಬೆಳ್ಳಗೆ ಮಾಡಿದನೋ, ಯಾವನು ಗಿಣಿಗಳನ್ನು ಹಚ್ಚಗೆ ಮಾಡಿದನೋ, ಯಾವನು ನವಿಲುಗಳನ್ನು ಚಿತ್ರವರ್ಣವುಳು ವುಗಳಾಗಿ ಮಾಡಿದನೋ ಅವನು ಸರ್ವಪ್ರಾಣಿಗಳಿಗೂ ಜೀವನವನ್ನು ಉಂಟುಮಾಡುತ್ತಾನೆ. ಹುಟ್ಟಿದಾಗಲೇ ಧನಸಂಪತ್ತುಗಳೊಡನೆ ಹುಟ್ಟಿದ ಮನುಷ್ಯನು ಒಬ್ಬನೂ ಇಲ್ಲ; ಉಂಟಾದ ಸಂಪತ್ತು ಗಳನ್ನೆಲ್ಲಾ ನೂರು ಸಂವತ್ಸರದ ತನಕ ವಿನೋದವಾಗಿ ಅನುಭವಿಸಿದವನೂ ಇಲ್ಲ. ಪೂರ್ವ ಜನ್ಮದಲ್ಲಿ ಒಬ್ಬರಿಗೆ ತಾನೇನ ಕೊಟ್ಟಿದ್ದನೋ ಅದು ಈ ಜನ್ಮದಲ್ಲಿ ತನಗೆ ಪ್ರಾಪ್ತವಾಗುವುದು. ಆದಕಾರಣ ತನ್ನ ಶಕ್ತಿಗೆ ತಕ್ಕಷ್ಟು ದಾನಮಾಡ ಬೇಕು, ದಾನಕ್ಕೆ ಸಮಾನವಾದ ನಿಕ್ಷೇಪವಿಲ್ಲ; ಸಂತೋಷಕ್ಕೆ ಸಮ ವಾವ ಸುಖವಿಲ್ಲ; ಸದಾಚಾರಕ್ಕೆ ಸರಿಯಾದ ಭೂಷಣವಿಲ್ಲ; ಆರೋ ಗ್ರಕ್ಕೆ ಈಡಾದ ಲಾಭವಿಲ್ಲ. ಏತಕ್ಕೆ ಬಹಳ ಮಾತುಗಳನ್ನಾಡಬೇಕು ? ನೀನೆಲ್ಲಿಗೂ ಹೋಗಬೇಡ, ನಾನೂ ನೀನೂ ಬಹಳ ಸಾಖ್ಯವುಳ್ಳವರಾಗಿ ಇಲ್ಲಿಯೇ ಇರೋಣ -ಎಂದಿತು, ಅದಕ್ಕೆ ತಟಸ್ಥನಾದ ಲಘುಪತನಕನಿಂತೆಂದನು-ಎಲೈ ಕೂರ್ಮ ರಾಜನೇ, ನೀನು ಸಮಸ್ತ ಜನರೂ ಕೊಂಡಾಡತಕ್ಕ ಗುಣಗಳುಳ್ಳವನು. ಇನ್ನು ಮೇಲೆ ನಿನ್ನ ಸ್ನೇಹಿತನನ್ನು ಆದರಿಸು, ಶ್ಲಾಸ್ಯಸ್ಪಏಕೋ ಭುವಿ ಮಾನವಾನಾಂ ಸ ಉತ್ತಮಸ್ಸತ್ಪುರುಷಸ್ಸಧನ್ಯಃ | ಯಸ್ಯಾರ್ಥಿನೋವಾ ಶರಣಾಗತೋವಾ ನಾಸಾ ವಿಭಿನ್ನಾ ವಿಮುಖಾಃ ಪ್ರಯಾಂತಿ | ದೊಡ್ಡ ಮನುಷ್ಯನಿಗೆ ಒಂದುವೇಳ ಕೇಡು ಬಂದರೆ ಆ ಕೇಡನ್ನು ಹೋಗಲಾಡಿಸುವುದಕ್ಕೆ ಅಷ್ಟು ದೊಡ್ಡವನಾದವನೇ ಹೊರತು ಅಲ್ಪನು ಶಕ್ತನಲ್ಲ; ಕೆಸರಿನಲ್ಲಿ ಇಳಿಯಬಿದ್ದ ಆನೆಯನ್ನು ಆನೆಗಳು ಎತ್ತಬೇಕೇ ಹೊರತು ಹೃದ್ರಮೃಗಗಳು ಎತ್ತಲಾಪುವೇ ?* ಬುದ್ದಿ ವಿಭವವುಳ್ಳವನು m'S "