ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 ಪಂಚತಂತ್ರ ಕಥಗಳು. ಒಂದಾನೊಂದುವೇಳ ದೈವವಶದಿಂದ ತನಗೆ ಆಪತ್ತು ಬಂದರೂ ವಿದ್ಯಾ ಸರು ತನ್ನನ್ನು ಹೊಗಳುವ ಹಾಗೆ ಆ ಆಪತ್ತನ್ನು ತಾಳಿಕೊಳ್ಳು ವನು. ತನ್ನ ನಂಟರೂ ಗೆಳಯರೂ ಆಪತ್ತನ್ನು ಹೊಂದಿ ತನ್ನ ಬಳಗೆ ಬಂದರೆ, ದೈರದಿಂದ ಅವರ ಆಪತ್ತನ್ನು ಪರಿಹರಿಸುವನು. ಯಾವನು ಧನಹೀನನಾದ ಮಿತ್ರನನ್ನು ಧನವಂತನಾಗಿ ಮಾಡುವನೋ, ಯಾವ ನನ್ನು ಯಾಚಿಸಿದವರೂ ಶರಣುಹೊಕ್ಕವರೂ ತಮ್ಮ ಕೋರಿಕೆಗಳು ನೆರವೇರಿ ಸುಖವಾಗಿ ಹೋಗುವರೋ, ಅವನೊಬ್ಬನೇ ಮನುಷ್ಯರಲ್ಲಿ ಶ್ಲಾಘ್ರನು. ವಾಯುವು ವನಗಳನ್ನೂ, ತುಂಬಿಗಳು ಹೂಗಳನ್ನೂ, ಹಂಸಗಳು ನೀರನ್ನೂ, ಪಕ್ಷಿಗಳು ಆಕಾಶವನ್ನೂ ಆಶ್ರಯಿಸಿದ ಹಾಗೆ ನಾವು ನಿನ್ನನ್ನು ಆಶ್ರಯಿಸಿದೆವು ಎಂದು ಹೇಳಲಾಗಿ, ಕೂರ್ಮವು ಸಂತೋಪಿಸಿತು, Hospitality, ಬಳಿಕ ಮಿತ್ರಮಂದರನೂ ಲಘುಪತನಕನೂ ಹಿರಣ್ಯಕನ ತಮ್ಮ ಲ್ಲಿ ತಾವು ಮಾತನಾಡುತ್ತಾ ಹೊತ್ತು ಕಳವ ಸಮಯದಲ್ಲಿ, ಒಂದು ಮೃ ಗವು ಬೇಟೆಗಾರನಿಗೆ ಬೆದರಿ ಓಡುತ್ತಾ ಅಲ್ಲಿಗೆ ಬಂದಿತು. ಅದನ್ನು ನೋಡಿ ಹೆದರಿ ಅವು ಮೂಲೆಗೊಂದರಂತೆ ಓಡಿಹೋದುವು. ಅವುಗಳಲ್ಲಿ ಕಾಗೆ ಆ ಬಳಿಯಲ್ಲಿದ್ದ ಮರದ ಮೇಲಕ್ಕೆ ಹಾರಿ ನಾಲ್ಕು ಕಡೆಯ ನೋಡಿ ಬೇಟೆ ಗಾರನ ಬಾಧೆಯಿಲ್ಲದೆ ಇರುವುದನ್ನು ತಿಳಿದು ಮಿತ್ರಮಂದರ ಹಿರಣ್ಯಕ ರನ್ನು ನೀವು ಹೆದರಬೇಡಿರಿ-ಎಂದು ಹೆಸರು ಹಿಡಿದು ಕೂಗಲು ; ಆ ಇಬ್ಬರೂ ಆ ಮರದ ಹತ್ತಿರಕ್ಕೆ ಬಂದು, ಭಯದಿಂದ ಗಡಗಡನೆ ನಡು ಗುತ್ತಿರುವ ಮೃಗವನ್ನು ನೋಡಿದುವು. ಅವರಲ್ಲಿ ಮಿತ್ರಮಂದರನು ಮೃಗದ ಸಂಗಡ-ಎಲೈ ಮೃಗೋತ್ತಮನೇ, ನಿನ್ನ ಹೆಸರೇನು ? ನೀನೆಲ್ಲಿಂದ ಬಂದೆ ? ಏತಕ್ಕೆ ಅಂಜಿದೆ ? ಆ ಕಡೆಯಲ್ಲಿ ಏನು ಸಂಭ ವಿಸಿತು ? ನೀನು ಬಂದುದರಿಂದ ನಮ್ಮ ದೊಡ್ಡವರೆಲ್ಲರೂ ಬಂದ ಹಾಗಿದೆ. ಆದುದರಿಂದ ಬೇಕಾದ ಆಹಾರವನ್ನು ನಾವಿರುವ ಸ್ಥಳದಲ್ಲಿ ತೆಗೆ ದುಕೊ, ನಿನ್ನ ಸಂಚಾರದಿಂದ ಈ ವನವನ್ನು ಅಲಂಕರಿಸು-ಎಂದು