ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88 ಪಂಚತಂತ್ರ ಕಥಗಳು. ಕರೆದುಕೊಂಡು ಬಾ, ನನ್ನ ಬಂಧನಗಳನ್ನು ಅವನು ಬಿಡಿಸುವನುಎಂದು ಹೇಳಲು, ಲಘುಪತನಕನು ಆಕಾಶಕ್ಕೆ ಹಾರಿ ಅತಿ ತರೆಯಾಗಿ ಹೋಗಿ ಮಂತ್ರಮಂದರ ಹಿರಣ್ಯಕರಿಗೆ ಚಿತ್ರಾಂಗನು ಉರಲಲ್ಲಿ ಬಿದ್ದು ದನ್ನು ತಿಳಿಸಿ ಹಿರಣ್ಯಕನನ್ನು ಕರೆದುಕೊಂಡು ಹೋಯಿತು. ಚಿತ್ರಾಂಗ ನನ್ನು ನೋಡಿ ಹಿರಣ್ಯಕನು-ಎಲೈ ಚಿತ್ರಾಂಗನೇ, ನೀನು ಬಹು ಬುದ್ದಿ ವಂತನು; ಬುದ್ದಿ ಯಿಲ್ಲದವನಂತೆ ಉರಲಲ್ಲಿ ಸಿಕ್ಕಿಕೊಂಡೆ! ಇದೇನು ? ಎನಲು, ಚಿಂತ್ರಾಂಗನು-ಎಲೈ ಸ್ನೇಹಿತನೇ, ಬೇಟೆಗಾರನು ಬಂದು ನೋಡುವುದಕ್ಕಿಂತ ಮುಂಚೆ ಈ ಉರನ್ನು ಕಚ್ಚಿ ತುಂಡಿಸಿದರೆ ಒಳ್ಳೆ ಯದು. ಅವನು ಬಂದ ಮೇಲೆ ಏನು ಸಂಭವಿಸಿತೋ --ಎಂದು ನುಡಿದನು. ಆ ಮಾತನ್ನು ಹಿರಣ್ಯಕನು ಕೇಳ-ನಿನಗೆ ಮೇಲುಕೋರಿ ಸಮಿಾಪಕ್ಕೆ ಬಂದೆನು. ನಾನು ಹತ್ತಿರದಲ್ಲಿರುವಾಗ ಬೇಡನಿಂದ ನಿನಗೆ ಯಾವಭಯವೂ ಬರಲಾರದು. ನಾನು ಕೇಳಿದುದಕ್ಕೆ ಉತ್ತರವನ್ನು ಹೇಳು ಎಂದನು. ಅದಕ್ಕೆ ಅಯ್ಯಾ, ನಾನು ಮುಂಚೆ ಒಂದು ಸಲ ಮೋಸಹೋಗಿ ಉರಲಲ್ಲಿ ಸಿಕ್ಕಿಕೊಂಡು ದೈವವಶದಿಂದ ಬದುಕಿದೆನು. ಈಗ ತಿರುಗಿ ಬಂಧನದಲ್ಲಿ ತಗುಲಿದೆನು, ದೈವಕ್ಷತವಾದ ಶುಭಾಶುಭಗ ಳನ್ನು ಹೋಗಲಾಡಿಸುವುದಕ್ಕೆ ನಮಗೆ ಶಕ್ತಿಯುಂಟೇ? ಎಂತಹವನಾ ದರೂ ತಪ್ಪಿ ಬದುಕಿದೆನೆನ್ನಕೂಡದು. ಪೂರ್ವಜನ್ಮದಲ್ಲಿ ಮಾಡಿದುದ ನ್ನೆಲ್ಲಾ ಅನುಭವಿಸಬೇಕೇ ಹೊರತು ಪರಿಹರಿಸಲಿಕ್ಕಾಗದು. ಇದಕ್ಕೆ ಚಿಂತಿಸ ಬೇಕಾದುದಿಲ್ಲ. ನನ್ನ ಪೂರ್ವವೃತ್ತಾಂತವನ್ನು ಕೇಳುಎಂದು ಚಿತ್ರಾಂಗನಿಂತೆಂದನು. The story of the Deer Chitranga. “ ನನ್ನ ಚಿಕ್ಕತನದಲ್ಲಿ ಎಂದರೆ ನಾನು ಆರು ತಿಂಗಳ ಮಗುವಾಗಿ ದ್ದಾಗ, ಒಂದು ದಿನ ನಮ್ಮ ಜಾತಿಯ ಮೃಗಗಳ ಸಂಗಡ ಸಂಚರಿ ಸುತ್ತಾ ಇರುವಲ್ಲಿ ಒಬ್ಬ ಬೇಟೆಗಾರನು ಬಂದನು. ಆಗ ನನ್ನ ಸಂಗಡ ಇದ್ದ ಮೃಗಗಳಲ್ಲಾ ಬೆದರಿ ಚದರಿ ಓಡಿಹೋದುವು. ನನಗೆ ಸಾಕಾ ದಷ್ಟು ಬಲವಿಲ್ಲದುದರಿಂದ, ನಾನು ಅವುಗಳ ಸಂಗಡ ಓಡಲಾರದೆ ಹಿಂದೆ