ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಜ್ಜಲಾಭವು 89 ಬಿದ್ದೆನು, ಅದನ್ನು ನೋಡಿ ಬೇಟೆಗಾರನು ಓಡಿ ಬಂದು ನನ್ನನ್ನು ಹಿಡಿದುಕೊಂಡು ಹಂಬುಗಳಿಂದ ಗಟ್ಟಿಯಾಗಿ ಕಟ್ಟಿ, ನಿಕ್ಷೇತುಕವಾದ ದಯೆಯಿಂದ ನನ್ನನ್ನು ಕೊಲ್ಲದೆ ಆ ದೇಶವನ್ನಾಳುತ್ತಿದ್ದ ರಾಜಕುಮಾರ ನಿಗೆ ಕಾಣಿಕೆಯಾಗಿ ಕೊಟ್ಟನು. ಆತನು ಅಂತಃಪುರಸ್ತಿ ಯರಿರುವ ಸ್ಥಲದಲ್ಲಿ ನನ್ನನ್ನು ಇಟ್ಟು ನನಗೆ ಮೇವನ್ನ ನೀರನ್ನೂ ಕೊಟ್ಟು ಚೆನ್ನಾಗಿ ವಿಚಾರಿಸುವಂತೆ ಏರ್ಪಾಡುಮಾಡಿ ಬಹು ಆರೈಕೆಯಾಗಿ ಸಾಕು ತಿದ್ದನು. ಹೀಗೆ ಬಹುಕಾಲವಿರಲಾಗಿ ಒಂದು ದಿನ ರಾತ್ರಿ ರಾಜಕು ಮಾರನು ಮಲಗಿರುವ ಸಮಯದಲ್ಲಿ ಮಿಂಚೂ ಗುಡುಗೂ ಬಹಳವಾಗಿ ಕಾಣಿಸಿ ಅಧಿಕವಾದ ಮಳ ಹೊಯ್ಯುತ್ತಿರುವಾಗ, ನಾನು ಅತಿ ಕುತೂಹ ಲದಿಂದ ಮನುಷ್ಯ ಭಾಷೆಯಲ್ಲಿ ಮಳೆಹನಿ ಬಿದ್ದು ಮೈಮೇಲೆ ಗಾಳಿ ಸೊಕಲಾಗಿ ಚಿಮ್ಮಿ ನೆಗೆಯುತ್ತಾ ಮೃಗಸಮೂಹದ ಹಿಂದೆ ಓಡುವ ಭಾಗ್ಯವು ನನಗೆ ವಿಂದು ಉಂಟಾದೀತೆ? ? -ಎಂದು ನುಡಿದೆನು. ಅದನ್ನು ರಾಜಕುಮಾರನು ಕೇಳಿ ನಾಲ್ಕು ಕಡೆಗೂ ನೋಡಿ ಅಲ್ಲಿ ಯಾರೂ ಇಲ್ಲದುವರಿಂದ ಆಶ್ಚರಪಟ್ಟು, ನನ್ನನ್ನು ನೋಡಿ ಈ ಮೃಗವು ಹೀಗೆ ನುಡಿಯಿತೆಂದು ನಿಶ್ಚಯಿಸಿ, ರಾತ್ರಿ ಎಚ್ಚರವಾಗಿದ್ದು, ಸೂರೋ ದಯವಾವ ಕೂಡಲೆ ಜೋಯಿಸರನ್ನು ಕರೆಯಿಸಿ ಈ ವೃತ್ತಾಂತವನ್ನು ಅವರ ಸಂಗಡ ಹೇಳಿದನು. ಅವರಲ್ಲೊಬ್ಬ ನು -ಪಶುಜಾತಿಗಳು

  • ೧ ಎ ಮಾನುಷಭಾಷೆಯನ್ನು ನುಡಿದರೆ ಅದನ್ನು ಅರಸರು ಕೇಳಕೂಡದು ; ಇದಕ್ಕೆ ಕೆಲವು ಜಪಗಳನ್ನೂ ಕೆಲವು ಹೋಮಗಳನ್ನೂ ಮಾಡಿ ಈ ಉತ್ಪಾತವನ್ನು ವಿವರಿಸಬೇಕು. ಇನ್ನು ಮೇಲೆ ಇದನ್ನು ಇಲ್ಲಿ ಇರಲೀಯದೆ ಅರಣ್ಯದಲ್ಲಿ ಬಿಟ್ಟು ಬರಬೇಕು ಎಂದು ಹೇಳಲು, ಅರಸನು ನನ್ನನ್ನು ಚುರಚುರನೆ ನೋಡಿ, ತನ್ನ ಸೇವಕರನ್ನು ಕರೆದು, -ಈ ಮೃಗವನ್ನು ಈಗಲೇ ತೆಗೆದುಕೊಂಡು ಹೋಗಿ ಕಾಡಿನಲ್ಲಿ ಬಿಟ್ಟು ಬನ್ನಿ, ತಡಮಾಡಬೇಡಿ ಎಂದು ಹೇಳಿದನು. ಆ ರಾಜಾಜ್ಞೆಯ ಪ್ರಕಾರ ಅವರು ಆಗಲೇ ನನ್ನನ್ನು ತೆಗೆದುಕೊಂಡು ಹೋಗಿ ಕಾಡಿನಲ್ಲಿ ಬಿಟ್ಟು ಬಿಟ್ಟರು. ಅಂದು ಆ ರೀತಿಯಲ್ಲಿ ಆಪತ್ತನ್ನು ಹೊಂದಿದೆನು. ಇಂದು