ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

90 ಪಂಚತಂತ್ರ ಕಥೆಗಳು. ಹೀಗೆ ಬಲೆಯಲ್ಲಿ ಸಿಕ್ಕಿಕೊಂಡೆನು. ದೈವಕೃತವನ್ನು ತಪ್ಪಿಸಲಿಕ್ಕೆ ಯಾರಿಂದಾದೀತು ? ” ಎಂದು ಚಿತ್ರಾಂಗನು ಹೇಳಿದನು. ಅಪ್ಪರಲ್ಲಿ ಕೂರರಾಜನು, ಚಿತ್ರಾಂಗಾದಿಗಳು ವಾಸಸ್ಥಾನಕ್ಕೆ ಬಾರದೆ ಇದ್ದುದರಿಂದ ಅಲ್ಲಿ ಏನು ಸಂಭವಿಸಿತೋ ಎಂದು ಚಿಂತಾಕ್ರಾಂತ ನಾಗಿ, ಹಿರಣ್ಯಕನು ಹೋದ ದಾರಿಗೆ ಬಂದನು. ಅವನನ್ನು ನೋಡಿ ಹಿರಣ್ಯಕನಿಂತೆಂದನು-ಎಲೈ ಮಿತ್ರಮಂದರನೇ, ನೀನು ನಮ್ಮ ಮೇಲಿನ ಪ್ರೀತಿಯಿಂದ ಇಲ್ಲಿಗೆ ಬಂದೆ. ನಮಗೆ ಅದು ಇಷ್ಟವೇ ಸರಿ. ಆದರೂ ಈಗ ಬೇಟೆಗಾರನು ಬರುವ ಹೊತ್ತಾಯಿತು. ಅವನಿಗೆ ಸಿಕ್ಕದೆ ನಾವು ಮೂವರೂ ಹೋಗಲಾರೆವು. ನೀನು ನೀರಿನಲ್ಲಾದರೆ ತರೆ ಯಾಗಿ ಓಡಬಲ್ಲೆ : ಮಿಟ್ಟೆನೆಲವಲ್ಲಿ ಒಂದಡಿಯಾದರೂ ಸಾಗಿ ಹೋಗ ಲಾರೆ. ಆದುದರಿಂದ ನೀನು ಇಲ್ಲಿಗೆ ಬಂದುದು ಅನುಚಿತವು-ಎನಲು, ಕರವು ಇಂತೆಂದಿತು. ದಯೆಯೂ ಸಿಕ್ತ ಪ್ರೀತಿಯ ಉಳ್ಳ ಇಜನವನ್ನು ಅಗಲಿದ ವನಿಗೆ ಆಇಷ್ಟಜನವನ್ನು ಯಾವಾಗ ನೋಡುವನೆಂದು ದೃಷ್ಟಿ ಚಲಿಸುತ್ತಿ ರುವುದು ; ಮನಸ್ಸು ವ್ಯಾಕುಲದಿಂದ ಎಲ್ಲಿಗೋ ಹೋಗುವುದು. ಒಳ್ಳೆ ಯ ಮನಸ್ಸು ಮತ್ರನ ಮೇಲೂ ಗುಣವತಿಯಾದ ಹೆಂಡತಿಯ ಮೇಲೂ ಪ್ರಯಾಸವನ್ನರಿತ ಪ್ರಭುವಿನ ಮೇಲೂ ಮನಸ್ಸು ಬಹಳ ಅನುರಾಗ ವುಳುದಾಗಿರುವುದು. ತನಗೇನು ಕಮ್ಮ ಬಂದರೂ ಅದು ಕಪ್ಪವಾಗಿ ತೋರದು - ಎಂದು ನುಡಿಯುತ್ತಿರುವ ಸಮಯದಲ್ಲಿ, ಯಮದೂತನ ಹಾಗೆ ಬೇಟೆಗಾರನು ಅಲ್ಲಿಗೆ ಬಂದನು. ಅವನನ್ನು ಕಾಣುತ್ತಲೆ ಹಿರಣ್ಯ ಕನು ಚಿತ್ರಾಂಗನ ಉರನ್ನು ಅತಿತೂರೆಯಾಗಿ ಕಚ್ಚಿ ತುಂಡಿಸಿ ತಾನೊಂದು ಬಿಲವಲ್ಲಿ ಹೊಕ್ಕನು. ಚಿತ್ರಾಂಗನು ಓಡಿ ಹೋವನು. ಲಘುಪತನಕನು ಹಾರಿ ಹೋದನು. ಅದನ್ನು ನೋಡಿ ಬೇಟೆಗಾರನು ಬಹಳ ವ್ಯಸನಪಟ್ಟು ಅಪ್ಪರಲ್ಲಿ ಮಂದಗತಿಯಾದ ಆಮೆಯನ್ನು ನೋಡಿ ಸ್ವಲ್ಪ ಸಂತೋಪಿಸಿ, ಅದನ್ನು ಹಿಡಿದುಕೊಂಡು ಬಿಲ್ಲಿನ ತುದಿಗೆ ಕಟ್ಟಿ ಕೊಂಡು ಹೋಗುತ್ತಿದ್ದನು.