ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಹೃಲಾಭವು. 91 D M Love of Friends, ಆಗ ಕಾಗೆಯ ಮೃಗವೋ ಇಲಿಯ ಆಮೆಗೆ ಬಂದ ಅವಸ್ಥೆ ಯನ್ನು ನೋಡಿ ಏನು ಮಾಡುವುದಕ್ಕೂ ತೋರದೆ ಕಣ್ಣೀರುಬಿಡುತ್ತಾ ಅದರ ಹಿಂದೆ ಹೋಗುತ್ತಿದ್ದುವು. ಹಿರಣ್ಯಕನು ತನಗೆ ಪ್ರಾಣಸ್ನೇಹಿ ತನಾದ ಕೂರರಾಜನು ಬೇಟೆಗಾರನ ಕೈಯಲ್ಲಿ ಸಿಕ್ಕು ಹೋದುದಕ್ಕೆ ಬಹಳ ಪರಿತಪಿಸಿ, ಸ್ವಲ್ಪ ಹೊತ್ತಿಗೆ ತಿಳಿವಳಿಕೆಯನ್ನು ತಂದುಕೊಂಡು ಚಿತ್ರಾಂಗ ಲಘುಪತನಕರನ್ನು ನೋಡಿ ಇಂತೆಂದನು:-ನಾವು ದುಃಖಿಸ ಕೆಲಸವಿಲ್ಲ; ಸಮುದ್ರದ ಸಾರದ ಹಾಗೆ ಒಂದು ದುಃಖದ ಸಾರವನ್ನು ಕಾಣಲಾರದೆ ಇರುವಾಗ ಎರಡನೆಯ ದುಃಖವು ಸಂಪ್ರಾಪ್ತವಾಯಿತು. ದುಃಖಪಡುವುದು ರೋಗಕ್ಕೆ ಹೇತುವು, ಕಾರಗಳಿಗೆ ಕೇಡು. ಆದುದ ರಿಂದ ನಾವು ಚಿಂತಿಸದೆ ಇರಬೇಕು. ಸ್ವಭಾವಜಂ ತು ಯತ್ರ ಭಾಗ್ಯನೈವಾಭಿಜಾಯತೇ! ತದಕೃತ್ರಿಮಸಾಹಾರ ಮಾಪತೃಪಿ ನ ಮುಂಚತಿ || ತಕ್ಕ ಮಿತ್ರನು ಅದೃಷ್ಟ್ಯವುಳ್ಳವನಿಗೆ ಸಿಕ್ಕುವನಲ್ಲದೆ ಅದೃಷ್ಟ್ಯ ವಿಲ್ಲದವನಿಗೆ ಸಿಕ್ಕನು. ಅಂತಹ ಮಿತ್ರನು ಆಪತ್ಕಾಲದಲ್ಲಿ ಕಾಯದೆ ಕೈಬಿಡನು, ಕಪಟಪ್ಪಭಾವವುಳ ಮಿತ್ರನು ಮೈತ್ರಿಯುಳ್ಳವನ ಹಾಗೆ ಮೇಲಕ್ಕೆ ನಟಿಸುವನು ; ಕೇಡೇನಾದರೂ ಬಂದಾಗ ಕೈಬಿಡುವನು. ಮಿತ್ರನಲ್ಲಿಟ್ಟ ನಂಬುಗೆಯನ್ನು ತನ್ನ ತಾಯಿಯ ಮೇಲೂ ತಂದೆಯು ಮೇಲೂ ಹೆಂಡತಿಯ ಮೇಲೂ ಒಡಹುಟ್ಟಿದವರ ಮೇಲೂ ಮಗನ ಮೇಲೂ ಇತರರ ಮೇಲೂ ಪುರುಷನು ಇಡನು, ಪೂರದಲ್ಲಿ ತಾವು ಮಾಡಿಕೊಂಡ ಕರಗಳಿಂದ ಒಂದು ಕಾಲಾಂತರದಲ್ಲಿ ಶುಭಾಶುಭ ಫಲ ಗಳನ್ನು ಅನುಭವಿಸುವಂತೆ ಮಾಡುವ ಅವಸ್ತಾ ಭೇದಗಳು, ಒಂದು ಜನ್ಮ ಹೋಗಿ ಮತ್ತೊಂದು ಜನ್ಮ ಬರುವ ಹಾಗೆ ಮನುಷ್ಯರಿಗೆ ಬರುತ್ತಾ ಇರುವುವು. ಕಾಯನ್ನ ಹಿತಾಸಾಯುಃ ಸಂಪದಃ ಪರಮಾಪದಾಂ | ಸಮಾಗಮಾಸ್ವಾಸಗಮಾ ಸ್ಪಮುತ್ಪಾದಿಭಂಗುರಂ ||