ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

92 ಪಂಚತಂತ್ರ ಕಥೆಗಳು. ಕೋಕಾರಾತಿಭಯತ್ರಾಣಿ ಪ್ರೀತಿ ವಿಜ್ರಂಭಭಾಜನಂ || ಕೇನ ರತ್ನ ಮಿದಂ ಸೃಷ್ಟಂ ಮಿತ್ರ ಮಿತ್ಯಹರದ್ವಯ೦ || ದೇಹಕ್ಕೆ ಯಾವಾಗಲೂ ಅಪಾಯವು ಸನ್ನಿಹಿತವಾಗಿರುವುದು. ಸಂಪತ್ತಿನ ಹಿಂದೆ ಆಪತ್ತುಗಳು ಬರುತ್ತಿರುವುವು. `ಕಟಕ್ಕೆ ಸಂಗ ಡಲೇ ಅಗಲಿಕೆ ಸಂಭವಿಸುವುದು. ಉತ್ಪತ್ತಿಯುಳ್ಳ ಸರವೂ ನಾಶನ ವನ್ನುಳುದಾಗಿ ಇರುವುದು, ಗಾಯವಾದ ಕಡೆಯಲ್ಲಿ ಗಾಯತಾಕು ವುದನ್ನೂ, ಆಹಾರವಿಲ್ಲದಾಗ ದೇಹವನ್ನು ಜಠರಾಗ್ನಿ ಕಶಪಡಿಸುವು ದನ್ನೂ, ಆಪತ್ತುಗಳು ಬಂದಾಗ ವೈರಗಳು ಹುಟ್ಟುವುದನ್ನೂ, ದುಃಖ ಗಳು ಉಂಟಾದಾಗ ಅನರ್ಥಗಳು ಸಂಭವಿಸುವುದನ್ನೂ, ದೇಹ ಧಾರಿಗ ಆಗೆ ನಿವಾರಿಸಲಾದೀತೇ? ಶೋಕವನ್ನೂ ಶತ್ರುಭಯವನ್ನೂ ಹೋಗ ಲಾಡಿಸಿ ರಕ್ಷಿಸತಕ್ಕದಾಗಿ, ಸಂತೋಷಕ್ಕೂ ನಂಬುಗೆಗೂ ಸು ನಭೂತ ವಾಗಿ, ಅಮೃತಸಮಾನವಾದ ಮಿತ್ರವೆಂಬ ಅಕ್ಷರ ದಯವನ್ನು ಸೃಜೆ ಸಿದ ಪುಣ್ಯಾತ್ಯನಾರೋ! ಆಪುಣ್ಯಾತ್ಮನೇ ಈ ಬೇಡನು ಈ ಕಾಡನ್ನು ದಾಟಿ ಹೋಗುವುದಕ್ಕಿಂತ ಮುಂಚೆ ತೊರೆಯಾಗಿ ನಮ್ಮ ಸ್ನೇಹಿತನನ್ನೂ ಬಿಡಿಸುವುದಕ್ಕೆ ಉಪಾಯವನ್ನು ತೋರಿಸಬೇಕು. ಇವನು ಈ ಕಾಡನ್ನು ದಾಟ ದೂರಕ್ಕೆ ಹೋದರೆ ಎಂತಹವರೂ ಬಿಡಿಸಲಾರರು ಎಂದನು, ಚಿತ್ರಾಂಗ ಅಘುಪತನಕರು ಮಿತ್ರಮಂದರನಿಗೆ ಸಂಭವಿಸಿದ ಆಪತ್ತಿಗೆ ಹೆದರಿ ಮನಸ್ಸಿನಲ್ಲಿ ಕಳವಳಗೊಂಡು ಮಾಡಬೇಕಾದ ಉಪಾಯವೇನೂ ತೋರದೆ ಸ್ನೇಹಿತನನ್ನು ನೆನೆಮಕೊಳ್ಳುತಾ-ದುಖಃಸಮುದ್ರದಲ್ಲಿ ಮುಳ ಗಿರುವ ನಮಗೇನು ಬುದ್ದಿ ಹೇಳುತ್ತೀಯೆ ? ಉದ್ಧವೂ ದಪ್ಪವೂ ಚೆಲುವಿಕೆಯ ಬಲವೂ "ಉಳ್ಳ ಈರಿವುಳ್ಳವನಾಗಿದ್ದರೂ ಜಡಬುದ್ದಿ ಯಾದರೆ ಅವನು ತೃಣಕ್ಕಿಂತ ಕಡೆ ; ಅವನ ಹುಟ್ಟು ನಿಪ್ಪಲವು. ನಮಗಿಂತ ಬುದ್ದಿಯಲ್ಲಿ ಅಧಿಕನಾದುದರಿಂದ ನಿನ್ನನ್ನು ಕೋರಿದೆವು. 'ಈಗ ನಾವು ಮಾಡಬೇಕಾದ ಕಾರವೇನು ? ಹೇಳು ಎಂದು ಹಿರಣ್ಯ ಕನನ್ನು ಕೇಳಿದರು.