ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮುಚ್ಚಲಾಭವು. 93 The plan adopted by the Rat to free the Tortoise. ಅದಕ್ಕೆ ಹಿರಣ್ಯಕನು ಅವರನ್ನು ನೋಡಿ ನಾನು ಅವಶ್ಯವಾಗಿ ಮಾಡಬೇಕಾದ ಕಾರಕ್ಕೆ ನೀವಿಬ್ಬೊಂದು ಬೇಡಿಕೊಳ್ಳಬೇಕಾದುದೇ ನು? -ಎಂದು ನುಡಿದು, ಸ್ವಲ್ಪಹೊತ್ತು ಆಲೋಚಿಸಿ ಕಾರವನ್ನು ನಿಶ್ಚ ಯಿಸಿ-ಎಲೈ ಚಿತ್ರಾಂಗಾ, ನೀನು ಬೇಟೆಗಾರನಿಗೆ ಕಾಣಿಸಿಕೊಳ್ಳದೆ ಮುಂದಾಗಿ ಹೋಗಿ, ಅವನು ಬರುವ ಮಾರ್ಗದಲ್ಲಿ ಒಂದು ಮಡುವಿನ ಬಳಿಯಲ್ಲಿ ಸತ್ಯವನಹಾಗೆ ಕದಲದೆ ಮಲಗಿಕೊಂಡು, ಕಾಲುಗಳನ್ನು ಚಾಚಿಕೊಂಡು, ಕಣ್ಣುಗಳನ್ನು ಸ್ವಲ್ಪ ಮುಚ್ಚಿ ಕೊಂಡಿರಬೇಕು. ಎಲೆ ಅಘುಪತನಕನೇ, ನೀನು ಚಿತ್ರಾಂಗನ ಮೇಲೆ ಕುಳಿತು ಕಣು ಗಳನ್ನು ಚುಚಿ ತಿನ್ನುವವನ ಹಾಗೆ ಮೆಲ್ಲಗೆ ನೋಯಿಸದೆ ಕಣುಗಳ ಮೇಲೆ ಚುಚ್ಚು ತಾ ಕೂಗುತ್ತಾ ಇರಬೇಕು. ಇಷ್ಟರಲ್ಲಿ `ಬೇಟೆಗಾರನು ಬಂದು ಮೃಗವು ಸತ್ತು ಬಿದ್ದಿದೆ ಎಂದು ತಿಳಿದುಕೊಂಡು, ಸಂತೋ ಸಿ ಮಿತ್ರಮಂದರನನ್ನು ಬಿಗಿದು ಕಟ್ಟಿರುವ ಬಿಲ್ಲನ್ನು ಅಲ್ಲಿ ನೆಲದಮೇಲೆ ಇರಿಸಿ ಮಡುವಿನ ಹತ್ತಿರಕ್ಕೆ ಬರುವನು. ಆಗ ನಾನು ಬೇಟೆಗಾರನ ಹಿಂದೆ ಬರುತ್ತಾ ಇದ್ದು, ಅವನು ಬಿಲ್ಲನ್ನು ಕೆಳಗೆ ಇಟ್ಟ ಕೂಡಲೇ ಮಿತ್ರ ಮಂದರನ ಕಟ್ಟಡ ಕಟ್ಟನ್ನು ಕಚ್ಚಿ ಬಿಡುವೆನು. ಆಗ ಮಿತ್ರಮಂದರನು ಮಡುವಿನಲ್ಲಿ ಪ್ರವೇಶಿಸುವನು, ನಾನು ಬಿಲದಲ್ಲಿ ಹೋಗುವನು, ನೀವು ಓಡಬೇಕು ಎಂದು ಹೇಳಿದನು. ಆಗ ಚಿತ್ರಾಂಗ ಲಘುಪತನಕರು ಹಿರಣ್ಯಕನ ಉಪಾಯಕ್ಕೆ ಬಹಳ ಸಂತೋಷಿಸಿ ಅದೇಪಕಾರ ಮಾಡಿದರು, ಕಡಿಮೆ ಕಾರವೆಲ್ಲಾ ಆಲೋ ಚಿಸಿದ ಪ್ರಕಾರವೇ ನಡೆಯಿತು. ಆಗ ಬೇಟೆಗಾರನು ಚಿಂತಾಕ್ರಾಂತ ನಾಗಿ ಮೆಲ್ಲಮೆಲ್ಲಗೆ ತನ್ನ ಮನೆಗೆ ಹೋದನು. ತರುವಾಯ ಕಾಕ ಕೂರ ಮೃಗ ಮೂಷಿಕಗಳು ಸ್ವಸ್ಥಾನಕ್ಕೆ ಹೋಗಿ ಮುಂಚಿನ ಹಾಗೆ ಅನ್ನೋನ್ಯ ಸ್ನೇಹವುಳುವಾಗಿ ಇದ್ದುವು. ಎಂದು ವಿಷ್ಣು ಶರನು ಹೇಳಿದ ಸುಹೃಲ್ಲಾಭವನ್ನು ಕೇಳಿ ರಾಜಪುತ್ರರು ಸಂತೋಷವನ್ನು ಹೊಂದಿದರು. ಒ