ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SECTION III.
INVETERATE ENMITY.
ಸ೦ಧಿ ವಿಗ್ರಹವವು.

To depend upon an enemy is ruinous The Owls and the Crows. * ಶತ್ರುವಾದವನು ತನ್ನ ಕೆಲಸಕ್ಕಾಗಿ ಬಹಳ ಸ್ನೇಹಮಾಡಿದರೂ ಅವನನ್ನು ನಂಬಕೂಡದು; ನಂಬಿದರೆ ಅವನು ನಂಬಿದವನಿಗೆ ತಪ್ಪದೆ ಕೇಡುಮಾಡುವನು. ಕಾಗೆಗಳು ಗೂಗೆಗಳನ್ನು ನಂಬಿಸಿ ಅವುಗಳು ಗುಹೆಯಲ್ಲಿದ್ದ ಸಮಯವನ್ನು ನೋಡಿಕೊಂಡಿದ್ದು ಬಾಗಿಲಲ್ಲಿ ಬೆಂಕಿ ಹಾಕಿ ಕಪಟದಿಂದ ಅವುಗಳನ್ನೆಲ್ಲಾ ಕೊಂದುವು " ಎಂದು ವಿಷ್ಣು ಶರನು ಹೇಳಿದನು. ಅದನ್ನು ರಾಜಕುಮಾರರು ಕೇಳ-ಕಾಗೆಗಳು ಗೂಗೆಗಳನ್ನು ಹೇಗೆ ನಂಬಿಸಿದುವು? ಅವುಗಳನ್ನೆಲ್ಲಾ ಹೇಗೆ ಕೊಂದುವು? ನಮಗೆ ಸ್ಪಷ್ಟವಾಗಿ ಹೇಳಬೇಕು ಎನಲು, ವಿಷ್ಣು ಶರನಿಂತೆಂದನು. ಒಂದು ಅಡವಿಯಲ್ಲಿ ದೊಡ್ಡ ಕೊಂಬೆಗಳಿಂದ ಭೂಮಿಯನ್ನೂ ಆಕಾಶವನ್ನೂ ದಿಕ್ಕುಗಳನ್ನೂ ಆಕ್ರಮಿಸಿ, ಸೂರಕಿರಣಗಳು ಪ್ರವೇಶಿ ಸಕೂಡದ ಎಲೆಯ ಜೊಂಪೆಗಳಿಂದ ಪೂರ್ಣವಾಗಿ, ನೀರಿನೊಂದಿಗೆ ಕೂಡಿಕೊಂಡ ಮೇಘದ ರೂಪವನ್ನು ಧರಿಸಿ, ನೋಡುವವರಿಗೆ ಆಕ್ಷರ ಕರವಾಗಿ, ಮಹಾಸರಗಳಿಗೂ ಸಮಸ್ತ ಪಕ್ಷಿಗಳಿಗೂ ಆಶ್ರಯವಾದ ಒಂದು ಆಲದಮರವುಂಟು. ಅದರಲ್ಲಿ ಅನೇಕ ವಾಯಸಗಳು ತನ್ನನ್ನು ಓಲೈಸಲು, ಶತ್ರುಗಳನ್ನು ಸಂಹರಿಸುವುದರಲ್ಲಿ ನಿಪುಣನಾದ ಮೇಘವರ್ಣ ಆ D