ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿವಿಗ್ರಹವು. 95 ನೆಂಬ ಹೆಸರುಳ್ಳ ವಾಯಸರಾಜನು ವಾಸಮಾಡುತ್ತಿರುವನು. ವಾಯಸ ಗಳಿಗೆ ನಿವಾಸವಾದ ಆಲದಮರಕ್ಕೆ ಬಹಳ ದೂರವಲ್ಲದ ಒಂದು ಬೆಟ್ಟದ ಗವಿಯಲ್ಲಿ ಉಪಮರ್ದನೆಂಬ ಹೆಸರುಳ್ಳ ಉಲೂಕರಾಜನು ಅನೇಕ ಸ್ವಜಾತಿ ಪಕ್ಷಿಗಳು ತನ್ನನ್ನು ಓಲೈಸಲಾಗಿ ವಾಸಮಾಡುತ್ತಿರುವನು, ಆತನು ಒಂದು ದಿನ ರಾತ್ರಿವೇಳೆ ತನ್ನ ಮಂತ್ರಿಗಳನ್ನು ಕರೆದು ಅವರ ಸಂಗಡ ಇಂತೆಂದನು. The Crows destroyed by Owls. ( ಕಾಗೆಗಳಿಗೂ ನಮಗೂ ವೈರವು ಸಹಜವಾದುದರಿಂದ ಸಮಯ ನೋಡಿ ನಾವು ಕಾಗೆಗಳನ್ನು ಕೊಲ್ಲಬೇಕು. ನೀವು ನಿಮ್ಮ ಸೇನೆಗೆ ಳನ್ನು ಕೂಡಿಸಿ ತೆಗೆದುಕೊಂಡು ಬನ್ನಿರಿ” ಎಂದು ಹೇಳಲು, ಅವರು ಹಾಗೆಯೇ ಮಾಡಿದರು. ಆಗ ಗೂಗೆಗಳಲ್ಲಾ ಯಮಕಿಂಕರರ ಸಮ ಹದ ಹಾಗೆ ದಂಡುಹೊರಟು ನಡೆಯುತ್ತಿರುವಾಗ, ಉಪಮರ್ದನು ಅರ್ಧ ರಾತ್ರಿವೇಳೆಯಲ್ಲಿ ಮತಿಗಳೊಡನೆಯೂ ಸೇನೆಗಳಡನೆಯೂ ಕಾಗೆಗಳ ರುವ ಆಲದ ಮರದ ಹತ್ತಿರಕ್ಕೆ ಹೋಗಿ ಕೆಲವು ಸೇನೆಗಳನ್ನು ಆ ಮರದ ಸುತ್ತೂ ನಿಲ್ಲಿಸಿ, ಕೆಲವು ದಂಡಿನ ಸಂಗಡ ಗಿಡದ ಮೇಲಕ್ಕೇರಿ, ಅಧಿಕ ನಿದ್ರೆಯಿಂದ ಕಾಗೆಗಳು ಮೈಮರೆತಿರುವುದನ್ನು ನೋಡಿ, ಕೆಲವನ್ನು ಕತ್ತು ಕಚ್ಚಿ, ಕೆಲವನ್ನು ಹೊಟ್ಟೆ ಸೀಳಿ, ಮತ್ತೂ ಅನೇಕ ಪ್ರಕಾರ ವಾಗಿ ಕಾಗೆಗಳನ್ನು ನಾಶಮಾಡಿ, ಮುಂಚೆ ಬಹು ಕೋಲಾಹಲ ಧ್ವನಿ ಯೊಂದಿಗೆ ಕೂಡಿಕೊಂಡಿದ್ದ ಆಲದ ಮರವು ನಿಶ್ಚಬ್ಬವಾಗಿರುವುದನ್ನು ನೋಡಿ ಶತ್ರುಗಳನ್ನು ವಿಶೇಷವಾಗಿ ಕೊಂದೆವೆಂದು ಸಂತೋಷಿಸಿ ಗೂಗೆಗಳೊಡನೆ ನಿಜನಿವಾಸಕ್ಕೆ ಹೋದನು. ಅಂತಹ ಆಪತ್ಕಾಲದಲ್ಲಿ ಮೇಘವರ್ಣನು ಒಂದು ಪೊಟರೆ ಯಲ್ಲಿ ಅವಿತುಕೊಂಡಿದ್ದು, ಸೂರೋದಯವಾದ ಮೇಲೆ ಹೊರಗೆ ಬಂದು ಕಾಗೆಯ ಕುಲಕ್ಕೆ ಬಂದ ಆಪತ್ತನ್ನು ಚಿಂತಿಸುತ್ತಾ ಇದ್ದನು, ಆ ಸಮ ಯುವಲ್ಲಿ ಆತನ ಕುಲಕ್ರಮಾಗತರಾದ ಮಂತ್ರಿಗಳು, ಉದ್ದೀಪಿ, ಸಂದೀಪಿ,