ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9 ಪಂಚತಂತ್ರ ಕಥೆಗಳು, ಆದೀಪಿ, ಪೋದ್ದೀಪಿ, ಚಿರಂಜೀವಿ ಎಂಬವರು ಐದು ಮಂದಿಯ ಮೊದ ಲಿನ ರಾತ್ರಿ ಹೇಗೋ ತಪ್ಪಿಸಿಕೊಂಡು ಬದುಕಿ ವಾಯಸರಾಜನ ಹತ್ತಿ ರಕ್ಕೆ ಬಂದರು. ಆಗ ಮೇಘವರ್ಣನು ಬಹಳ ವ್ಯಸನದಿಂದ ಅವರನ್ನು ನೋಡಿ-ಅರಸನಿಲ್ಲದ ಮಂತ್ರಿಗಳು ಎಷ್ಟು ಮಂದಿ ಇದ್ದರೂ ಕೆಲಸಕ್ಕೆ ಬಾರರು, ಮಂತ್ರಿಗಳಿಲ್ಲದ ಅರಸನು ಮೃತನಿಗೆ ಸಮಾನನು. ದೈವ ವಶದಿಂದ ನೀವೂ ನಾನೂ ಹಗೆಗಳ ಕೈಯಲ್ಲಿ ಸಿಕ್ಕದೆ ತಪ್ಪಿಸಿಕೊಂಡವು. ನಿಮ್ಮ ಬುದ್ದಿ ಬಲದಿಂದಲೂ ನನ್ನ ಭುಜಬಲದಿಂದಲೂ ಇಂದಿನವರೆಗೆ ಪ್ರಬಲರಾಗಿದ್ದು ಕಡೆಯಲ್ಲಿ ಗೂಗೆಗಳಿಂದ ಹೀಗಾದೆವು. ಇನ್ನು ಮೇಲೆ ನಾವು ಮಾಡಬೇಕಾದುದೇನು ?-ಎಂದು ನುಡಿದನು. Council of Revenge. ಅದಕ್ಕೆ ಉದ್ದೀಪಿ ಎಂಬ ಮಂತ್ರಿಯು - ಬಲವಂತನಾದ ಶತ್ರುವಿನ ಸಮಿಾಪವನ್ನು ಬಿಟ್ಟು ಹೋಗಿ ಬಲವಂತನಾದ ಮತ್ತೊಬ್ಬನೊಂದಿಗೆ ಸೇರಿಕೊಂಡು ಇರುವುದು ಒಂದು ; ಸ್ಥಳವನ್ನು ಬಿಟ್ಟುಬಿಟ್ಟು ಅಸಾಧ್ಯ ವಾದ ದುರ್ಗದಲ್ಲಿ ಪ್ರವೇಶಿಸಿ ಇರುವುದೊಂದು; ದೂರದೇಶಕ್ಕೆ ಹೋಗಿ ಅಲ್ಲಿ ಅಡಗಿರುವುದೊಂದು; ಈ ಮೂರು ಉಪಾಯಗಳು ನನಗೆ ತೋರಿ ದವು. ಇನ್ನು ನಿಮ್ಮ ಚಿತ್ರ ಎಂದು ನುಡಿಯಲು, ಕೇಳಿ ಆತನು ಸಂದೀಪಿಯನ್ನು ನೋಡಿ ನಿನಗೇನು ತೋರುತ್ತದೆ ಎಂದು ಕೇಳಿದನು. ಸಂದೀಪಿ ಮೊದಲಲ್ಲಿ ತಮ್ಮ ಸಂಗಡ ಉದ್ದೀಪಿ ಹೇಳಿದ ಮೂರು ಪಕ್ಷ ಗಳೂ ಸರಿಯೆ, ಆದರೆ ಅವುಗಳಲ್ಲಿ ಸ್ಥಾನತ್ಯಾಗವು ಸಂಭವಿಸುತ್ತದೆ. ರೆಪಟ್ಟು ಸ್ವಾನತ್ಯಾಗ ಮಾಡಕೂಡದು.* ಏತಕ್ಕೆಂದರೆ, ತಾನಿದ್ದ ಸ್ಥಳ ದಲ್ಲೇ ಇದ್ದರೆ ಅನುಕೂಲವಾಗಿ ಕಾರಗಳು ಸಿದ್ದಿ ಸುವುವು, ಆಡಿಗೆ ಕೆಚ್ಚಲಿನ ಮೊಲೆಗಳಲ್ಲಿ ಹಾಲಿರುವ ಹಾಗೆ ಕುತ್ತಿಗೆಯ ಮೊಲೆಗಳಲ್ಲಿ ಹಾಲು ಉಂಟೆ ? ತನ್ನ ಸಾನದಲ್ಲಿ ಪ್ರಮಾದವಿಲ್ಲದೆ ನಿಂತ ಅರಸನಿಗೆ ಜಯವುಂಟಾಗುವುದು ಶಕ್ಯವು. ನಾಯಿಯಕೂಡ ತನ್ನನ್ನು ಸಾಕಿದ ಮನೆಯಲ್ಲಿದ್ದು ಆ ಬಾಗಿಲಿಗೆ ಎಷ್ಟು ಮಂದಿ ಬಂದರೂ ಸ್ಥಾನಬಲದಿಂದ ಎಲ್ಲರನ್ನೂ ಗೆಲ್ಲುತ್ತದೆ. ಆದಕಾರಣ ನಮ್ಮ ನೆಲೆಯನ್ನು ಬಿಡದೆ ಕಾಲ ಒ