ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಸಂಧಿವಿಗ್ರಹವು. 97 ವನ್ನು ಕಳಯುತ್ತಿದ್ದು ನಮಗೆ ಬಲವುಂಟಾದಾಗ ಒಂದು ಉಪಾಯ ವನ್ನು ಹುಡುಕಿ ತತ್ತುಗಳನ್ನು ಜಯಿಸಬೇಕು ಎಂದು ಮಹಾವಿನ ಯದಿಂದ ನುಡಿದನು. ಆ ಮೇಲೆ ಮೇಘವರ್ಣನು ಆದೀಪಿಯನ್ನು ನೋಡಿ..ನಿನಗೇನು ತೋರುತ್ತದೆ ಎಂದು ಕೇಳಿದನು. ಆದೀಪಿ-ಬಾಲರನ್ನೂ ವೃದ್ದ ರನ್ನೂ ಸಿ ಯರನ್ನ ಸಾಮಗ್ರಿಗಳನ್ನೂ ಬಿಟ್ಟು ಹೋಗುವುದು ಅಕ ಕವು ತೆಗೆದುಕೊಂಡು ಹೋಗುವುದು ಮತ್ತಷ್ಟು ಅಶಕ್ಯವು, ಸಂಧಿ ಮಾಡುವುದು ಯುಕ್ತವು. ಬಲವಂತನೊಂದಿಗೆ ಸಂಧಿಮಾಡುವುದು ಬಹಳ ಮೇಲು. ಆದುದರಿಂದ ನಾವು ಎಲ್ಲರ ಕ್ಷೇಮಾರ್ಥವಾಗಿ ಶತ್ರುವಿನ ಸಂಗಡ ಚೆನ್ನಾಗಿ ಸಂಧಿಮಾಡಿ ಕೂಡಿ ಆರೋಣ-ಎನಲು, ಮೇಘವರನು ಪೋದ್ದೀಪಿಯನ್ನು ನೋಡಿ-ನೀನೇನು ಹೇಳುತ್ತೀಯೆ-ಎಂದನು. ಅದಕ್ಕೆ ಪೋದ್ದೀಪಿ-ಗೂಗೆಗಳಿಗೆ ರಾತ್ರಿಯಲ್ಲೇ ಹೊರತು ಹಗಲು ಕಣ್ಣು ಕಾಣಿಸುವುದಿಲ್ಲ; ನಮಗೆ ಹಗಲಿನಲ್ಲಿ ಹೊರತು ರಾತ್ರಿ ಕಾಣಿ ಸುವುದಿಲ್ಲ. ಆದಕಾರಣ ದೂತನನ್ನು ಕಳುಹಿಸುವುದು ಹೇಗೆ ? ಸಂಧಿ ಯಾಗುವುದು ಹೇಗೆ ? ಅವು ರಾತ್ರಿ ಬಂದು ನಮ್ಮ ಮೇಲೆ ಬಿದ್ದು 'ಕೊಂದುವು ; ನಾವು ಹಗಲು ಹೋಗಿ ಅವುಗಳ ಮೇಲೆ ಬಿದ್ದುಕೊ ಲೋಣ-ಎಂದನು. ಆಗ ಮೇಘವರನು ಚಿರಂಜೀವಿಯನ್ನು ನೋಡಿ -ನೀನು ಸಕಲ ನೀತಿಶಾಸ್ತ್ರ ಗಳನ್ನೂ ತಿಳಿದವನು, ಈಗ ಮಾಡ ಬೇಕಾದ ಕಾರಣವನ್ನು ಚೆನ್ನಾಗಿ ಆಲೋಚಿಸಿ ಹೇಳಬೇಕು-ಎನಲು, ಚಿರಂಜೀವಿ ಇಂತೆಂದನು. ಇವರೆಲ್ಲರೂ ಪರಮಾಪ್ತರು; ಜಾಣರು. ನೀತಿಶಾಸ್ತ್ರ ದಲ್ಲಿ ಇವರಿಗಿಂತ ಹೆಚ್ಚು ತಿಳದವರಿಲ್ಲ. ಆದರೂ ನನಗೆ ತಿಳಿದ ಮಟ್ಟಿಗೆ ನಾನು ಬಿನ್ನವಿಸುತ್ತೇನೆ. ಇವರೆಲ್ಲರೂ ನಂಬಿಕೆಗೆ ಪಾತ್ರರು. ಮಂತ್ರವು ಆಶ್ವಪರಂಪರೆಯಿಂದ ಭೇದಿಸದಂತೆ ರಕ್ಷಿಸಲ್ಪಡದೆ ಹೋದರೆ ಸಮಸ್ಯ ಕಾರಗಳಿಗೂ ವಿಘ್ನವು ಬರುವುದು. ವಿಘ್ನ ಬಂದರೆ ರಾಜ್ಯವು ವೃದ್ಧಿ ಹೊಂದದು. ಆದುದರಿಂದ ಅರಸರಿಗೆ ಮಂತ್ರರಹಣವು ಮುಖ್ಯ