ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

98 ಪಂಚತಂತ್ರ ಕಥಗಳು. ಈವು, ಸಂಧಿ, ವಿಗ್ರಹ, ಯಾನ, ಆಸನ, ದೈಧ, ಆಶ್ರಯವೆಂಬ ಪಡ್ಡು ಣಗಳನ್ನರಿತು, ಕರಾರಂಭೋಪಾಯ, ಪುರುಷದ್ರವ್ಯ ಸಂಪತ್ತಿ, ದೇಶಕಾಲವಿಭಾಗ, ವಿನಿಪಾತ ಪ್ರತೀಕಾರ, ಕಾರೈಸಿದ್ದಿ ಎಂಬ ಪಂಚಾಂಗ ಗಳನ್ನು ತಿಳಿದವನಾಗಿ, ಸಾಮ, ದಾನ, ಭೇದ, ದಂಡಗಳಂಬ ಚತು ರುಪಾಯಗಳನ್ನರಿತು, ಪ್ರಭುಶಕ್ತಿ, ಮಂತ್ರಶಕ್ತಿ, ಉತ್ಸಾಹಶಕ್ತಿ ಎಂಬ ಶಕ್ತಿತ್ರಯವುಳ್ಳವನಾಗಿ, ಸ್ತ್ರೀ ಯರು, ಜಜ, ಪಾನ, ಬೇಟೆ, ವಾಕ್ಷಾರು, ಅನುಚಿತವಾದ ದಾನ, ಕಠಿಣದಂಡ ಎಂಬ ಸಸ್ಯವ್ಯಸನ ಗಳಲ್ಲಿ ತಗುಲಿಕೊಳ್ಳದೆ ಆಯಾಕಾಲಕ್ಕೆ ತಕ್ಕ ಹಾಗೆ ಮಾಡುತ್ತಾ ಇರ ಬೇಕು. ತನ್ನ ಶಕ್ತಿಯನ್ನೂ ದೇಶವನ್ನೂ ಕಾಲವನ್ನು ವಿಚಾರಿಸಿ ಕೊಕ್ಕರೆಯ ಹಾಗೆ ಸುಮ್ಮಗಿರಬೇಕು; ಇಲ್ಲವೆ ನಿಂಹದ ಹಾಗೆ ಪರಾಕ್ರ ಮದಿಂದ ಶತ್ರುಗಳನ್ನು ಸಂಹರಿಸಬೇಕು. ತನ್ನ ಬಲವನ್ನೂ ಇದಿರಾ ೪ನ ಬಲವನ್ನೂ ಮನಸ್ಸಿನಲ್ಲಿ ಚೆನ್ನಾಗಿ ವಿಚಾರಿಸದೆ ಶತ್ರುಗಳನ್ನು ಜಯಿಸುವುದಕ್ಕಾಗಿ ಯಾವನು ಪ್ರಯತ್ನ ಮಾಡುತ್ತಾನೋ ಅವನಿಗೆ ಆಪ ತುಗಳು ಬರುವುದು ಸಿದ್ದವೆಂದು ದೊಡ್ಡವರು ಹೇಳುತ್ತಾರೆ. ಅಸಮಾ ನವಾದ ಪ್ರತಾಪವುಳ್ಳ ಶತ್ರುವು ದೂರದಲ್ಲಿದ್ದರೂ, ತನ್ನ ಶತ್ರುಗಳ ಬಲ ವನ್ನು ಅಡಗಿಸುವನು. ಅಲ್ಪನಾದ ಶತ್ರುವು ಆಯುಧವನ್ನು ಕೈಯಲ್ಲಿ ಹಿಡಿದುಕೊಂಡು ಸಮಿಾಪದಲ್ಲಿದ್ದರೂ, ತನ್ನ ಶತ್ರುವನ್ನು ಸಂಹರಿಸಲಿಕ್ಕೆ ಶಕನಾಗನು. ತಾಳ್ಮೆಯಿದ್ದರೂ ಸಮಯಬಂದಾಗ ಪರಾಕ್ರಮವನ್ನು ತೋರಿಸುತ್ತಾ ತನ್ನ ಗುಣದೋಷಗಳನ್ನೂ ಇದಿರಾಳಿನ ಗುಣದೋಷಗ ಇನ್ನೂ ಅರಿತು ಬುದಿವಂತನಾದವನು ಶತ್ರುವನ್ನು ನಂಬನು. ಉಪಾ ಯವಂತನಾದವನ ಬಳಿಗೆ ಬಲಾತ್ಕಾರದಿಂದಲ್ಲದೆ ಲಕ್ಷ್ಮಿ ತನಗೆ ತಾನೇ ಬಂದು ಬಹು ಸಂತೋಷದಿಂದ ಅವನ ಮನೆಯಲ್ಲಿ ಯಾವಾಗಲೂ ಇರು ವಳು, ರಾಜಲಕ್ಷ್ಮಿಯೆಂಬ ಭುಜಂಗಿಯು ಮಂತ್ರಪ್ರಭಾವದಿಂದ ತರ ಲ್ಪಟ್ಟು ಮಂತ್ರಶಕ್ತಿಯಿಂದ ಕಟ್ಟಲ್ಪಟ್ಟರೆ ನರೇಂದ್ರರಿಗೆ ಭೋಗವನ್ನು ತೋರಿಸುತ್ತಿರುವಳು. ಮದಿಸಿದವರಿಗೂ ಚಾಡಿಹೇಳುವವರಿಗೂ ಲೋ ಭವುಳವರಿಗೂ ಕಾಮಾತುರರಿಗೂ ಮರಿಗೂ ಗವಿಸಿದವರಿಗೂ ಕ್ರೋಧವುಳ್ಳವರಿಗೂ ದಂಡನೀತಿ ಸುಲಭವಲ್ಲ. ಮರಾದೆತಪ್ಪದೆ ಗರ್ವ