ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

100 ಪಂಚತಂತ್ರ ಕಥೆಗಳು. ವರ್ಣನು ಚಿರಂಜೀವಿಯನ್ನು ನೋಡಿ-ನೀನು ಹಿಂದು ಮುಂದು ತಿಳಿ ದವನು, ಗೂಗೆಗಳಿಗೂ ನಮಗೂ ಹೇಗೆ ವಿರೋಧ ಹುಟ್ಟಿತು ?- ಹೇಳು ಎಂದು ಕೇಳಿದನು, ಚಿರಂಜೀವಿ ಮೇಘವರ್ಣನನ್ನು ನೋಡಿವಾಗೌಪದಿಂದ ವಿರೋಧ ಹುಟ್ಟಿತು.' ಪೂರ್ವದಲ್ಲಿ ಬುದ್ದಿ ಯಿಲ್ಲದ ಒಂದು ಕತ್ತೆ ಹುಲಿಯ ಚರ್ಮವನ್ನು ಹೊಡೆದುಕೊಂಡು ಬೇಸಗೆ ಯ ಕಾಲವೆಲ್ಲಾ ಹೊಟ್ಟೆ ತುಂಬ ಪೈರು ಮೇದು ಬದುಕಿದ್ದು ತನ್ನ ವಾಗೋಷದಿಂದ ಹತವಾಯಿತಲ್ಲವೆ? ಎಂದು ನುಡಿದನು. “ ಅದು ಹೇಗೆ ” ಎಂದು ಮೇಘವರ್ಣನು ಕೇಳಲು, ಚಿರಂಜೀವಿ ಹೇಳುತ್ತಾನೆ. The Ass detected and destroyed by its ೧wn blaying, ಒಂದು ಊರಲ್ಲಿ ಒಬ್ಬ ಅಗಸನು ಬಟ್ಟೆಯ ಮೂಟೆಗಳನ್ನು ಹೊರುವುದಕ್ಕಾಗಿ ಒಂದು ಕತ್ತೆಯನ್ನು ತಂದು, ಅವನ್ನು ಚೆನ್ನಾಗಿ ಬಲಿ ಸಬೇಕೆಂದು ಅದರ ಮೇಲೆ ಹುಲಿಯ ಚರ್ಮವನ್ನು ಹೊದಿಸಿ, ಒಳ್ಳೆಯ ಪೈರು-೪ ಗದ್ದೆಗಳಿಗೆ ರಾತ್ರಿಯ ಹೊತ್ತು ಹೊಡೆಯುತ್ತಾ ಬಂದನು. ಅದು ಯಥೇಚ್ಛವಾಗಿ ಹೈರನ್ನು ಮೇಯುತ್ತಿರುವುದು. ಆ ಧಾನ್ಯದ ಮಡಿಗಳಲ್ಲಿ ಕಾವಲಿರುವವರು ಅದನ್ನು ನೋಡಿ ಹುಲಿ ಎಂಬ ಭ್ರಾಂತಿ ಯಿಂದ ದೂರಕ್ಕೆ ಓಡುವರಲ್ಲದೆ ಸೈರಮೇಯದಂತೆ ಅದನ್ನು ಹೊಡೆ ಯರು. ಹೀಗಿರಲಾಗಿ ಕೆಲವು ದಿನಕ್ಕೆ ಒಬ್ಬ ಗದ್ದೆಯವನು ಸಾಹಸದಿಂದ ಬದುವರ್ಣವಾದ ಕಂಬಳಿಯನ್ನು ಹೊಡೆದುಕೊಂಡು ಬಿಲ್ಲಿನಲ್ಲಿ ಬಾಣ ವನ್ನು ಸಂಧಿಸಿ ಮುಚ್ಚಿಕೊಂಡು ಇರಲಾಗಿ, ಆ ಕತ್ತೆ ಅಲ್ಲಿಗೆ ಬಂದು ಅವನನ್ನು ನೋಡಿ ಹೆಣ್ಣು ಕತ್ತೆಯೆಂದುಕೊಂಡು ಕೂಗುತ್ತಾ ಹತ್ತಿರಕ್ಕೆ ಬಂದಿತು. ಆಗ ಅವನು ಅದನ್ನು ನೋಡಿ-ಓಹೋ ! ಇಷ್ಟುದಿನ ಇದು ಹುಲಿ ಎಂದು ಓಡಿ ಹೋಗುತ್ತಿದ್ದನು. ಇದು ದೊಡ್ಡ ಕತ್ತೆಯೆಂದು ಇಂದು ಇದರ ಕೂಗಿನಿಂದ ತಿಳಿಯಿತು. ಇನ್ನೇನು ಭಯ?-ಎಂದು ಬಂದು ಬಾಣದಿಂದ ಅದನ್ನು ಕೊಂದನು. ಒು.