ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ ಸಂಧಿವಿಗ್ರಹವು. 103 ಕೇಳಲು, ಮೊಲವಿಂತೆಂದಿತು. (ಆಯುಧವನ್ನು ಎತ್ತಿಕೊಂಡು ತನ್ನನ್ನು ಕೊಲ್ಲಬಂದರೂ ದೂತನು ಭಯಪಡದೆ ಯಥಾರ್ಥವನ್ನು ಹೇಳಬೇಕು. ಅರಸನು ದೂತನನ್ನು ಕೊಲ್ಲಬಾರದು, ನಾನು ಸ್ವಾಮಿ ಆಜ್ಞಾಪಿ ನಿದಪ್ರಕಾರ ಹೇಳುತ್ತೇನೆ: ತೆನ್ನ ಬಲವನ್ನೂ ಇದಿರಾಳಿನ ಬಲವನ್ನೂ ಚೆನ್ನಾಗಿ ವಿಚಾರಿಸದೆ ಅಜ್ಞಾನದಿಂದ ಯಾವನು ಕಲಹಕ್ಕೆ ಯತ್ನಿಸು ತಾನೋ ಅವನಿಗೆ ವಿಪತ್ತುಗಳು ಬರುವುವು. ಚಂದ್ರನು ಈ ಸರಸ ನ್ನು ನೋಡಿಕೊಳ್ಳುವುದಕ್ಕೆ ಮೊಲಗಳನ್ನು ಕಳುಹಿಸಿದನು. ಆದುದ ರಿಂದ ನಮ್ಮನ್ನು ಯಾರೂ ಹೆದರಿಸಲಾರರು. ಈ ಸರಸ್ಸು ಚಂದ್ರನ ದಾದಕಾರಣ ಇದಕ್ಕೆ ಚಂದ್ರಸರಸ್ಸೆಂದು ಹೆಸರು ಬಂದಿತು. ಶಶಗಳು ಎಂದರೆ ಮೊಲಗಳು ; ಅವುಗಳನ್ನುಳ್ಳವನಾದುದರಿಂದ ಚಂದ್ರನಿಗೆ ಶಶಿ ಎಂಬ ಹೆಸರು ಬಂದಿತು. ನಾವು ಚಂದ್ರನಿಗೆ ಮಕ್ಕಳ ಹಾಗಿರುವವರು, ನಮ್ಮಲ್ಲಿ ಅನೇಕರನ್ನು ನೀವು ತುಳಿದು ಕೊಂದುಹಾಕಿದಿರಿ. ಈ ಸಂಗ ತಿಯನ್ನು ಕೇಳಿ ಚಂದ್ರನಿಗೆ ಬಹಳ ಕೋಪಬಂದು ಆನೆಗಳು ಈ ಪ್ರಕಾರ ಏತಕ್ಕೆ ಮಾಡಿದವೋ ತಿಳಿದುಕೊಂಡು ಬಾ ಎಂದು ಹೇಳಿ ಆತನು ನನ್ನನ್ನು ಕಳುಹಿಸಿದನು' ಎಂದು ಹೇಳಲಾಗಿ, ಆ ಆನೆ ಹೆದರಿ, -ಅಯ್ಯಾ, ತಿಳಿಯದೆ ಹಾಗೆ ಮಾಡಿದೆವು. ನಾವು ಹೊರಟು ಹೋಗು ತೇವೆ. "ಕೋಪಮಾಡಬೇಡ-ಎಂದು ಬೇಡಿಕೊಂಡಿತು. “ ನಮ್ಮ ಅರಸನಾದ ಚಂದ್ರನ ಸಂಗಡ ಹೇಳಿ ಅಪ್ಪಣೆ ತೆಗೆದುಕೊಂಡು ಹೋಗಿ. ಈ ಸಾಯಂಕಾಲಕ್ಕೆ ಚಂದ್ರನು ಇಲ್ಲಿಗೆ ಬರುತ್ತಾನೆ ' ಎಂದು ಮೊಲವು ಹೇಳಲು, ಆನೆ ಸಮ್ಮತಿಸಿತು. ಬಳಿಕ ಹೊತ್ತು ಮುಳುಗುತ್ತಲೇ ಮೊಲವು ಗಜರಾಜನನ್ನು ಚಂದ್ರನ ಓಲಗಕ್ಕೆ ಕೊಳದ ಹತ್ತಿರಕ್ಕೆ ಕರೆದು ಕೊಂಡು ಹೋಗಿ, ಕೊಳದಲ್ಲಿ ಚಂದ್ರನ ಪ್ರತಿಬಿಂಬವನ್ನು ತೋರಿಸಿತು. ನನ್ನ ತಪ್ಪನ್ನು ಮನ್ನಿಸಬೇಕು. ಅಜ್ಞಾನದಿಂದ ಹೀಗೆ ಮಾಡಿದೆವು. ಇನ್ನು ಮೇಲೆ ಈ ದಿಕ್ಕಿಗೆ ಬಾರೆವು ಎಂದು ಗಜರಾಜನು ಚಂದ್ರನ ಪ್ರತಿಬಿಂಬಕ್ಕೆ ಎರಗಿದನು. ಆಮೇಲೆ ಮೊಲವು ಗಜರಾಜನನ್ನು ನೋಡಿ -ಚಂದ್ರನು ವಯೆಯಿಂದ ನಿನ್ನನ್ನು ಬಿಟ್ಟುಬಿಟ್ಟನು. ನೀನು ಮನಸ್ಸು ಬಂದ ಕಡೆಗೆ ಶೀಘ್ರವಾಗಿ ಹೋಗು ಎಂದು ಹೇಳಿತು. ಬಳಿಕ ಗಜ