ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

104 ಪಂಚತಂತ್ರ ಕಥಗಳು. ಸಮೂಹಗಳೊಂದಿಗೆ ಗಜರಾಜನು ಬಹು ವೇಗವಗಿ ಮತ್ತೊಂದು ಸ್ಥಳಕ್ಕೆ ಹೋದನು. ತರುವಾಯ ವಿಜಯನು ಶಿಲೀಮುಖನ ಬಳಿಗೆ ಬಂದು ಆತ ನಿಗೆ ಅಡ್ಡ ಬಿದ್ದು -ಬುದ್ದಿ, ಒಂದು ಉಪಾಯದಿಂದ ಆನೆಗಳು ಈ ಕೊಳವನ್ನು ಬಿಟ್ಟು ಹೋಗುವಂತೆಮಾಡಿ ಬಂದೆನು. ಇನ್ನು ನಾವೀ ತಾವನ್ನು ಬಿಡದೆ ಸುಖವಾಗಿ ಇರಬಹುದು-ಎಂದು ಆ ವೃತ್ತಾಂತ ವನ್ನೆಲ್ಲಾ ಹೇಳಿದನು. ಶಿಲೀಮುಖನು ವಿಜಯನನ್ನು ತಬ್ಬಿಕೊಂಡು ಬಹಳವಾಗಿ ಹೊಗಳಿ ಸುಖವಾಗಿದ್ದನು. ಆದಕಾರಣ ಅರಸನೊಬ್ಬ ನುಂಟೆಂದು ಹೇಳಿ ಕಾರೈವನ್ನು ನೆರವೇರಿಸಿಕೊಳ್ಳಲಿಕ್ಕಾಗದೇ ?-ಎಂದು ನುಡಿದು, ಈ ಉಪಮರ್ದನು, ಹುದನು, ದುರ್ಬಲನು, ನಮ್ಮನ್ನು ರಕ್ಷಿಸಲಿಕ್ಕೆ ಹೇಗೆ ತಕ್ಕನಾದಾನು ? ಅಲ್ಪನನ್ನು ಪ್ರಭುವಾಗಿ ಸೇವಿಸಿ ಶಶಕಪಿಂಜಲಿಗಳು ಮೃತವಾದುದು ತಿಳಿಯದೋ ?-ಎನಲು, ಆ ವೃತ್ತಾಂತವೇನು ? ಹೇಳು' ಎನುತಪ ಹಿಗಳು ಕೇಳಿದುವು. ಮುದಿ ಕಾಗಿ ಹೇಳುತ್ತದೆ We should not have recourse to a inean personThe Bird Kapinjala and the Hare Dirghakarna. ಬಹುಕಾಲದ ಕೆಳಗೆ ನಾನೊಂದು ಗಿಡದಮೇಲೆ ವಾಸಮಾಡುತ್ತಿರ ಲಾಗಿ, ಅದೇ ಗಿಡದ ಪೊಟ್ಟರೆಯಲ್ಲಿ ಕಪಿಂಜಲನೆಂಬ ಹೆಸರುಳ್ಳ ಪಕ್ಷಿ ಒಕ್ಕಲಿದ್ದಿತು. ಒಂದುದಿನಕಪಿಂಜಲನು ಸಾಯಂಕಾಲದವರೆಗೆ ನಿವಾಸ ಸ್ಥಳಕ್ಕೆ ಬಾರದೆ ಹೊಗಲಾಗಿ ನಾನು ದಿಗಿಲುಪಟ್ಟು ದಿಕ್ಕುಗಳನ್ನೆಲ್ಲಾ ನೋಡುತ್ತಿರುವ ಸಮಯದಲ್ಲಿ ದೀರ್ಘಕರ್ಣನೆಂಬ ಮೊಲವು ಆ ಪೊ ಟ್ವರೆಗೆ ಪ್ರವೇಶಿಸಿತು ; ಬೇಡವೆಂದು ನಾನು ಎಷ್ಟು ಹೇಳಿದರೂ ಕೇಳಲಿಲ್ಲ. ಬಳಿಕ ಸ್ವಲ್ಪ ಹೊತ್ತಿಗೆ ಕಪಿಂಜಲನು ಬಂದು ನನ್ನ ಸ್ಥಳದಲ್ಲಿ ನೀನು ಏಕ ಬಂದಿದ್ದೀಯೆ ? ಹೊರಗೆ ಹೋಗು ಎಂದು ಹೇಳಿದನು. “ಬಾವಿ ಗಳು, ಕೆರೆಗಳು, ಮರದ ಪೊಟ್ಟರೆಗಳು ಮೊದಲಾದುವು ಒಬ್ಬರ ಸೊತ್ತಲ್ಲ; ಯಾರು ಆಕ್ರಮಿಸಿಕೊಂಡರೆ ಅವರ ಸೊತ್ತು, ಈಗ ಈ ಸ್ಥಳಕ್ಕೆ ನಾನು ಪ್ರವೇಶಿಸಿದೆನಾದುದರಿಂದ ನಿನಗೆ ನಿಮಿತ್ಯವಿಲ್ಲ. ಹೋಗು' ಎಂದು ೧ ಕಿ. ಕಿ