ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

105 }' ಸಂಧಿವಿಗ್ರಹವು. ದೀರ್ಘಕರ್ಣನು ಹೇಳಿದನು, “ನನ್ನ ಮನೆಯನ್ನು ತೆಗೆದುಕೊಳ್ಳುವು ದಕ್ಕೆ ನಿನಗೆ ಸಲ್ಲುವುದೇ ? ಈಗ ನೀನು ನನ್ನ ಸ್ಥಳವನ್ನಾದರೂ ಬಿಟ್ಟುಬಿಡಬೇಕು ; ನ್ಯಾಯಕ್ಕಾದರೂ ಬರಬೇಕು; ಇಲ್ಲವೇ ನನ್ನ ಸಂrಡ ಜಗಳವಾದರೂ ಕಾದಬೇಕು' ಎಂದು ಕಪಿಂಜಲನು ಮೊಲದ ಸಂ ಗಡ ಹೇಳಿದನು. 'ವ್ಯವಹಾರಕ್ಕೆ ಬರಹೇಳಿದರೆ ಬಾರೆನು ಎನ್ನಬಹುದೇ? ಹೋಗೋಣ' ಎಂದು ಮೊಲವು ಆ ಪಕ್ಷಿಯ ಸಂಗಡ ಹೊರಟಿತು. ನಾನೂ ಆ ಇಬ್ಬರ ಹಿಂದೆ ವಿನೋದವಾಗಿ ಹೋದನು. ಸ್ವಲ್ಪ ದೂರ ಹೋಗುತ್ತಲೆ ಕಪಿಂಜಲನು ಮೊಲವನ್ನು ನೋಡಿ ನಮಗೆ ವ್ಯಾಜ್ಯ ವನ್ನು ತೀರಿಸುವವರು ಯಾರು ? ಎಂದು ಕೇಳಿದನು. “ ಯಮುನಾ ನದಿಯ ತೀರದಲ್ಲಿ ವಧಿಕರ್ಣನೆಂಬ ಹೆಸರುಳ್ಳ ಧಾರಿಕನಾದ ಮುದಕ ಮಾರ್ಜಾಲ ರಾಜನುಂಟು. ಆತನ ಬಳಿಗೆ ಹೋಗಿ ನಾವು ವಿವಾದವನ್ನು ತೀರಿಸಿಕೊಳ್ಳೋಣ ” ಎಂದು ಮೊಲವು ಉತ್ತರಕೊಟ್ಟಿತು, ಬೆಕ್ಕು ಯಾವಾಗಲೂ ಬಹು ಕೂರಹೃದಯವುಳುದು, ಅದನ್ನು ನಂಬಕ ಡದು, ಎಂದು ನನಗೆ ಚೆನ್ನಾಗಿ ತಿಳಿವುದು. ನಿನ್ನ ಮನಸ್ಸಿಗೆ ಹೇಗೆ ನಂಬಿಕೆ ಹುಟ್ಟಿತು ?' ಎಂದು ಪಕ್ಷಿ ನುಡಿಯಿತು. ಆ ಮಾರ್ಜಾಲಾ ಧಿಪತಿ ಆಚಾರವಂತನು, ಉತ್ತಮನು, ಧರ್ಮಶಾಸ್ತ್ರವನ್ನು ಓದಿದ ವನು. ಈ ಸಾಪದಲ್ಲಿ ಇರುವವರೆಲ್ಲರೂ ಆತನನ್ನು ಬಲ್ಲರು. ನೀನು ಅಂಜದೆ ನನ್ನೊಂದಿಗೆ ಬೇಗ ಬಾ' ಎಂದು ಮೊಲವು ಹೇಳಿತು, " ಅಂ ಜಿಕೆ ನಿನಗೂ ನನಗೂ ಸಮಾನವೇ, ನನಗೆ ಕೇಡು ಬಂದರೆ ನಿನಗೆ ಬಾರದೇ ? ಹೇಳತಕ್ಕ ಬುದ್ದಿಯನ್ನು ಹೇಳಿದೆನು. ನೀನು ಕೇಳದಿ ದ್ದರೆ ನಾನೇನು ಮಾಡಲಾಪೆನು*?' ಎಂದು ಪಕ್ಷಿ ನುಡಿಯಿತು. ಬಳಿಕ ಅವು ಎರಡೂ ದಧಿಕರ್ಣನಿರುವ ಸ್ಥಳಕ್ಕೆ ಹೋಗಿ ದೂರವಾಗಿ ನಿಂತು ಎಲೈ ದಧಿಕರ್ಣನೇ, ನಾವಿಬ್ಬರೂ ಸ್ಥಲಕ್ಕಾಗಿ ವಿವಾದಪಟ್ಟು ನಿನ್ನ ಬಳಿಗೆ ಬಂದೆವು. ಪಕ್ಷಪಾತವಿಲ್ಲದೆ ವ್ಯಾಜ್ಯವನ್ನು ಬಗೆಹರಿಸಿ ನಮ್ಮನ್ನು ತೊರೆಯಲ್ಲಿ ಕಳುಹಿಸಬೇಕು ಎಂದು ಬಿನ್ನೆ ನಿದುವು. ದೂರದಲ್ಲಿ ಇದ್ದು ಹೇಳಿದರೆ ನನಗೆ ಕಿವಿ ಕೇಳಿಸುವುದಿಲ್ಲ; ಹತ್ತಿರಕ್ಕೆ ಬಂದು ಹೇಳಿದರೆ 0