ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

107 4. ಸಂಧಿವಿಗ್ರಹವು. ಉಲೂಕಪತಿ ಮುದುಕಾಗೆಯ ಹತ್ತಿರಕ್ಕೆ ಬಂದು ಸಿಟ್ಟಿನಿಂದ ಕಣ್ಣು ಗಳನ್ನು ಕೆದರಿಸಿಕೊಂಡು ಎಲೈ ವೃದ್ದವಾಯಸವೇ, ನಾನು ನಿನಗೇನು ಅಪಕಾರ ಮಾಡಿದೆ ? ನೀನು ಏತಕ್ಕೆ ನನ್ನ ರಾಜ್ಯಕ್ಕೆ ವಿಘಾತಮಾಡಿದೆ? ತೀಕವಾದ ಬಾಣದಿಂದ ತಗುಲಿದ ಗಾಯವು ಆರುವುದು; ಕೊಡಲಿ ಯಿಂದ ಕಡಿಯಲ್ಪಟ್ಟ ಕೊಂಬೆ ಚಿಗುರುವುದು ; ಕಾಡಕಿಚಿನ ಉರಿ ಯಿಂದ ಸುಟ್ಟು ಹೋದ ಹುಲ್ಲು ತಿರುಗಿ ಬೆಳವುದು ; ನಿಷ್ಠುರವಾದ ಮಾತಿ ನಿಂದ ಹೊಡೆಯಲ್ಪಟ್ಟ ಹೃದಯದಲ್ಲಿಯ ಈಗಾಯವು ಎಂದೆಂದಿಗೂ ಮಾಯದು, ಆದುದರಿಂದ ಇನ್ನು ಮೇಲೆ ನಿಮಗೂ ನಮಗೂ ವೈರವು ನಿವ-ಎಂದು ಹೇಳಿ ತನ್ನ ಸ್ಥಾನಕ್ಕೆ ಹೋಯಿತು. ಅದು ಮೊದಲು ಉಲೂಕಗಳಿಗೂ ನಮಗೂ ವೈರವು ಸಹಜವಾಗಿ ಉಂಟಾಯಿತು. ಎಂದು ಚಿರಂಜೀವಿ ಹೇಳಿದನು. ಮೇಘವರ್ಣನು ಕೇಳಿ-ಅಯ್ಯಾ, ನಾವು ಈಗ ಮಾಡಬೇಕಾದ ಉಪಾಯವೇನೋ ಅವನ್ನು ಸಾಯಂಕಾಲಕ್ಕೆ ಮುಂ ಚೆಯೇ ಆಲೋಚಿಸಬೇಕು ಎಂದು ಹೇಳಲು, ಚಿರಂಜೀವಿ ಇಂತೆಂ ದನು. “ ಸ್ವಾಮಿಾ, ಸಂಧಿವಿಗ್ರಹಗಳನ್ನು ಮಾಡಲು ಈಗ ಸಮಯವಲ್ಲ. ಮಾನಾಸನ ದೈಧಗಳ ಸಲ್ಲವು; ಸಮಾಶ್ರಯವೊಂದು ಯುಕ್ತವು. ಅದನ್ನು ನಾನು ಯಾವ ವಿಧದಿಂದಾದರೂ ಮಾಡುತ್ತೇನೆ, ಶತ್ರುಗಳು ಬಲವಂತವಾಗಿ ಅನೇಕರಿದ್ದರೂ ಬುದ್ದಿ ಬಲದಿಂದ ಅವರನ್ನು ವಂಚಿಸ ಬಹುದು. ಪೂರ್ವದಲ್ಲಿ ಬ್ರಾಹ್ಮಣರು ಒಬ್ಬ ವಂಚಕನಿಂದ ವಂಚಿಸಲ್ಪಡ ಅಲ್ಲವೇ?' ಎಂದು ನುಡಿಯಲು, ಮೇಘವರ್ಣನು-ಆಕಥೆ ಹೇಗೆ ?- ಎಂದು ಕೇಳಿದನು ; ಚಿರಂಜೀವಿ ಹೇಳುತ್ತಾನೆ. Brahmins deceived by a Knave, ( ಒಂದಾನೊಂದು ಕಾಲದಲ್ಲಿ ಕೆಲವರು ಬ್ರಾಹ್ಮಣರು ಯಾಗಾರ್ಥ ವಾಗಿ ಒಂದು ಹೋತನನ್ನು ಕೊಂಡುಕೊಂಡು ಹೋಗುತ್ತಿರಲು, ಮಾರ್ಗ ದಲ್ಲಿ ಒಬ್ಬ ವಂಚಕನು ನೋಡಿ ಆ ಹೋತನನ್ನು ಇವರು ಬಿಟ್ಟು ಬಿಟ್ಟು ಹೋಗುವ ಹಾಗೆ ಮಾಡಿ ಅದನ್ನು ಬಯ್ಯಬೇಕೆಂದು ಆಲೋಚಿಸಿ