ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

109' ಸಂಧಿವಿಗ್ರಹವು. ದಲ್ಲ. ಅಗ್ನಿ ಶೇಷ, ಗುಣಶೇಷ ಶತ್ರುಶೇಷಗಳನ್ನು ಉಳಿಸಬಾರದು. ಆದುದರಿಂದ ನಾವು ತರೆಯಲ್ಲಿ ಆ ಆಲದ ಮರದ ಬಳಿಗೆ ಹೋಗಿ ಕಾಗೆ ಗಳನ್ನು ಹುಡುಕಿ ಕೊಲ್ಲಬೇಕು-ಎಂದು ನುಡಿದನು, ಮಂತ್ರಿಗಳು ಆ ಮಾತನ್ನು ಕೇಳಿ, ಸ್ವಾಮಿ ಹೇಳಿದುದು ಮಹಾಯುಕ್ತವಾಗಿದೆಎಂದು ಉಗಮರ್ದನನ್ನು ಶ್ಲಾಘಿಸಿ ಆತನ ಸಂಗಡ ಕೂಡಿಕೊಂಡು ಕಾಗೆಗಳ ನಿವಾಸವಾದ ಪೊಟ್ಟರೆಯ ಹತ್ತಿರಕ್ಕೆ ಹೋಗಿ, ಅಲ್ಲಿ ಒಂದು ಕಾಗೆಯನ್ನಾದರೂ ಕಾಣದೆ ಕಾಗೆಗಳಲ್ಲಾ ಸತ್ತುವೆಂದುಕೊಂಡು ತಿರುಗಿ | ಬರುವ ಸಮಯದಲ್ಲಿ ಚಿರಂಜೀವಿ ಕೂಗಿದನು. ಆ ಕೂಗನ್ನು ಕೇಳಿ ಗಗೆಗಳು ಹೋಗಿ ಚಿರಂಜೀವಿಯನ್ನು ಹಿಡಿದುಕೊಂಡು ಬಂದು ಉಪ ಮರ್ದನ ಹತ್ತಿರ ಇಟ್ಟುವು. ಉಪಮರ್ದನು ಅವನನ್ನು ನೋಡಿನೀನು ಯಾರು ? ಎಂದು ಕೇಳಿದನು. “ನಾನು ಚಿರಂಜೀವಿ ಎಂಬವನು ? ಎಂದು ಅವನು ನುಡಿದನು. Chiranjivi's Crickery. - “ನೀನು ಮೇಘವರ್ಣನಿಗೆ ಪ್ರಧಾನಮಂತ್ರಿಯಲ್ಲವೆ ? ನಿನಗೆ ಈ ಅವಸ್ಥೆ ಹೇಗೆ ಬಂದಿತು ?' ಎಂದು ಆತನು ಕೇಳಿದನು. “ ಅಯ್ಯಾ, ನನ್ನನ್ನು ಆಲೋಚನೆ ಕೇಳಿದುದಕ್ಕೆ-ಉಪಮರ್ದನು ಬಲವಂತನಾದ ದರಿಂದ ಅವನ ಶರಣುಹೊಕ್ಕು ಬದುಕೋಣ --ಎಂದು ಹೇಳಿದಕಾರಣ, ಇವನು ಶತ್ರುಪಕ್ಷಪಾತಿ ಎಂದು ಕಾಗೆಗಳಲ್ಲಾ ಕೂಡಿ ಮೂಗುಗಳಿಂದ ನನ್ನನ್ನು ಚುಚ್ಚಿ ಕಾಲುಗಳಿಂದೊದೆದು ಈ ಪ್ರಕಾರ ಮಾಡಿದುವು. ಪ್ರಣ ಮಾತ್ರ ಹೋಗಲಿಲ್ಲ, ನೀವಾದರೂ ಚೆನ್ನಾಗಿ ಕೊಲ್ಲಿರಿ' ಎಂದು ಚಿರಂಜೀವಿ ಹೇಳಲು, ಉಪಮರ್ದನು ಕೇಳಿ, ರಕ್ತಾಕ ಮೊದಲಾದ ತನ್ನ ಮಂತ್ರಿಗಳನ್ನು ನೋಡಿ ಇವನನ್ನು ಏನು ಮಾಡೋಣ ?- ಎಂದು ಕೇಳಿದನು. ಆಗ ರಕ್ತಾಕ್ಷನಿಂತೆಂದನು. “ ಶತ್ರುವು ಹೀನಬಲನಾಗಿ ರುವಾಗ ಸಿಕ್ಕಿದರೆ ಅವನನ್ನು ಅವಶ್ಯವಾಗಿ ಕೊಲ್ಲಬೇಕು. ದಯೆಯಿಂದ ಅವನನ್ನು ರಕ್ಷಿಸಿದರೆ, ಮುಂದಕ್ಕೆ ಅವನೇ ಪ್ರಬಲಶತ್ರುವಾಗುವನು. ಆದುದರಿಂದ ಇವನನ್ನು ಈಗ ಕೊಲ್ಲೋಣ' ಎನಲು, ಕೂರಾಹನು