ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

110 ಪಂಚತಂತ್ರ ಕಥೆಗಳು, ಮರೆಹೊಕ್ಕವನನ್ನು ಕೊಂದರೆ ಬಹಳ ಪಾಪವೆಂದು ಧರ್ಮಶಾಸ್ತ್ರದಲ್ಲಿ ಹೇಳಿದೆ. ಆದುದರಿಂದ ದಯಮಾಡಿ ಇವನನ್ನು ರಕ್ಷಿಸಬೇಕು-ಎಂದನು. ಬಳಿಕ ಆತನು ದೀಪಾ ಹನೆಂಬ ಮಂತ್ರಿಯನ್ನು ನೋಡಿ-ನಿನಗೆ ತೋರಿದುದನ್ನು ಹೇಳು-ಎನಲು, ದೀಪ್ತಾಹನು-ಅಯ್ಯಾ, ಶರಣಾಗ ತನ ಕೊಲ್ಲುವುದನ್ನು ಈ ವರೆಗೆ ನಾನೆಲ್ಲೂ ಕೇಳಲಿಲ್ಲ; ನೋಡಲೂ ಇಲ್ಲ, ಪೂರ್ವದಲ್ಲಿ ಬೆಸ್ತನು ಮರೆಹೊಗಲು, ಕಪೋತವು ಸಶರೀರಮಾಂಸ ವನ್ನು ಕೊಟ್ಟಿತು. ಆದಕಾರಣ ನೀನು ಶರಣಾಗತನಾದ ಈ ಕಾಗೆಗೆ ದಯೆ ತೋರಿಸಬೇಕು ಎನಲು, ಕೇಳಿ ಉಪಮರ್ದನು ವಕ್ರನಾಸನೆಂಬ ಮಂತ್ರಿಯನ್ನು ನೋಡಿ ನಿನ್ನ ತಾತ್ಪರವೇನು ಎಂದನು. ವಕ್ರ ನಾನು-ಈ ಕಾಗೆಯನ್ನು ಕೊಲ್ಲಬಾರದು, ಶತ್ರುಗಳು ತಮ್ಮಲ್ಲಿ ತಾವು ವಿರೋಧಿಸಿಕೊಳ್ಳುವುದು ನಮಗೆ ಒಳ್ಳೆಯದು, ಪೂರ್ವಕಾಲದಲ್ಲಿ ಕಳನೂ ರಾಕ್ಷಸನೂ ವಿರೋಧಪಟ್ಟು ಬ್ರಾಹ್ಮಣನಿಗೆ ಕಳ್ಳನು ಪ್ರಾಣ ವನ್ನು ಕೊಟ್ಟನು; ರಾಕ್ಷಸನು ಎರಡು ಹಸುಗಳನ್ನು ಕೊಟ್ಟನು ಆ ಕಥೆಯನ್ನು ಹೇಳುತ್ತೇನೆ ಕೇಳು-ಎಂದು ಇಂತೆಂದನು. The internal disputes of the enemy are favorable to the opposite party—The Thief and the Evil Spirit Brahmarakshasa. ಒಂದು ಅಗ್ರಹಾರದಲ್ಲಿ ಒಬ್ಬ ಬ್ರಾಹ್ಮಣನುಂಟು. ಆತನು ಒಳ್ಳೆಯ ನಡತೆಯುಳ್ಳವನು. ಆತನಿಗೆ ಒಳ್ಳಯಾಕಳುಗಳು ಎರಡಿ ಮೈ ವು. ಅವುಗಳನ್ನು ಅಪಹರಿಸಬೇಕೆಂದು ಒಬ್ಬ ಕಳ್ಳನು ಬಹುಕಾಲ ದಿಂದ ಹೊಂಚು ಹಾಕಿಕೊಂಡಿದ್ದು, ಒಂದು ದಿನ ರಾತ್ರಿ ಎರಡು ಜಾವದ ವೇಳೆಯಲ್ಲಿ ಮೋಡಕವಿದು ಸೊನೆಹಿಡಿಯಲು, ಗತ್ತಲೆಯಲ್ಲಿ ಒಬ್ಬೊಂಟಿಗನಾಗಿ ಹೋಗುತ್ತಾ ದ್ದನು. ಆಗ ಒಬ್ಬನ ಕೈ ತನ್ನ ಮೈಗೆ ಸೊಕಲು ಹೆದರದೆ-ನೀನು ಯಾರು ?-ಎಂದು ಕೇಳಿದನು. ನಾನು ಬ್ರಹ್ಮರಾಕ್ಷಸನೆಂದು ಅವನು ಹೇಳಿ, ನೀನು ಯಾರೆಂದು ಕೇಳಿದನು. ನಾನು ಕಳ್ಳನೆಂದು ಅವನು ಹೇಳಿದನು, ನೀನೆಲ್ಲಿಗೆ ಹೋಗುತ್ತೀಯೆ ? ಬ