ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

113 ಸಂಧಿವಿಗ್ರಹವು. ಅಸಾಧ್ಯ, ಪೂರ್ವಕಾಲದಲ್ಲಿ ಸೂರನನ್ನೂ ಮೇಘವನ್ನೂ ವಾಯು ವನ್ನೂ ಪ್ರಾತವನ್ನೂ ಗಂಡನಾಗಿ ಉದ್ದೇಶಿಸಿ ಒಂದು ಇಲಿ ತನ್ನ ಜನ್ಮ ವನ್ನು ಎತ್ತಿತೇ ಹೊರತು ಉತ್ಮಜನ್ಮವನ್ನು ಎತ್ತಲಾರದೆ ಹೋ ಯಿತು' ಎಂದು ರಕ್ತಾಹನು ನುಡಿದನು. • ಅದು ಹೇಗೆ ? ' ಎಂದು ಚಿರಂಜೀವಿ ಕೇಳಿದನು. ರಕ್ಷಾಹನು ಹೇಳುತ್ತಾನೆ. Thc Rat and the Munisvar, ಒಬ್ಬ ಮುನೀಶ್ವರನು ಪುಣ್ಯನದಿಗಳಲ್ಲಿ ಸ್ನಾನಮಾಡುತ್ತಾ ಬಂದು ದಿನ ಸೂರೋದಯ ಸಮಯದಲ್ಲಿ ಅಪ್ಪ ಜಲವನ್ನು ಬಿಗಸೆಯಲ್ಲಿ ಹಿಡಿ ದುಕೊಂಡಿದ್ದನು. ಆಗ ಒಂದು ಡೇಗೆ ಬಂದಿಲಿಯನ್ನು ಕಾಲಿನಲ್ಲಿ ಎತ್ತಿಕೊಂಡು ಆಕಾಶಮಾರ್ಗದಲ್ಲಿ ಹೋಗುತ್ತಿರಲು, ಆ ಇಲಿ ಡೇಗೆಯ ಕಾಲಿನಿಂದ ಬಿಡಿಸಿಕೊಂಡು ಆ ಮುನಿಯ ಬಗಸೆಯಲ್ಲಿ ಬಿದ್ದಿತು. ಆಗ ಮುನಿ ದಯೆಯುಳ್ಳವನಾಗಿ ' ಈ ಇಲಿ ಕನೃಕೆಯಾಗಲಿ' ಎಂದನು. ಆ ಕೂಡಲೆ ಅದು ಕನಕೆಯಾಯಿತು. ಆ ಮುಸಿ ಆ ಕನ್ಯಕೆಯನ್ನು ತನ್ನ ಹೆಂಡತಿಯ ಕೈಗೆ ಕೊಟ್ಟನು, ಆಕೆ ಅದನ್ನು ತಾನು ಹೆತ್ತ ಹೆಣಿಗಿಂತ ಅತಿಶಯವಾದ ಪ್ರೀತಿಯಿಂದ ಬಳಯಿಸುತ್ತಿರಲಾಗಿ ಅದಕ್ಕೆ ಯವನ ಬಂತು, ಆಗ ಮುಸಿ ಬಹಳ ಮನೋಹರವಾದ ಆಕಾರವುಳ ಆ ಸಾಕುವುಗಳನ್ನು ನೋಡಿ ಇವಳು ಮದುವೆಯಾಗುವುದಕ್ಕಿಂತ ಮುಂಚೆ ಮೈನೆರೆದರೆ ವೃಸಲಿ ಎನ್ನಿಸಿಕೊಳ್ಳುವಳು. ಇವಳನ್ನು ಮದು ವೆಯಾದವನು ವೈಪರೀಪತಿ ಎನ್ನಿಸಿಕೊಳ್ಳುವನು. ಆದಕಾರಣ ತಕ್ಕ ವರನನ್ನು ವಿಚಾರಿಸಿ ತರೆಯಾಗಿ ಇವಳಿಗೆ ಮದುವೆಮಾಡಬೇಕುಎಂದು ಯೋಚಿಸಿ, ಮೂರು ಲೋಕವನ್ನೂ ಪ್ರಕಾಶಪಡಿಸುವ ಸೂರ ನನ್ನು ಧ್ಯಾನಿಸಿ ನಮಸ್ಕರಿಸಿದನು. ಒಡನೆ ಸೂರೈನು ಪ್ರಸನ್ನನಾಗಿ ಬಂದು 'ನಿನಗೇನು ಬೇಕು' ಎಂದು ಕೇಳಿದನು. “ ಅಯ್ಯಾ, ಈ ರೂಪವತಿಯಾದ ಹುಡುಗಿಯನ್ನು ಮದುವೆಯಾಗಲಿಕ್ಕೆ ಮನುಷ್ಯರು ಅರ್ಥವಿಲ್ಲವೆಂದು ಮದುವೆಮಾಡದೆ ನಿಲ್ಲಿಸಿದ್ದೇನೆ. ಇವಳನ್ನು ಹೆಂಡತಿ ಯಾಗಿ ನೀನು ಪರಿಗ್ರಹಿಸಬೇಕು, ಇದು ನನ್ನ ಕೋರಿಕೆ ' ಎಂದು ಮುನಿ