11 ಪಂಚತಂತ್ರ ಕಥೆಗಳು, ಹೇಳಿದನು. ಆಗ ಸೂರೈನು ಅವಳು ಇತಿ ಎಂಬುದನ್ನು ತಿಳಿದು ಪರಿ ಹರಿಸಬೇಕೆಂದು, ಎಲೈ ಮುನಿಯೇ, ಮೇಘನು ನನ್ನ ಪ್ರಕಾಶವನ್ನು ಮರಪಡಿಸುತ್ತಾನೆ. ಆದಕಾರಣ ಆತನು ನನಗಿಂತ ಬಲವಂತನು. ಆತ ಸಿಗೆ ಈ ಕಳ್ಳಕೆಯನ್ನು ಕೊಟ್ಟು ಮದುವೆಮಾಡಿದರೆ ಸರಿಯಾಗಿರು ವುದು- ಎಂದನು, ಮುನಿಯು ಮೇಘನನ್ನು ಪ್ರಾರ್ಥಿಸಲು, ಆತನು ಪ್ರತ್ಯಕ್ಷನಾಗಿ 'ನನ್ನನ್ನೇಕೆ ಕರೆಯಿಸಿದೆ? ” ಎಂದು ಕೇಳಿದನು. - ಅಯ್ಯಾ, ಈ ಹುಡುಗಿ ನನ್ನ ಮಗಳು, ಇವಳನ್ನು ನೀನು ಹೆಂಡತಿ ಯಾಗಿ ಪಗ್ರಹಿಸಬೇಕು ' ಎಂದು ಆತನು ಆಕೆಯನ್ನು ತೋರಿಸಿದನು. ಮೇಘನ ಮುಗುಳುನಗೆ ನಗುತ್ತಾ ಮಸಿಯನ್ನು ನೋಡಿ -ವಾಯು ನನ್ನನ್ನು ಚದರ ದೊಡೆಯುತ್ತಾನೆ. ಆದಕಾರಣ ವಾಯುವು ನನಗಿಂತ ಬಲವಂತನು, ನಿನ್ನ ಮಗಳನ್ನು ಆತನಿಗೆ ಕೊಟ್ಟರೆ ಚೆನ್ನಾಗಿರುವುದೇ ಹೊರತು ಇತರರಿಗೆ ಕೊಡುವುದು ಸರಿಯಲ್ಲ ಎಂದು ಮೃದುವಾದ ಮಾತಿನಿಂದ ಮುಸಿಮನ್ನು ಸಮ್ಮತಿಪಡಿಸಿ ಹೋದನ. ತರುವಾಯ ಆ ಎಎಸಿ ವಾಯವನ್ನು ಸ್ಥಾಪಿಸಲಾಗಿ ಆತನು ಬಂದು ಮುಂದೆ ನಿಂತು ' ನನ್ನನ್ನು ನೆನಸಿದ ಕಾರಣವೇನು ಎಂದು ಕೇಳಿದನು. ಆ ಮುಸಿ ತನ್ನ ಮಗಳನ್ನು ಆತನಿಗೆ ತೋರಿಸಿ ಇವ ಳನ್ನು ಬಹಳ ಪ್ರೀತಿಯಿಂದ ಸಾಕಿದೆನು. ತಕ್ಕ ವರನಿಗೆ ಕೊಟ್ಟು ಮದುವೆ ಮಾಡಬೇಕೆಂಬ ಆಸೆಯಿಂದ ನಿನ್ನನ್ನು ಪ್ರಾರ್ಥಿಸಿದನು. ಈ ಕಕೆಯನ್ನು ಮನುಷ್ಯರಿಗೆ ಕೊಡುವುದು ನನಗೆ ಸಮ್ಮತವಿಲ್ಲ. ಜಗ ೩ಾಣನಾದ ನಿನಗೆ ಕೊಡಬೇಕೆಂದಿದ್ದೇನೆ. ನೀನು ದಯಮಾಡಿ ಈ ಕಕೆಯನ್ನು ಮದುವೆ ಮಾಡಿಕೊಳ್ಳಬೇಕು. ಅದರಿಂದ ನಾನು ಕೃತಾರ್ಥನಾಗುವನು-ಎಂದು ಹೇಳಿದನು. ಅದನ್ನು ವಾಯುದೇವನು ಕೇಳಿ-ನಾನು ಎಲ್ಲರನ್ನೂ ಕದಲಿಸುತ್ತೇನೆ. ಬೆಟ್ಟವನ್ನು ಮಾತ್ರ ಅಲ್ಲಾ ಡಿಸಲಾರೆನು. ನನಗಿಂತ ಪರ್ವತಕ್ಕೆ ಬಲ ಹೆಚ್ಚು. ಆದಕಾರಣ ಈ ಹುಡುಗಿಯನ್ನು ಸರ್ವತಕ್ಕೆ ಕೊಟ್ಟು ಮದುವೆಮಾಡಿದರೆ ಬಹಳ ಒಳ್ಳೆ ಹುದು ಎಂದು ಹೇಳಿ ತನ್ನ ಸ್ಥಳಕ್ಕೆ ಹೋದನು,
ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೩೪
ಗೋಚರ