ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿವಿಗ್ರಹವು. 115 ಆ ಮೇಲೆ ಆ ಮಸಿ ಸರ್ವತಗಳಲ್ಲಿ ಶ್ರೇಷ್ಟವಾದ ಮೇರುಪರ್ವ ತವನ್ನು ಆರಾಧಿಸಲಾಗಿ, ಮೇರುವು ದಿವ್ಯರೂಪವನ್ನು ಧರಿಸಿ ಮುನಿಯ ಮುಂದೆ ನಿಂತು, ನನ್ನಿಂದ ನಿನಗೆ ಆಗಬೇಕಾದ ಕೆಲಸವೇನು ? ” ಎಂದು ಕೇಳಿದನು. “ ರೂಪವತಿಯಾದ ನನ್ನ ಮಗಳನ್ನು ದವನ ಶಾಲಿಯೂ ಚೆಂದುಳ್ಳಿ ಚೆಲುವನೂ ಆದ ನಿನಗೆ ಕೊಟ್ಟು ಮದುವೆ ಮಾಡಬೇಕೆಂದು ಪ್ರಾರ್ಥಿಸಿದೆನು' ಎಂದು ಮುನಿ ಹೇಳಿದನು. ಮೇರು ಪರ್ವತವು ಆ ಮಾತನ್ನು ಕೇಳಿ-ಎಲೈ ಮುನಿಶ್ರೇಷ್ಮನೇ, ಇಲಿ ನೋಡಿ ದರೆ ಸ್ವಲ್ಪವಾಗಿ ಕಾಣಿಸುತ್ತದೆ. ಅವರ ಶಕ್ತಿಯನ್ನು ಏನೆಂದು ಹೇಳ ಬೇಕು! ಬಹು ದೃಢವಾದ ಪರ್ವತಗಳನ್ನು ಸಹ ತೋಡಿ ಬಿಗ ಳನ್ನು ಮಾಡುತ್ತದೆ. ಆದುದರಿಂದ ನನಗಿಂತ ಮಪ್ರಕವು ಬಲಶಾಲಿ. ನಿನ್ನ ಮಗಳನ್ನು ಮೂಷಕಕ್ಕೆ ಕೊಟ್ಟು ಮದುವೆ ಮಾಡಿದರೆ ವರನ ವ್ಯವಾಗಿ ಇರುವುದು-ಎಂದು ಹೇಳಿ ತನ್ನ ತಾವಿಗೆ ಹೋದನು. ಬಳಿಕ ಆ ಮುಸಿ ಆ ಹುಡುಗಿಯನ್ನು ಕರೆದುಕೊಂಡು ಪ್ಪಾಶ್ರಮಗಳಿಗೆ ಹೋಗಿ ( ಈ ದುಡುಗಿಯನ್ನು ಮದುವೆ ಮಾಡಿಕೊಳ್ಳಿರಿ' ಎಂದು ಬ್ರಾಹ್ಮಣೋತ್ತಮರೊಂದಿಗೆ ಹೇಳಲಾಗಿ,-ಇಷ್ಟು ಚಲುವೆಯಾದ ಹು ಡುಗಿ ನಮ್ಮ ಮನೆಯಲ್ಲಿರಲಿಕ್ಕಾಗದಆರಸರಿಗಾದರೆ ಯೋಗ್ಯವಾಗಿ ಇರುವುದು ಎಂದು ಬ್ರಾಹ್ಮಣೋತ್ತಮರು ಹೇಳಿದರು. ಆಗ ಆ ಮೂಸಿ ಬಹಳ ನಾಚಿಕೆ ಪಟ್ಟು ಮನೆಗೆ ಹೋಗಿ ( ಇವಳು ಮದುವೆಯಾಗುವುದ ಕ್ಕಿಂತ ಮಂಚ ಋತುಮತಿಯಾದರೆ ಧರ್ಮಹಾನಿಯಾಗುವುದು ; ಆದ ವರಿಂದ ಇವಳು ಪೂರ್ವರೂಪವನ್ನು ಧರಿಸಿ ಸಂಚರಿಸಲಿ ' ಎಂದು ನುಡಿ ದಲು, ಅವಳು ಮತ್ತೆ ಇಲಿಯಾದಳು, ಆ ಮೇಲೆ ಆ ಮುನಿ ಈ ಹೆಣ್ಣು ಇಲಿಯನ್ನು ಒಂದು ಗಂಡಿಲಿದು ಹಿಂದೆ ಬಿಟ್ಟುಬಿಟ್ಟನು. ಮುನಿಗೆ ಸೂರ ಮೇಘ ವಾಯು ಮೇರುಪರ್ವತಗಳನ್ನು ಪ್ರತಹ ಮಾಡಿಕೊಳ್ಳುವಷ್ಟು ಶಕ್ತಿಯಿದ್ದರೂ ಅದರ ಮೂಷಿಕಾಜನ್ಮವನ್ನು ಬೇರೆ ಮಾಡಲಿಲ್ಲವಾಯಿತು,