ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿವಿಗ್ರಹವು. 117 ಕಾಸ್ಟ್ಗಳನ್ನೆತ್ತಿಕೊಂಡು ಶತ್ರುಗಳನ್ನು ಗೆಲ್ಲುವುದಕ್ಕಾಗಿ ಮೇಘವ

  • ನ ಸಂಗಡ ಸಂತೋಷದಿಂದ ಆಕಾಶಮಾರ್ಗದಲ್ಲಿ ಹಾರಿ ಗೂಗೆಗಳ ರುವ ಗುಹೆಯ ಬಾಗಿಲಲ್ಲಿ ಆ ಕಡ್ಡಿ ಕಸಗಳನ್ನು ತುಂಬಿದುವು. ಚಿರಂ ಜೀವಿ ತಾನು ತಂದ ಉರಿಗೊಳ್ಳಿಯನ್ನು ತಗುಲಿಸಿ ರೆಕ್ಕೆಗಳಿಂದ ಬೀಸಿ ಉರಿಸಿದನು, ತರುವಾಯ ಹೊಗೆಯ ಉರಿಯ ಹೆಜ್ಜೆ ಗುಹೆಯಲ್ಲಿ ಪ್ರವೇಶಿಸಲು, ಗೂಗೆಗಳು ಭಯಭ್ರಾಂತಿಗೊಂಡು ದಿಕ್ಕು ದಿಕ್ಕಿಗೆ ಓಡಿ, ಗುಹೆಯ ಒಳಗಿನಿಂದ ಹೊರಗೆ ಹೋಗುವುದಕ್ಕೆ ಎಲ್ಲ ಹಾದಿಕಾಣದೆ ತತ್ತರಿಸುತ್ತಿದ್ದುವು.

ಆಗ ರಜ್ಞಾಹನು ತನ್ನ ಸ್ವಾಮಿಯಾದ ಉಪಮರ್ದನ ಹತ್ತಿ ರಕ್ಕೆ ಬಂದು -ಚಿರಂಜೀವಿಯನ್ನು ಕೊಲ್ಲಬಾರದೆಂದು ನೀನೂ ನಿನ್ನ ಮಂತ್ರಿಗಳ ಹೇಳಿದಿರಿ, ಈಗ ಈ ಪ್ರಕಾರ ಅನುಭವಿಸಬೇಕಾಗಿ ಬಂದಿತು. ಇಂತಹ ಪಾಪ ಎಲ್ಲಾದರೂ ಉಂಟೇ ? ತನಗೆ ಹಿತನಾದ ಮಂತ್ರಿಯ ಮಾತುಗಳನ್ನು ಕೇಳದ ಅರಸನು ಬಂಧು ಮಿತ್ರಸಹಿತವಾಗಿ ವಿಪತ್ತನ್ನು ಹೊಂದುವನು-ಎಂದು ನುಡಿದನು. ಉಪಮರ್ದನು ಖಿನ್ನ ನಾಗಿ ಪ್ರತಿಕೂಲವಾದ ಕಾಲದಲ್ಲಿ ಪ್ರಾಣಿಗಳಿಗೆ ಧರ್ಮವು ಅಧರ್ಮ ವಾಗಿ ಕಾಣುವುದು, ಕೆಟ್ಟದಾರಿ ಒಳ್ಳೆಯ ದಾರಿಯಾಗಿ ಕಾಣುವುದು, ಶತ್ರುವು ಮಿತ್ರನಾಗಿ ಕಾಣುವನು. ಆದಕಾರಣ ನನಗೆ ನೀನೆಷ್ಟು ಹಿತ ನಾಗಿ ಹೇಳಿದಾಗ ಕೇಳದೆ ಚಿರಂಜೀವಿಯನ್ನು ಪರಿಗ್ರಹಿಸಿ ಯಮನ ಹತ್ತಿರಕ್ಕೆ ಹೋಗಲಿಕ್ಕೆ ಮಾರ್ಗವನ್ನು ಮಾಡಿಕೊಂಡೆನು. ದೈವವಶ ದಿಂದ ಬಂದುದಕ್ಕೆ ನಾವೇನು ಮಾಡಬಹುದು ? ಪೂರ್ವದಲ್ಲಿ ಬಂದು ಅಕ್ಷಹಿಣಿಯೊಂದಿಗೆ ಪಾಂಡವಬಲವಿರಲಾಗಿ, ರಾತ್ರಿಯಲ್ಲಿ ಅಶ್ಚತ್ತಾನ ನೊಬ್ಬನೇ ಅವರನ್ನು ಸಂಹರಿಸುತ್ತಿರುವ ಸಮಯದಲ್ಲಿ, ಶ್ರೀ ಕೃಷ್ಣ ಮಿಯು ಅಲ್ಲಿ ಇನ್ನೂ ನಿವಾರಿಸಲು ಶಕ್ತನಾದನೇ ? ದೈವಕತ್ರವನ್ನು ತಪ್ಪಿಸಲಿಕ್ಕೆ ಯಾರಿಂದಲೂ ಆಗದು ಎಂದು ಹೇಳಿದನು. ಅಲ್ಲಿ ಉರಿ ಬಲವಾದುದರಿಂದ ಗಗೆಗಳಲ್ಲಾ ಸತ್ತುಹೋದುವು. ಆಗ ಕಾಗೆ ಗಳು ಸಂತೋಷಿಸಿ ತಮ್ಮ ನಿಜನಿವಾಸಕ್ಕೆ ಹೋದುವು.