ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿವಿಗ್ರಹವು " 121 ಯುತ್ತಾ ಇದ್ದನು. ಜಾಲಪಾದನು-ಮೆಲ್ಲಗೆ ನಡೆಯುತ್ತಿದೆ; ಇದೇನು?-ಎಂದು ಕೇಳಿದನು. * ಆಹಾರವಿಲ್ಲದುದರಿಂದ ನಡೆಯಲಾ ರದೆ ಶ್ರಮಪಡುತ್ತೇನೆ. ನೀವು ಕೊಡದಿದ್ದರೆ ನನಗೆ ಆಹಾರವೆಲ್ಲಿಯದು? ಈಗ ನನಗೇನಾದರೂ ಹೊಟ್ಟೆಗೆ ಕೊಟ್ಟು ರಕ್ಷಿಸದಿದ್ದರೆ ಪ್ರಾಣವು ನಿಲ್ಲು ವುದಿಲ್ಲ' ಎಂದು ಮಂದವಿಪನು ನುಡಿದನು. ಆ ಮಾತನ್ನು ಮಂಡೂಕ ರಾಜನು ಕೇಳಿ ಹಾವನ್ನು ಕರುಣಿಸಿ_ಈ ಕೊಳದಲ್ಲಿರುವ ಕಪ್ಪೆಗಳನ್ನು ನಿನಗೆ ಬೇಕಾದಷ್ಟು ನನ್ನ ಆಜ್ಞೆಯ ಮೇಲೆ ತಿಂದು ಶೀಘ್ರವಾಗಿ ನನ್ನ ವಾಹನಕಾರವನ್ನು ನೆರವೇರಿಸು-ಎಂದು ಹೇಳಿದನು. ಮಂದವಿಪನು ಮಹಾಪ್ರಸಾದವೆಂದು ಆತನನ್ನು ಆತನ ಮಂತ್ರಿಗಳ ಸಹಿತ ಅಲ್ಲಿ ಇಳಿಸಿ, ನಡು ನೀರಿಗೆ ಹೋಗಿ ಬೇಕಾದಷ್ಟು ಕಪ್ಪೆಗಳನ್ನು ತಿಂದು ಬಂದು ಮುಂಚಿನ ಹಾಗೆ ವಾಹನದ ಕಲಸವನ್ನು ಮಾಡಿದನು. ಈ ಪ್ರಕಾರ ಕೆಲವು ದಿನಕ್ಕೆ ಜಾಲಪಾದನು ಹೊರತು ಕೊಳದಲ್ಲಿರುವ ಕಪ್ಪೆಗಳನ್ನೆಲ್ಲಾ ಮಂವವಿಷನು ಭಕ್ಷಿಸಿದನು. ತರುವಾಯ ಕೊಳದಲ್ಲಿ ಕಪ್ಪೆಗಳು ಇಲ್ಲದುದರಿಂದ ಕಡೆಯಲ್ಲಿ ಜಾಲಪಾದನನ್ನು ಭಕ್ಷಿಸಿ ಸರ್ಪವು ಸ್ನೇಚ್ಛೆಯಾಗಿ ಹೋಯಿತು. ಹಾಗೆ ನಾನು ಶತ್ರುಗಳನ್ನು ಆಶ್ರಯಿಸಿ ಸಾಧಿಸಿ ಹಗೆತೀರಿಸಿದೆನು, - ಅಗ್ನಿ ಯು ಅರಣ್ಯವನ್ನು ದಹಿಸುವಾಗ ಗಿಡಗಳ ಬೇರುಗಳು ನಶ ಸವಾದುದರಿಂದ ತಿರುಗಿ ಚಿಗುರುವುವು. ಹಾಗೆಯೇ ಶತ್ರುಗಳಲ್ಲಿ ಕೆಲವ ರನ್ನು ನಾಶಮಾಡಿ ಕೆಲವರನ್ನು ಉಳಿಸಿದರೆ, ಕೆಲವು ಕಾಲಕ್ಕೆ ಅವರು ಮರಳಿ ಬಲವಂತರಾಗಿ ಬರುವರು. ಅಗ್ನಿ ಶೇಷ ಋಣಶೇಷ, ರೋಗ ಶೇಪ, ಶತ್ರುಪ್ತ, ಉಳಿದಿದ್ದರೆ ಅವು ದಿನೇ ದಿನೇ ವೃದ್ಧಿಯಾಗುವುವು. ಆದುದರಿಂದ ಶತ್ರುಸೇಪವನ್ನು ಉಳಿಸಕೂಡದು. ನೀನು ಸಿಕ್ಕೇಷವಾಗಿ ಶತ್ರುಗಳನ್ನು ಸಂಹರಿಸಿದ ಭಾಗ್ಯವಂತನು, ಅರಸನು ವ್ಯಸನಗಳಲ್ಲಿ ಸಕನಾಗದೆ ಪ್ರಜೆಗಳನ್ನು ಸಂತೋಷಪಡಿಸುತ್ತಾ, ಕಾಮಕ್ರೋಧ ಲೋಭ ಮೋಹ ಮದ ಮಾತೃಶ್ಯಗಳನ್ನು ಬಿಟ್ಟು, ಸತ್ಯ ಧರ್ಮ ಶೌಚ