ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

122 ಪಂಚತಂತ್ರ ಕಥೆಗಳು. ಸಹನಮುಂತಾದ ಸುಗುಣಗಳನ್ನುಳವನಾಗಿ, ತನ್ನ ಆದ್ರಗಳನ್ನು ಕಾಣ ಲೀಯದೆ ತನ್ನ ಮನುಷ್ಯರ ಛದ್ರಗಳನ್ನು ತಿಳಿದುಕೊಳ್ಳುತ್ತಾ, ದೇಶಕಾಲ ವನ್ನರಿತು, ಸ್ವಾಮಿ ಅಮಾತ್ಯ ಸುತ್ತು ಕೋಶ ರಾಷ್ಟ್ರ ದುರ್ಗ ಬಲ ಎಂಬ ಸಪ್ತಾಂಗಗಳನ್ನು ರಕ್ಷಿಸಿಕೊಳ್ಳುತ್ತಾ, ಮಹಾಧಾರಿ ಕನೆಂದು ಜನರಿಂದ ಹೊಗಳಿಸಿಕೊಂಡು, ತನ್ನ ಕೀರ್ತಿಯನ್ನು ದಿಕ್ಕು ದಿಕ್ಕುಗ ಇಲ್ಲಿ ವ್ಯಾಪಿಸುವಂತೆ ಮಾಡಿದರೆ, ಆತನು ದೇವಾಂಶದಿಂದ ಹುಟ್ಟಿದನೆಂದು ಅರಿಯತಕ್ಕುದು. ಶೂರನು ತೀಕವಾದ ಆಯುಧಗಳಿಂದ ಯುದ್ಧ ಭೂಮಿಯಲ್ಲಿ ಎದುರಿಸಿದ ಶತ್ರುಗಳನ್ನು ಮಾತ್ರ ಕೊಲ್ಲುವನೇ ಹೊರತು ಬಹು ಸೈನ್ಯಗಳನ್ನು ಕೊಲ್ಲಲಾರನು ; ಒಳ್ಳೆಯ ಉಪಾಯದಿಂದಾದರೆ ಶತ್ರುವನ್ನು ಪುತ್ರ ಮಿತ್ರ ಕಳತ್ರ ಬಂಧು ಸಹಿತವಾಗಿ ನಾಶಮಾಡುವನು, ಯಾವ ಕೆಲಸಕ್ಕೆ ಉದ್ಯೋಗಿಸಿದಾಗ್ಯೂ ದೈವವು ಅನುಕೂಲಿಸಿದರೆ ಆ ಕೆಲಸವು ನಿದ್ದಿ ಸುವುದು. ಆದಕಾರಣ ದೈವಾನುಕೂಲತೆಯಿಲ್ಲದ ಪುರುಷ ಪ್ರಯತ್ನದಿಂದ ಮಾತ್ರವೇ ಕಾರವು ಸಿದ್ದಿ ಸದು. ಆದಕಾರಣ ದೈವಾನು ಕೂಲತಯಿಲ್ಲದ ಪುರುಷನ ಪ್ರಯತ್ನವು ನಿರರ್ಥಕವು. ದಶರಥರಾಮನು ತಾಪಸ ವೇಷವನ್ನು ಧರಿಸಿದನು ; ಬಲಿಚಕ್ರವರ್ತಿ ಬಂಧಿಸಲ್ಪಟ್ಟನು ; ಪಾಂಡುಪುತ್ರರು ವನವಾಸವನ್ನು ಅನುಭವಿಸಿದರು; ಯಾದವರು ಒಬ್ಬ ರೊಡನೊಬ್ಬರು ಹೋರಾಡಿ ಸತ್ತರು ; ನಳ ಮಹಾರಾಜನು ಸಕಲ ಕಷ್ಟೆ ಗಳನ್ನೂ ಅನುಭವಿಸಿದನು; ಭೀಷ್ಮನು ಶರತಲ್ಪದಲ್ಲಿ ಮಲಗಿಕೊಂಡನು; ನಾರಾಯಣನು ವಾಮನಾಕಾರವನ್ನು ತಾಳಿದನು ; ರಾವಣಾಸುರನು ಕಾರ್ತವೀರಾಂರ್ಜನನ ಪರಾಕ್ರಮಕ್ಕೆ ಹಿಂಜರಿದು ಇದ್ದನು. ಹೀಗೆ ಜಗತ್ತೆಲ್ಲಾ ದೈವಪ್ರಯತ್ನದಿಂದ ನಡೆಯುತ್ತದೆ. ಇದನ್ನು ಮೂಢನಾ ದವನು ತಿಳಿದುಕೊಳ್ಳಲಾರನು; ಬುದ್ದಿವಂತನಾದವನು ತಿಳಿದುಕೊಂಡು ಸ್ಥಿರಚಿತ್ರನಾಗಿರುವನು. ಶಾಸ್ತ್ರ ದಿಂದ ಬುದ್ಧಿಯ, ಸಿಹಿನೀರಿನಿಂದ ಹೊಳಯೂ, ಚಂದ್ರನಿಂದ ರಾತ್ರಿಯೂ, ನೀತಿಯಿಂದ ದೊರೆತನವೂ ಅಲಂಕರಿಸಲ್ಪಡುವುವು.