ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜ್ಞನಾಶವು. 125 ಬೀಳುವಾಗ ಕಿವಿಗಳಿಗೆ ಇಂಪಾದ ಶಬ್ದವನ್ನು ಮಾಡುತ್ತವೆಂದು ಕೆಲವು ಹಣ್ಣುಗಳನ್ನು ಉದುರಿಸಿತು. ಬಳಿಕ ಅಲ್ಲಿ ಕೆಳಗಿದ್ದ ಕಕಚವೆಂಬ ಹೆಸರುಳ್ಳ ಮೊಸಳಯ ದೈವವಶದಿಂದ ಒಳಗಿನಿಂದ ನೀರಿನ ಮೇಲಕ್ಕೆ ಬಂದು ಆ ಹಣ್ಣುಗಳನ್ನು ಭಕ್ಷಿಸಿತು, ತರುವಾಯ ಅದು ಮಧು ರವಾದ ಆಹಾರವು ಸಿಕ್ಕುವುದರಿಂದ ತೃಪ್ತಿ ಹೊಂದಿ ಆ ಬಲವರ್ಧನನೆಂಬ ಕೋತಿಯೊಂದಿಗೆ ಸ್ನೇಹಮಾಡಿ ಅಲ್ಲೇ ಬಹುದಿವಸವಿದ್ದಿತು. ಅಪ್ಪರಲ್ಲಿ ಆ ಮೊಸಳದು ಹೆಂಡತಿ ಗಂಡನನ್ನು ಕಾಣದೆ ಅವ ನನ್ನು ಹುಡುಕಿ ನೋಡುವುದಕ್ಕಾಗಿ ಒಬ್ಬ ದೂತಿಕೆಯನ್ನು ಕಳುಹಿ ಸಲು, ಆ ದೂತಿಕೆ ಹುಡುಕುತ್ತಾ ಬಂದು ಮೊಸಳಯ ಕೋತಿ ಯನ್ನೂ ಕಂಡು ಬೇಗ ಹೋಗಿ ಅಮ್ಮಾ, ನಿನ್ನ ಗಂಡನು ಕೋತಿ ದೊಂದಿಗೆ ಕೂಡಿಕೊಂಡು ಆಡುತ್ತಾನೆ-ಎಂದು ಉಂಟಾದ ಕೆಲವನ್ನೂ ಇಲ್ಲದ ಕೆಲವನ್ನೂ ಹೇಳಿದಳುಬಳಿಕ ಒಂದು ದಿನ ಮೊಸಳಯು ಕೆಲವು ಮಾವಿನ ಹಣ್ಣನ್ನು ತೆಗೆದುಕೊಂಡು ಮನೆಗೆ ಹೋಗಲು, ಹೆಂಡತಿ ದೂರದಿಂದ ನೋಡಿ ಮೈಗೆ ತೈಲವನ್ನು ಹಚ್ಚಿಕೊಂಡು ಮಲಗಿದ್ದಳು, ಅವಳನ್ನು ನೋಡಿ ಮೊಸಳ ಬಹು ವ್ಯಸನವನ್ನು ಹೊಂದಿ ನಿನಗೆ ಮೈಯಲ್ಲೇನು ? ಏಕೆ ಮಲಗಿದ್ದೀಯೆ ? ಎಂದು ಕೇಳಿತು. 'ನನಗೆ ಅಸಾಧ್ಯವಾದ ರೋಗ ಬಂದಿತು. ಈವರೆಗೆ ಬದುಕಿರುವುದೇ ಹೆಚ್ಚು . ನಿನ್ನನ್ನು ನೋಡಿ ಪ್ರಾಣಬಿಡಬೇಕೆಂಬ ಆಶೆಯಿಂದ ಬದುಕಿದ್ದೇನೆ, ಎಂಮ ಅವಳು ಹೇಳಿದಳು. ಆ ಮಾತನ್ನು ಗಂಡು ಮೊಸಳಯು ಕೇ? ದಿಗಿಲುಪಟ್ಟು ನನ್ನ ಪ್ರಾಣವನ್ನಾದರೂ ಕೊಟ್ಟು ನಿನ್ನನ್ನು ಬದುಕಿಸು ತೇನೆ - -ಎಂದು ಹೇಳಿ, ವೈವ್ಯನು ನೋಡಿದನೋ? ಏನು ಹೇಳು ತಾನೆ? ಎಂದು ಕೇಳಿತು. ವೈದ್ಯನು ನೋಡಿ-ಕಪಿಯ ಕರುಳು ಸಿಕ್ಕಿದರೆ ಔಪಧಮಾಡಿ ಕೊಡುವೆನು, ಇಲ್ಲದಿದ್ದರೆ ಬದುಕಲಾರೆ, -- ಎಂದು ಹೇಳಿದನು' ಎಂದು ಹೆಣ್ಣು ಮೊಸಳ ನುಡಿಯಿತು. ಆ ಮೇಲೆ ಕಚಕನು ತನ್ನಲ್ಲಿ ತಾನು-ಇದು ಏನು ಕಪ್ಪ ಸಂಭವಿಸಿತು ? ಬಲ ವರ್ಧನನು ಹೊರತು ನನಗೆ ಕೊತಿ ಎಲ್ಲಿ ಸಿಕ್ಕಿತು ? ಕರುಳನ್ನು