ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

17) 126 ಪಂಚತಂತ್ರ ಕಥೆಗಳು, ಎಲ್ಲಿಂದ ತರಲಿ? ಅವನನ್ನು ಕೊಂದರೆ ಬಹಳ ಪಾಪ, ಆದಾಗ್ಯೂ ಹೆಂಡತಿಯನ್ನು ಬದುಕಿಸುವುದು ಮುಖ್ಯವಾದ ಕೆಲಸವು ಒಳ್ಳೆಯ ಗುಣವುಳ ಮಿತ್ರನು, ಹೆಂಡತಿ, ಈ ಇಬ್ಬರಲ್ಲಿ ಮಿತ್ರನಗಿಂತ ಹೆಂಡತಿಯೇ ಶ್ರೇಷ್ಟಳು. ಆದಕಾರಣ ಮಿತ್ರನನ್ನು ಕೊಂದು ಹೆಂಡತಿಯನ್ನು ಬದುಕಿಸುವುದು ಧರ್ಮವು-ಎಂದು ನಿಕ್ತ ಯಿಸಿಕೊಂಡು ಬಲವರ್ಧನ ಹತ್ತಿರಕ್ಕೆ ಮೆಲ್ಲಗೆ ಹೋದನು. ಅದನ್ನು ನೋಡಿ ನೀನೇಕೆ ಮೆಲ್ಲಗೆ ನಡೆಯುತ್ತೀಯೆ ?-ಎಂದು ಬಲವರ್ಧನು ಕೇಳಿದನು. - ನಿನ್ನ ಸಂಗಡ ಸ್ನೇಹಮಾಡಿದೆನಾದಕಾರಣ ನಿನ್ನನ್ನು ನನ್ನ ಮನೆಗೆ ಒಂದುಸಲವಾ ದರೂ ಕರೆದುಕೊಂಡು ಹೋಗದೆ ಹೋದೆನಲ್ಲಾ ಎಂಬ ಸಂಕೋಚ ದಿಂದ ಮೆಲ್ಲಗೆ ನಡೆಯುತ್ತೇನೆ. ಈ ಲೋಕದಲ್ಲಿಯ ಜನರು ತಮ್ಮ ಗೊಂದು ಪ್ರಯೋಜನವನ್ನು ಉದ್ದೇಶಿಸಿ, ಒಬ್ಬರಮೇಲೆ ಪ್ರೀತಿಯಾಗಿ ರುತ್ತಾರೆ. ನೀನು ಪ್ರಯೋಜನವನ್ನು ಉದ್ದೇಶಿಸದೆಯೆ ದಯೆಯುಳ್ಳ ವನಾಗಿ ಇದ್ದೀಯೆ-ಎಂದು ಮೊಸಳ ಹೇಳಿತು. 'ಎಲೆ, ಇದು ಒಂದು ಉಪಕಾರವೇ? ನಿನ್ನ ಸಂಗಡ ಸಂತೋಷವಾಗಿ ಇಲ್ಲಿ ವಾಸಮಾಡುತ್ತಾ ರಾಜಹೋದುದರಿಂದ ಬಂದ ದುಃಖವನ್ನು ಹೋಗಲಾಡಿಸಿಕೊಳ್ಳುತ್ತಿ ದೇನೆ. ದುಃಖವನ್ನೂ ಭಯವನ್ನೂ ಹೋಗಲಾಡಿಸಿ ರಕ್ಷಿಸುವಂತಹ ಶ್ರೇಷ್ಠ ನಾದ ಮಿತ್ರನು ಪ್ರೀತಿಗೂ ನಂಬಿಕೆಗೂ ಪಾತ್ರನು. ಮಿತ್ರ ವೆಂಬ ಈ ಅಕ್ಷರದಯವನ್ನು ಯಾವನು ಕಲ್ಪಿಸಿದನೋ ಅವನು ಮಹಾ ಪುಣ್ಯಾತ್ಮನು-ಎಂದು ವಾನರನು ನುಡಿದನು. ಮೊಸಳ ಆ ಮಾತುಗ ಳನ್ನು ಕೇಳಿ ಸಂತೋಷಿಸಿ-ನೀನು ನನ್ನ ಬೆನ್ನಿನಮೇಲೆ ಹತ್ತಿ ನನ್ನ ಮನೆಯನ್ನು ಬಂದು ನೋಡಬೇಕು ಎಂದು ಕೇಳಿತು. ಬಲವರ್ಧನು ಒಳ್ಳೆಯದೆಂದು ಮೊಸಳಯ ಬೆನ್ನನ್ನೇರಿದನು. ಬಳಿಕ ಕ್ರಕಚನು ಬಲವರ್ಧನನ್ನು ಮೇಲೆ ಹತ್ತಿಸಿಕೊಂಡು ನಡೆ ಮುತ್ತಾ ಇಂತೆಂದು ವಿತರ್ಕಿಸಿದನು: “ಈಗ ನಾನು ಕಾರ ವನ್ನು ದೊಡ್ಡದು ಮಾಡಿ ಮಿತ್ರನನ್ನು ಕೊಲ್ಲುತ್ತೇನೆ. ಇದು ಮಹಾ ದಾರುಣವಾದ ಕೆಲಸ. ನಾನು ನಿಂದೆಯ ಪಾಲಾದೆನು, ಚಿನ್ನದ ಗುಣ