ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಜ್ಞನಾಶವು. tg17 ಗಳನ್ನು ತಿಳಿದುಕೊಳ್ಳಬೇಕಾದರೆ ಒರೆಗಲ್ಲಿನ ಮೇಲೆ ಒರೆದು ತಿಳಿದುಕೊ ಳ್ಳಬಹುದು. ಪುರುಷನ ಗುಣಗಳನ್ನು ತಿಳಿದುಕೊಳ್ಳಬೇಕಾದರೆ ಅವನ ನಡವಳಿಕೆಯಿಂದ ತಿಳಿದುಕೊಳ್ಳಬಹುದು. ವೃಷಭದ ಗುಣಗಳನ್ನು ತಿಳಿ ದುಕೊಳ್ಳಬೇಕಾದರೆ ಭಾರವನ್ನು ಹೊರಿಸಿ ತಿಳಿದುಕೊಳ್ಳಬಹುದು. ಹೆಂಗ ಸರ ಗುಣಗಳನ್ನು ತಿಳಿದುಕೊಳ್ಳಬೇಕಾದರೆ ಯಾವ ಉಪಾಯದಿಂದಲೂ ಎಷ್ಟು ಬುದ್ಧಿವಂತನಾದಾಗ್ಯೂ ತಿಳಿದುಕೊಳ್ಳಲಾರನು. ಇಂಥ ೩ ) ನಿಮಿತ್ತವಾಗಿ ನಾನು ಮತ್ರವಧೆಯನ್ನು ಹೇಗೆ ಮಾಡಲಿ ?-ಎಂದು ವಿತ ರ್ಕಿಸುವ ಸಮಯದಲ್ಲಿ ಬಲವರ್ಧನು ಆ ಮಾತನ್ನು ಕೇಳಿ, ಎಲೆ ಸ್ನೇಹಿತನೇ, ಈಗ ನೀನೇನು ಹೇಳಿದೆ ? ಎಂದು ಕೇಳಿದನು. ಕ್ರಿಕೆ ಚನು ಏನೂ ಇಲ್ಲವೆಂದನು. ಕಕಚನು ಮರೆಪಡಿಸಿದುದರಿಂದ ವಾನ ರನು ಸಂದೇಹಿಸಿ-ನಾನು ಕೇಳಿದುದಕ್ಕೆ ಮೊಸಳ ಏನೂ ಹೇಳದೆ ಯಿದೆ, ಇದಕ್ಕೆ ಕಾರಣವೇನು? ನಾನು ಮೊಸಳಯ ಮನಸ್ಸಿನಲ್ಲಿಯ ಮಾತನ್ನು ನನ್ನ ಪ್ರಜ್ಞೆಯಿಂದ ಹೊರಗೆ ತೆಗೆವೆನು-ಎಂದು ನಿಶ್ಚ ಯಿಸಿ, “ಎಲೈ ಸ್ನೇಹಿತನೇ, ನಿನ್ನ ಮನೆಯಲ್ಲಿ ನನ್ನ ತಂಗಿಗೆ ಸಮಾನ ೪ಾದ ನಿನ್ನ ಹೆಂಡತಿ ಸುಖವಾಗಿ ಇದ್ದಾಳೆಯೇ?' ಎಂದನು. ( ಅವಳು ಅಸಾಧ್ಯವಾದ ವ್ಯಾಧಿಯಿಂದ ಕಮ್ಮಪಡುತ್ತಿದಾಳ, ಬದುಕುವುದು ಕಪ್ಪ' ಎಂದು ಮೊಸಳೆ ಹೇಳಲು, ' ವೈದ್ಯರಿಗೂ ಮಾಂತ್ರಿಕರಿಗೂ ತೋರಿಸಿ ಆ ವ್ಯಾಧಿಗೆ ಏನಾದರೂ ಪ್ರತಿಕ್ರಿಯೆಯನ್ನು ಮಾಡಿಸಲಿಲ್ಲವೇ ? ' ಎಂದು ವಾನರನು ಕೇಳಿದನು. ವೈದ್ಯನನ್ನು ಕೇಳಿದುದಕ್ಕೆ ಕೋತಿಯ ಕರು *ನಲ್ಲಿ ಔಪಧಮಾಡಿಕೊಟ್ಟರೆ ಹೊರತು ಬದುಕುವುದಿಲ್ಲವೆಂದು ಅವರು ಹೇಳಿದರೆಂದು ಕಕಚನು ಪ್ರಿಯಳನ್ನು ಕುರಿತು ದುಃಖದಿಂದ ಸ್ಮೃತಿ ತಪ್ಪಿ ವಾನರನಿಗೆ ಉತ್ತರಕೊಟ್ಟನು. ಅದನ್ನು ಕೇಳಿ ವಾನರನು ತನ್ನ ಪ್ರಾಣಹೋಯಿತೆಂದು ಯೋಚಿಸಿ ( ಅಯ್ಯೋ ವ್ಯರ್ಥವಾಗಿ ಸತ್ತೆನು! ಮುಪ್ಪಿನಲ್ಲಿ ಇಂದ್ರಿಯಗಳನ್ನು ಜಯಿ ಸದವನಾದುದಕ್ಕೆ ಫಲವನ್ನು ಅನಭವಿಸುತ್ತೇನೆ. ರಾಗದೊಂದಿಗೆ ಕೂಡಿ ಕೊಂಡವನು ಅರಣ್ಯದಲ್ಲಿ ಬಹುಕಾಲವಿದ್ದಾಗ್ಯೂ ಫಲವಿಲ್ಲ; ಇಂದ್ರಿಯ