ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪಂಚತಂತ್ರ ಕಥೆಗಳು.

130

ಇನ್ನು ಮೇಲೆ ನೀನೇ ಸ್ನೇಹಿತರಿಗೆ ಹಿತವನ್ನು ಮಾಡಹೋಗುತ್ತೀಯೆ. ನೀನೂ ನಾನೂ ನಿಂಹಕ್ಕೆ ಪ್ರಧಾನಭ್ರತರಾಗಿ ಇರೋಣ. ಸಾವಿರ ಮಾತು ಏತಕ್ಕೆ? ಮನುಷ್ಯರಲ್ಲಿ ಧರ್ಮಾರ್ಥಕಾಮಗಳನ್ನು ಕೋರು ವವರಿಗೆ ಶುಭಗಳು ಬಹು ವಿಫ್ಟ್ ಗಳುಳೆವಾಗಿ ಇರುವುವು-ಎಂದು ಹೇಳಲಾಗಿ, ಕತ್ತೆ ಕೇಳಿ, ನಾನು ನಿನ್ನ ಸಂಗಡ ಬರುತ್ತೇನೆ ಎಂದು ಹೇಳಿತು. ಆಗ ನರಿ- ನೀನು ಹೆದರಬೇಡ, ಬಾ; ನನ್ನನ್ನು ನಂಬು, -- ಎಂದು ಬುದ್ದಿ ಯಿಲ್ಲದ ಕತ್ತೆಯನ್ನು ತಿರುಗಿ ಕರೆದುಕೊಂಡು ಹೋಗಿ ಸಿಂಹಕ್ಕೆ ಒಪ್ಪಿಸಿತು. ತರುವಾಯ ಸಿಂಹವು ಅದನ್ನು ಪ್ರೀತಿಯಾ ಗಿಯೇ ಹಿಡಿದುಕೊಂಡು ಕೊಂದು, ನರಿಯನ್ನು ನೋಡಿ ಸೀನು ದುಸ್ತ್ರ ರವಾದ ಕಾರವನ್ನು ಮಾಡಿದೆ. ನಿನ್ನಂತಹ ಸಮರ್ಥರು ಈ ಲೋಕ ದಲ್ಲಿ ಇಲ್ಲವೆಂದು ಹೊಗಳಿ, ನೀನು ಹಣಮಾತ್ರ ಇದನ್ನು ನೋಡಿ ಕೊಂಡಿರು. ನಾನು ಸ್ನಾನಮಾಡಿ ನಿತ್ಯ ಕರ್ಮವನ್ನು ತೀರಿಸಿಕೊಂಡು ಬಂದು ಈ ಮದ್ದನ್ನು ತಿನ್ನುತ್ತೇನೆ ಎಂದು ಹೇಳಿ ಹೋಯಿತು. ಸಿಂಹವು ಹೋಗುತ್ತಲೇ, ನರಿ ಇದು ಏನೋ ಮಹಷಧವೆಂದು ನೆನಸಿ ಕತ್ತೆಯ ಕಿವಿಗಳನ್ನೂ ಕರುಳನ್ನೂ ತಾನೇ ಭಕ್ಷಿಸಿತು. ಅನಂತರ ಸಿಂಹವು ಒಂದು ಕತೆಯ ಕಿವಿಗಳೂ ಕರುಳ ಎಲ್ಲಿ ? - ಎಂದು ಕೇಳಿತು. ಬುದ್ಧಿಹೀನನಿಗೆ ಕಿವಿಗಳ ಕರುಳ ಉಟೋ ? ಅವು ಇದ್ದರೆ ಅವನು ಹೀಗೇಕಾದಾನು ?-ಎಂದು ನರಿ ಪ್ರತ್ಯುತ್ತರಕೊ ಟ್ಟಿತು, ಅಹುದೇನೋ ಎಂದು ಸಿಂಹವು ಸುಮ್ಮನೆ ಇದ್ದಿತು. ಆದಕಾ ರಣ ನಾನು ಮುದಿಕೊತಿಯೇ ಹೊರತು ಕತ್ತೆಯಲ್ಲವೆಂದು ಹೇಳಿ ದೆನು. ಇನ್ನು ಮೇಲೆ ನನ್ನನ್ನು ವಂಚಿಸಲಿಕ್ಕೆ ನಿನ್ನಿಂದಾಗದು, ನೀನು ಹೋಗಿ ನೀರು ಕುಡಿಯುತ್ತಾ ಇರಬೇಕು-ಎಂದು ವಾನರನು ಹೇಳಲು, ಕೇಳಿ ಮೊಸಳೆ ಸಿಕ್ಕಿದುದನ್ನು ಹೋಗಲಾಡಿಸಿಕೊಂಡು ಹೋಯಿತು.

ಇಂತು ವಿಷ್ಣು ಶರ್ಮನು ಹೇಳಿದ ಅಬ್ದ ನಾಶವೆಂಬ ನಾಲ್ಕನೆಯ

ತಂತ್ರವನ್ನು ಕೇಳಿ ರಾಜಕುಮಾರರು ಬಹಳ

ಸಂತೋಷಚಿತ್ತರಾದರು.

--