ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

SECTION V.

INCONSIDERATENESS.

ಅಸಂಪ್ರೇಕ್ಷಕಾರಿತ್ಪವು.

'ನಿಜವನ್ನೂ ಸುಳ್ಳನ್ನೂ ತಿಳಿದುಕೊಳ್ಳಲಾರದೆ ಕ್ರೋಧದಿಂದ ಜನ

ಗಳಿಗೆ ಕೇಡಮಾಡುವವನು ಪಾವನ್ನು ಕೊಂದ ಮುಂಗನಿಯನ್ನು ವಧಿ ನಿದ ಬ್ರಾಹ್ಮಣನ ಹಾಗೆ ಮಹತ್ತಾದ ಮನೋವ್ಯಥೆಯನ್ನು ಹೊಂದು ವನು ' ಎಂದು ವಿಷ್ಣು ಶರ್ಮನು ಹೇಳಲಾಗಿ ರಾಜಪುತ್ರರು ಕೇಳಿಹಾವನ್ನು ಮುಂಗಸಿ ಏಕೆ ಕೊಂದಿತು ? ಮುಂಗಸಿಯನ್ನು ಬ್ರಾಹ್ಮಣನು ಏಕೆ ವಧಿಸಿದನು ? ನಮಗೆ ಅದನ್ನು ತಿಳಿಯಹೇಳಬೇಕು-ಎನಲು, ವಿಷ್ಣು ಶರ್ಮನಿಂತೆಂದನು.

'ಗೌಡದೇಶದಲ್ಲಿ ಒಂದು ಅಗ್ರಹಾರವುಂಟು. ಅದರಲ್ಲಿ ದೇವಶರ್ಮ

ನೆಂಬ ಬ್ರಾಹ್ಮಣನಿದ್ದನು. ಆತನ ಹೆಂಡತಿ ಯಜ್ಞಸೇನೆ, ಆಕೆಯು ಪೂರಕೃತಪುಣ್ಯದಿಂದ ಗರ್ಭವನ್ನು ಧರಿಸಿದಳು. ಬ್ರಾಹ್ಮಣನು ಅವ ಳನ್ನು ನೋಡಿ ಬಹಳ ಸಂತೋಷದಿಂದ ಅನಂತವಾದ ಕೋರಿಕೆಗಳನ್ನು ಕೋರುತ್ತಾ-ಎಲೈ ಪ್ರಿಯಳೇ, ನಿನ್ನ ಗರ್ಭದಲ್ಲಿರುವ ಕುಮಾರನು ನಮ್ಮ ಕುಲವನ್ನೆಲ್ಲಾ ಉದ್ಧರಿಸತಕ್ಕವನು. ಮರಾಭಾಗ್ಗವಂತನುಎಂದು ಹೇಳಿದನು. ಹೆಂಡತಿ ಗಂಡನನ್ನು ನೋಡಿ-ಇಂತಹ ಕೋರಿಕೆ ಗಳನ್ನು ಕೋರುವುದು ಯುಕ್ತವಲ್ಲ. ಅನಾಗತಕಾರಗಳನ್ನು ಕುರಿತು ಚಿಂತೆಯನ್ನು ಯಾವನು ಮಾಡುತ್ತಾನೋ ಅವನು ಸೋಮಶರ್ಮನ ತಂದೆಯ ಹಾಗೆ ಬಹಳ ವಿವಾದವನ್ನು ಹೊಂದುವನು-ಎಂದು ನುಡಿ ದಳು. “ ಅದು ಹೇಗೆ' ಎಂದು ಬ್ರಾಹ್ಮಣನು ಕೇಳಲು, ಅವನ ಹೆಂಡತಿ ಹೇಳುತ್ತಾಳ.