ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪಂಚತಂತ್ರ ಕಥೆಗಳು.

132

Castles in the air—The Brahmin and the

flour of fried grain.

ವಿದ್ಯಾಭ್ಯಾಸವನ್ನು ಮಾಡುತ್ತಿದ್ದ ಒಬ್ಬ ಬ್ರಾಹ್ಮಣಕುಮಾರನು ಒಬ್ಬ ಬ್ರಾಹ್ಮಣನ ಮನೆಯಲ್ಲಿ ಶ್ರಾದ್ಧ ದಲ್ಲಿ ನಿಮಂತ್ರಿತನಾಗಿ ಭೋಜನ ಮಾಡಿ ಬರುತ್ತಿರಲಾಗಿ, ಮತ್ತೊಬ್ಬ ಬ್ರಾಹ್ಮಣನ ಮನೆಯಲ್ಲಿ ಆತನಿಗೆ ಅರಳಹಿಟ್ಟನ್ನು ಕೊಟ್ಟರು. ಅದಕ್ಕೆ ಅವನು ಸಂತೋಷಿಸಿ ಅದನ್ನು ಬಂದು ಮಡಕೆಯಲ್ಲಿಟ್ಟು ತನ್ನ ಹತ್ತಿರ ಮಡಗಿಕೊಂಡು ಬಂದು ಜಗ ಲಿಯ ಮೇಲೆ ಮಲಗಿ ನಿದ್ರೆಹಿಡಿವ ಸಮಯದಲ್ಲಿ, ಮಿತಿಯಿಲ್ಲದ ಕೋರಿಕೆ ಗಳನ್ನೆಲ್ಲಾ ಕೋರಸಾಗಿದನು. ಹೇಗೆಂದರೆ : ' ಈಗ ನನ್ನ ಬಳಿಯಲ್ಲಿ ಅರಳಹಿಟ್ಟು ಇದೆಯಷ್ಟೆ. ನಾನು ಈ ಹಿಟ್ಟನ್ನು ಮಾರಿ ಕರೆವ ಆತನ್ನು ಕೊಂಡುಕೊಳ್ಳುವೆನು. ಅದಕ್ಕೆ ಎರಡು ಮರಿಗಳು ಹುಟ್ಟುವುವು. ಆ ಎರಡೂ ಎರಡೆರಡು ಮರಿಗಳನ್ನು ಹಾಕುವುವು. ಆ ನಾಲ್ಕಕ್ಕೂ ಎಂಟು ಮರಿಗಳು ಹುಟ್ಟುವುವು. ಅವು ಸ್ವಲ್ಪ ಕಾಲಕ್ಕೆ ಸಾವಿರಾರು ಮೇಕೆಗಳಾಗುವುವು. ತರುವಾಯ ಅವುಗಳನ್ನು ಮಾರಿ ನೂರಾರು ಹಸ ಗಳನ್ನು ಕೊಳ್ಳುವೆನು. ಅವು ಪ್ರತಿ ಸಂವತ್ಸರವೂ ಈನುತ್ತಿರುವುವು. ಕೆಲವು ಸಂವತ್ಸರಕ್ಕೆ ಸಾವಿರ ಸಂಖ್ಯೆಗಳ ಹಸುಗಳೂ ಕಡಸುಗಳ ಹೋರಿಗಳೂ ದೊಡ್ಡಿ ತುಂಬಿ ಇರುವುವು. ಕೆಲವು ಹೋರಿಗಳನ್ನು ನೇಗಿಲುಗಳಿಗೆ ಕಟ್ಟಿ ಉಳಿಸಿ ಸಾಗುವಳಿ ಮಾಡಿ ಹುಟ್ಟುವಳಿಯಾದ ಧಾನ್ಯ ವನ್ನು ಮಾರುವೆನು; ಕೆಲವು ಹೋರಿಗಳನ್ನು ವಿಕ್ರಯಿಸುವೆನು, ಕೆಲವು ಎತ್ತುಗಳನ್ನು ಹೇರಾಟಕ್ಕೆ ಹಾಕಿ ವಾಪಾರಮಾಡಿ ಲಾಭಸಂಪಾದಿಸು ವೆನು, ಆ ಮೇಲೆ ಒಂದು ಉಪ್ಪರಿಗೆಯ ಮನೆಯನ್ನು ಕಟ್ಟಿಸಿ ನಿಲುವು ಕನ್ನಡಿಗಳು ಮುಂತಾದ ಒಳ್ಳೆಯ ಸಾಮಾನುಗಳಿಂದ ಅದನ್ನು ಚೆನ್ನಾಗಿ ಅಲಂಕರಿಸುವೆನು. ಇವುಗಳನ್ನೆಲ್ಲಾ ನೋಡಿ ನಾನು ಹಣಗಾರನೆಂದು ತಿಳಿದುಕೊಂಡು ನನಗೆ ಹೆಣ್ಣುಗಳನ್ನು ಕೊಡುತ್ತೇವೆಂದು ಅನೇಕರು ಬರುವರು. ಆಗ ಕುಲವೂ ರೂಪವೂ ಗುಣವೂ ಉಳ್ಳ ಹೆಣ್ಣನ್ನು ಮದುವೆ ಮಾಡಿಕೊಂಡು ಅವಳ ಸಂಗಡ ಸಂಸಾರಮಾಡುತ್ತಾ ಇರುವಲ್ಲಿ ನನಗೆ