ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಸಂಪ್ರೇಕ್ಷಕಾಂತ್ಪವು.

133

ಒಬ್ಬ ಮಗನು ಹುಟ್ಟುವನು. ಅವನಿಗೆ ಸೋಮಶರನೆಂಬ ಹೆಸರು ಇಡು ವೆನು. ಅವನಿಗೆ ಕೆಲವು ತಿಂಗಳಾವಮೇಲೆ ಚಿನ್ನದ ಉಡಿಗೆಜ್ಜೆ ಉಡಿ ದಾರ ಕಂಠಸರ ಬಳ ಸರಪಣಿ ಗೆಜ್ಜೆ ಗೊಲಸು ವಜ್ರದ ಹತ್ತಕಡಕು ಮುಂತಾದ ಒಡವೆಗಳನ್ನಿ ಕುವನು, ಆಗ ನನ್ನ ಹೆಂಡತಿ ನನ್ನ ಮೇಲೆ ಬಹಳ ಪ್ರೀತಿಯಾಗಿರುವಳು. ಆದಾಗ್ಯೂ ನಾನು ಅವಳಿಗೆ ಬಹಳ ಸಲುಗೆಯನ್ನು ಕೊಡೆನು. ಯಾವಾಗಲಾದರೂ ಅವಳು ನನ್ನ ಸಂಗಡ ಸರಸವಾಡಲಿಕ್ಕೆ ಬಂದರೆ ಅವಳನ್ನು ಒಡೆದು ಆಚೆಗೆ ಕಳುಹಿಸುವೆನು ? ಎಂದು ತಾನು ನಿಜವಾಗಿ ಒದೆಯು ಹೋಗುವವನ ಹಾಗೆ ಕಾಲನ್ನು ಝಾಡಿಸಲು, ಆ ಹಿಟ್ಟಿರುವ ಮಡಕೆಗೆ ತಗಲಿ ಮಡಕೆ ಚೂರುಚೂರಾಗಿ ಹಿಟ್ಟು ಮಣ್ಣಿನಲ್ಲಿ ಬೆರೆಸಿ ಹೋಯಿತು. ಆಗ ಬ್ರಾಹ್ಮಣನು ಕನಸು ಕಂಡು ಎಚ್ಚರವಾದವನಹಾಗೆ ಎಣಿಸಿಕೊಂಡು ಬಹಳ ವ್ಯಸನಪಟ್ಟನು. ಆದಕಾರಣ ಅನಾಗತಕಾರಗಳನ್ನು ಕುರಿತು ಚಿಂತೆಯನ್ನು ಯಾವನು ಮಾಡುವನೊ ಅವನು ಸೋಮಶರನ ತಂದೆಯಂತೆ ಬಹಳ ವಿಷಾದ ವನ್ನು ಹೊಂದುವನೆಂದು ಹೇಳಿದಳು, ಬ್ರಾಹ್ಮಣನು ನಾಚಿಕೆಪಟ್ಟು ಸುಮ್ಮನಿದ್ದನು.

It is improper to do a thing hastily without

knowing its nature.

ತರುವಾಯ ಕೆಲವು ದಿನಕ್ಕೆ ಪ್ರಸವಕಾಲವು ಬರುತ್ತಲೇ ಆ

ಬ್ರಾಹ್ಮಣ ಶುಭಲಕ್ಷಣಸಂಪನ್ನನಾದ ಮಗನನ್ನು ಹೆತ್ತಳು. ಬಳಿಕ ಒಂದು ಪುಣ್ಯದಿನದಲ್ಲಿ ಆಕೆ ಮಗನನ್ನು ಗಂಡನಿಗೆ ಒಪ್ಪಿಸಿ ಸ್ನಾನಮಾಡು ವುದಕ್ಕಾಗಿ ಹೊಳಗೆ ಹೋದಳು. ಆಕೆ ಸ್ನಾನಕ್ಕೆ ಹೋದ ಕೂಡಲೇ, ಆ ದೇಶದ ಅರಸನು ಅಂದು ಪುಣ್ಯದಿನವಾದುದರಿಂದ ಅಗ್ರಹಾರದಲ್ಲಿರುವ ಬ್ರಾಹ್ಮಣರನ್ನು ದಾನಕೊಡುವುದಕ್ಕಾಗಿ ಕರೆಯ ಕಳುಹಿಸಿದನು. ಆಗ ಕೆಲವರು ಬಾಹ್ಮಣರು ಹೋಗುತ್ತಿರಲಾಗಿ, ಈ ಬ್ರಾಹ್ಮಣನು ವಿಚಾರಗ್ರಸ್ತನಾಗಿ ಹೆಂಡತಿಯನ್ನು ಏತಕ್ಕೆ ಕಳುಹಿಸಿದೆನು ? ನಾನು