ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚತಂತ್ರ ಕಥೆಗಳು.

136

ಹೋದರೆ ಈಗ ಈ ಶಿಶುವನ್ನು ರಕ್ಷಿಸುವವರು ಯಾರು ? ಅರಸನು ನನ್ನನ್ನು ಯಾವಾಗ ಕರೆಯಿಸುವನೋ, ಯಾವಾಗ ದಾನಕೊಡುವನೋ ಯಾವಾಗ ಭಾಗ್ಯವಂತನಾಗುವೆನೋ ಎಂದು ಕಾಲವನ್ನು ನಿರೀಕ್ಷಿಸು ತಿದ್ದು, ಸಮಯ ಬಂದಾಗ ಹೋಗುವುದಕ್ಕೆ ಸಂದರ್ಭಿಸದೆ ಹೋಯಿ ತು-ಎಂದು ಚಿಂತಿಸಿ, ಬಹುದಿನದಿಂದ ಕೂಸಿನಂತೆ ಸಾಕಿದ ಮುಂಗಸಿ ಯನ್ನು ಮಗನ ಹತ್ತಿರ ಕಾವಲಿಟ್ಟು ಹೋಗುತ್ತೇನೆಂದು ನಿಶ್ಚಯಿಸಿ, ಮುಂಗಸಿಯನ್ನು ಕೂಗಿ,-ನೀನು ಇಲ್ಲಿದ್ದು ತಿರುವನ್ನು ನೋಡಿಕೊಳ್ಳಿ ಬೇಕು ಎಂದು ಸಂಕೇತವಾಗಿ ಅವರೊಂದಿಗೆ ಹೇಳಿ, ದ್ವಾರದಲ್ಲಿ ನಿಲ್ಲಿಸಿ, ಅರಮನೆಗೆ ಹೋದನು. ಬ್ರಾಹ್ಮಣನು ಅರಮನೆಗೆ ಹೋದ ಕೂಡಲೇ, ಒಂದು ಕೃಷ್ಣ ಸರ್ಪವು ಮಗುವಿನ ಹತ್ತಿರಕ್ಕೆ ಹೋಗುತ್ತಿರಲಾಗಿ, ಮುಂಗಸಿಯು ನೋಡಿ ಆ ಸರ್ಪವನ್ನು ಹಿಡಿದು ಕುತ್ತಿಗೆಯನ್ನು ಕಚ್ಚಿ ಕೊಂದು ದೇಹವನ್ನು ತುಂಡುತುಂಡಾಗಿ ಮಾಡಿ, ರಕ್ತಸೋಕಿದ ಬಾಯೊಂದಿಗೆ ಮುಂಚೆ ತಾನಿದ್ದ ಸ್ಥಳಕ್ಕೆ ಬಂದು ನಿಂತಿತು. ಅಲ್ಲಿ ಬ್ರಾಹ್ಮಣನು ದಾನವನ್ನು ತೆಗೆದುಕೊಂಡು ಮಗುವನ್ನು ನೆನಸಿಕೊಂಡು ಅತಿ ತರೆಯಾಗಿ ಬಂದು ರಕ್ತದ ಬಾಯೊಂದಿಗಿರುವ ಆ ಮುಂಗಸಿಯನ್ನು ನೋಡಿ, ಅಯ್ಯೋ, ನಾನೇನುಮಾಡಲಿ ? ಇದು ನನ್ನ ಮಗುವನ್ನು ಕಚಿ ತು ' ಎಂದು ಎಣಿಸಿಕೊಂಡು ಒನಕೆಯಿಂದ ಮುಂಗಸಿಯನ್ನು ಹೊಡೆದು ಕೊಂದನು. ಚೆನ್ನಾಗಿ ವಿಚಾರಿಸದೆ ಮುಂಗಸಿಯನ್ನು ಹೊಡೆದು ಅದನ್ನು ಕೊಂದ ಬಳಿಕ ಬ್ರಾಹ್ಮಣನು ಮನೆಯೊಳಕ್ಕೆ ಹೋಗಿ, ಸಂತೋಷವಾಗಿ ಮಲಗಿರುವ ಮಗನನ್ನೂ ತುಂಡು ತುಂಡಾಗಿ ಕತ್ತರಿಸಿ ಬಿದ್ದಿರುವ ಹಾವನ್ನೂ ನೋಡಿ, ತಲೆತಲೆ ಬಡಿದುಕೊಂಡು, ಮಂದಬುದ್ದಿಯಾದ ನಾನೇ ಚೆನ್ನಾಗಿ ವಿಚಾರಿಸದೆ ಇರೆಪಟ್ಟು ಮಾಡಬಾರದ ಕೆಲಸವನ್ನು ಮಾಡಿದೆನು ಎಂದು ಪ್ರಲಾಪಿಸುತ್ತಿದ್ದನು. ಆಗ ಹೆಂಡತಿ ಬಂದು ಸತ್ತು ಬಿದ್ದಿರುವ ಕೀರನನ್ನೂ ಹಾವನ್ನೂ ಕಂಡು 'ಇದು ಏನು ? ' ಎಂದು ಬ್ರಾಹ್ಮಣನನ್ನು ಕೇಳಲು, ನಡೆದ ವೃತ್ತಾಂತವನ್ನು ಬ್ರಾಹ್ಮಣನು ಹೇಳಿದನು. ಆಗ ಆತನ ಹೆಂಡತಿ