ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪಂಚತಂತ್ರ ಕಥೆಗಳು.

136 ಕೂಗಿ,-ಇಂದು ನಮಗೊಂದು ಮೇಲುಂಟಾಗುತ್ತದೆ. ನೀನು ನಮ್ಮ ಮನೆ ಮುಂತಾದುವನ್ನು ಚೆನ್ನಾಗಿ ಸಾರಿಸಿ ಶುದ್ಧಿ ಮಾಡಿ ನೇಮವುಳ್ಳವೆ ೪ಾಗಿರು. ನಾನು ಹೈರಾಭ್ಯಂಜನಗಳನ್ನು ಮಾಡಿಸಿಕೊಂಡು ಸ್ನಾನ ಮಾಡಿ ಮಡಿಯಾಗಿರುತ್ತೇನೆ. ಒಬ್ಬ ಹರಕನನ್ನು ಕರೆಯಿಸು ಎಂದು ಹೇಳಿ, ಹೈರಕನು ಬಂದಕೂಡಲೇ ಕ್ಷೌರಮಾಡಿಸಿಕೊಂಡು, ಅವ ನನ್ನು ಸ್ವಲ್ಪ ಹೊತ್ತು ಇರಹೇಳಿ, ಅಭ್ಯಂಜನಸ್ನಾನಮಾಡಿ, ಮಡಿ ಬಟ್ಟೆಗಳನ್ನು ಉಟ್ಟುಕೊಂಡು ಶುಚಿಯಾಗಿದ್ದನು. ತರುವಾಯ ಸಿದ್ಧ ಪುರುಷನು ಹೇಳಿದ ಪ್ರಕಾರ ಭಿಕ್ಷುಕರು ಮೂವರು ಬಂದರು. ಅವ ರನ್ನು ಕೋಮಟ ಹುಡುಗನು ನೋಡಿ ಪೂಜಿಸಿ, ಅವರಿಗೆ ಪಡ್ರಸೋಪೇತ ವಾದ ಭೋಜನವನ್ನು ಬಡಿಸಿ ಅವರು ತೃಪ್ತಿ ಹೊಂದಿದ ಮೇಲೆ ದೊಣ್ಣೆ ಯನ್ನು ತೆಗೆದುಕೊಂಡು ಅವರ ತಲೆಯ ಮೇಲೆ ಹೊಡೆದನು. ಆಗ ಆ ಮೂವರೂ ಮರು ವರಹಗಳ ರಾಶಿಗಳಾದರು. ಅದನ್ನು ನೋಡಿ ಅವನು ಬಹಳ ಸಂತೋಪಿಸಿ ದಾದಿಯ ಸಂಗಡ ಧನಸಹಿತವಾದ ತನ್ನ ಮನೆಯನ್ನು ಪ್ರವೇಶಿಸಿ ನಾಯಿಂದನಿಗೆ ನೂರು ವರಹಗಳನ್ನು ಕೊಟ್ಟು ಕಳುಹಿಸಿದನು. ಈ ಸಂಗತಿಯನ್ನು ಚೆನ್ನಾಗಿ ವಿಚಾರಿಸದ ನಾಯಿಂ ದನು ಇದನ್ನು ನೋಡಿ ತನ್ನ ಮನೆಗೆ ಹೋಗಿ, ' ನಾನೂ ಭಿಕ್ಷುಕರು ಮೂವರನ್ನು ಕೊಂದು ಧನವನ್ನು ಗಳಿಸುವೆನು ' ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು, ಭಿಕ್ಷುಕರನ್ನು ಎದುರು ನೋಡುತ್ತಿದ್ದನು. ಕರ್ಮ ವಶದಿಂದ ಮೂವರು ಭಿಕ್ಷುಕರು ಬಂದರು. ನಾಯಿಂದನು ಅವರನ್ನು ನೋಡಿ ಸಂತೋಪಿಸಿ ಪೂಜಿಸಿ ತೃಪ್ತಿಯಾಗಿ ಭೋಜನಮಾಡಿಸಿ, ಆ ಮೇಲೆ ಅವರನ್ನು ದೊಣ್ಣೆ ಯಿಂದ ಹೊಡೆದು ಕೊಂದನು. ಆದರೆ ವರಹ ಗಳ ರಾಶಿ ಸಿಕ್ಕಲಿಲ್ಲ. ಈ ಸಮಾಚಾರವನ್ನು ಅರಮನೆಯವರು ಕೇಳಿ ಕರಕನನ್ನು ಎಳದುಕೊಂಡು ಹೋಗಿ ಅರಸನಿಗೆ ತಿಳಿಸಿ ಅರಸನ ಆಜ್ಞೆಯ ಮೇಲೆ ಅವನನ್ನು ಕೊಂದರು.