ಈ ಪುಟವನ್ನು ಪರಿಶೀಲಿಸಲಾಗಿದೆ
ಅಸಂಗ್ರೆಹ್ಮಕಾರಿತ್ವವು.
137
ಆದಕಾರಣ ಯಾವ ಕಾರವನ್ನಾದರೂ ಸರಿ, ವಿಚಾರಿಸದೆ ತರೆ
ಪಟ್ಟು ಮಾಡಬಾರದು. ಇರೆಪಟ್ಟು ಮಾಡುವ ಅವಿವೇಕಿಗೆ ಆಪತ್ತು ಗಳು ಬರುವುದು ಸಿದ್ದವು. ಚೆನ್ನಾಗಿ ವಿಮರ್ಶಿಸಿ ಮಾಡುವ ವಿವೇಕಿಗೆ ಸಂಪತ್ತು ತಪ್ಪದೆ ಉಂಟಾಗುವುದು-ಎಂಮ ಹೆಂಡತಿ ಹೇಳಲು, ಕೇಳಿ ಬ್ರಾಹ್ಮಣನು ಆಕೆಯ ವಿವೇಕವಚನಗಳಿಗೆ ಸಂತೋಷವನ್ನೂ ವಿಚಾರಿ ಸದೆ ತಾನು ಮುಂಗಸಿಯನ್ನು ಕೊಂದವಕ್ಕೆ ಪರಿತಾಪವನ್ನೂ ಹೊಂದಿದ ಚಿತ್ತವುಳ್ಳವನಾಗಿ, ಸರವೂ ದೈವಾಧೀನವೆಂದು ನುಡಿದು, ತನ್ನ ಮಗ ನನ್ನು ಲಾಲಿಸುತ್ತಾ ಭಾರೈಯೂ ತಾನೂ ಸುಖವಾಗಿದ್ದರು.
ಇಂತು ವಿಷ್ಣು ಶರನು ಹೇಳಿದ ಅಸಂಪ್ರೇಕ್ಷಕಾರಿತ್ಪವೆಂಬ
ಐದನೆಯ ತಂತ್ರವನ್ನು ಕೇಳಿ ಆ ರಾಜನಂದನರು
ಅಪರಿಮಿತ ಸಂತೋಷಭರಿತರಾದರು.