ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟ ಟಿ. ಮಿತ್ರಭೇದತಂತ್ರ. 53 ಇಲ್ಲಿ ಸಾಮೋಪಾಯವನ್ನೇ ಮಾಡಬೇಕು. ಸಾಮದಿಂದ ಎಲ್ಲಾ ಕಾರ್ ಗಳೂ ನೆಟ್ಟಗಾಗುವುವು. ಎಷ್ಟು ವಿಧವಾಗಿ ನೋಡಿದರೂ ಅದರಲ್ಲಿ ಕೆಡಕಿಲ್ಲ. ಸಾವು ದಾನ ಭೇದ ದಂಡವೆಂಬ ಚತುರುಪಾಯಗಳು ಕಾರೈಸಿದ್ದಿಗೊಸ್ಕರ ಹೇಳಲ್ಪಟ್ಟು ಇರುತ್ತವೆ. ಆದರೂ ದಾನ ಭೇದ ವಂಡಗಳಿಗೆ ಸಂಖ್ಯಾಮಾತ್ರವೇ ಫಲವೇ ಹೊರತು ಬೇರೆ ಫಲವೇನೂ ಇಲ್ಲ. ಸಾಮೋಪಾಯದಿಂದಲೇ ಸಕಲ ಕಾರಗಳ ಸಿದ್ದಿಸುವುವು. ವಿರೋಧವೆಂಬ ಗಾಡಾಂಧಕಾರವು ರತ್ನ ಕಾಂತಿಯಿಂದಾಗಲಿ ಸೊರಕಿರ ಣಗಳಿಂದಾಗಲಿ ಅಗ್ನಿ ಜ್ವಾಲೆಗಳಿಂದಾಗಲಿ ಶಾಂತಿಯನ್ನು ಹೊಂದದು; ಸಾಮೋಪಾಯದಿಂದಲೇ ಹುಟ್ಟುಗೆಟ್ಟು ಹೋಗುವುದು. ಸಾಮ ದಾನ ಭೇದ ದಂಡಗಳಂಬ ನಾಲ್ಕು ಉಪಾಯಗಳೊಳಗೆ ದಂಡೂಪಾಯವು ತುಂಬಾ ಪಾಪಕ್ಕೆ ಆಕರವಾಗುವುದು. ಆದಕಾರಣ ಅದನ್ನು ಬಿಡ ಬೇಕು, ಚೆನ್ನಾಗಿ ಆಲೋಚಿಸದೆ ಗರ ಪಡುವವನು ತಾನು ನಶಿಸು ವುದು ಮಾತ್ರವೇ ಅಲ್ಲದೆ ತನ್ನನ್ನು ಆಳುವವನಿಗೆ ಸಹ ಸಂಕಟವನ್ನು ತರುವನು. ಈಗ ನಮ್ಮ ಸ್ವಾಮಿ ಮಹತ್ತಾದ ಆಪತ್ತನ್ನು ಹೊಂದಿ ಇದ್ದಾನೆ. ಅದಕ್ಕೆ ನಾವು ಏನಾದರೂ ಪರಿಹಾರವನ್ನು ಹುಡಕಬೇಕು. ಸಮಯವರಿತು ಸಂಧಿಮಾಡಬಲ್ಲ ಮಂತ್ರಿಯ ಸನ್ನಿಪಾತ ಬಂದಾಗ ಬೇಗ ಅದನ್ನು ತಿಳಿದುಕೊಂಡು ವಾಸಿಮಾಡುವ ವೈದ್ಯನೂ ಶ್ಲಾಘಿಸಲ್ಪಡು ತಾರೆ. ಬಯ ಕಾಲದಲ್ಲಿ ಎಲ್ಲರೂ ತಿಳಿದವರೇ. ಅರಸನು ಗುಣವಂತ ನಾಗಿದ್ದರೂ ಮಂತ್ರಿ ಕಪಟಯಾದರೆ, ದುಮ್ಮವಾದ ಮೊಸಳಗಳುಳ್ಳ ಕೆರೆಗೆ ಹೆದರಿದ ಹಾಗೆ ಪ್ರಜೆಗಳು ಅರಸನನ್ನು ಸೇರ ಹೆದರುವರು. ನೀನು ನಿನ್ನ ಮೇಲಿಗೋಸ್ಕರ ಅರಸನನ್ನು ಒಬ್ಬೊಂಟಿಗನನ್ನಾಗಿ ಮಾಡಿದೆ. ಯಾವ ಸೇವಕರನ್ನೂ ಹತ್ತಿರಕ್ಕೆ ಸುಳಿಯಗೊಡಿಸಲೊಲ್ಲೆ. ಮಂತ್ರಿಯು ಅರಸನ ಹತ್ತಿರಕ್ಕೆ ಪ್ರಜೆಗಳನ್ನು ಸೇರಲೀಯದೆ ಎಲ್ಲ ಕ್ಯ ತಾನೇ ತಾನಾಗಿ ಇದ್ದರೆ, ಅರಸನಿಗೆ ತಾನೇ ಹಗೆಗಾರನಾಗುತ್ತಾನೆ. ಕೂರರಾದವರಿಗೆ ಹಿತವನ್ನು ಮಾಡುವವನೂ ಸಾಧುಜನರಿಗೆ ಕೇಡುಮಾಡುವವನೂ ಕೆಟ್ಟುಹೋಗುವನು, ನೀನು ಸಾಧುಜನರಿಗೆ