ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿತ್ರಭೇದತಂತ್ರ. 55 ಕಾಸಿಕೊಳ್ಳುತ್ತಿರಲಾಗಿ, ಸೂಚೀಮುಖವೆಂಬ ಒಂದು ಪಕ್ಷಿಯು ಕಂಡು ಎಲೈ ಹುಚ್ಚು ಕೋತಿಗಳಿರಾ, ಇವು ಬೆಂಕಿಯಲ್ಲ, ಮಿಣಕುಹುಳುಗಳು, ಅಕೋ ಆ ಗಿಡಗದ ಹತ್ತಿರ ಬೆಂಕಿಯಿದೆ. ನೀವಲ್ಲಿಗೆ ಹೋಗಿ ಬೆಂಕಿ ಕಾಯಿಸಿಕೊಳ್ಳಬಾರದೆ ?-ಎಂದು ಎರಡು ಮೂರು ಸಲ ಹೇಳತು. ಆಗ ಒಂದು ಕಪಿ ಕಣ್ಣು ಗಳನ್ನು ಕೆಂಪಗೆ ಕರಳಿಸಿಕೊಂಡು ಕೋಪ ದಿಂದ ಹಲ್ಲುಕಚ್ಚುತ್ತಾ,ಆ ಪಕ್ಷಿಯನ್ನು ನೋಡಿ ನಿನ್ನನ್ನು ಯಾರು ಕೇಳಿದರು ? ನೀನೀಗ ಇಂಥಾ ಮಾತನಾಡಬೇಕಾದುದೇನು?-ಎಂದು ಅವನ್ನು ಹಿಡಿದು ಕಲ್ಲಿಗೆ ಅಪ್ಪಳಿಸಿ ಕೊಂದು ಹಾಕಿತು. ಆದುದರಿಂದ ಬುದ್ದಿ ಹೀನರಿಗೆ ಬುದ್ಧಿವಂತರು ಹೇಳಿದ ಬುದ್ದಿ ಏಕೆ ಹಿತವಾದೀತು? ಸಮಸ್ತ ರಿಂದಲೂ ಹೊಗಳಿಸಿಕೊಳ್ಳತಕ್ಕೆ ಬದಿಯಿಂದಾಗಲಿ ಧನದಿಂದಾಗಲಿ ತನ್ನ ವಂಶದವರನ್ನು ಪೋಷಿಸುವಂಥ ಮಗನನ್ನು ಹೆತ್ತ ತಾಯಿಯೇ ತಾಯಿ. ಚೆಲುವರಾದ ಪುರುಷರು ಅನೇಕರುಂಟು ; ಒಳ್ಳಯ ವಿವೇಕವುಳ ಪುರುಷರು ಸಿಕ್ಕುವುದು ಅಪೂರ್ವ-ಎಂದು ನುಡಿಯಲು, ಕೇಳಿ ದಮ ನಕನು ಸುಮ್ಮನಿದ್ದುದನ್ನು ನೋಡಿ, ಕರಟಕನು ಮರಳಿ ಇಂತೆಂದನು. Evil of covetousness–Subuddhi and Durbuddhi. ಅನ್ಯರಿಗೆ ಅಪಕಾರ ಮಾಡಿದವನಿಗೆ ಕಂಠಸ್ಕರವೇ ಭೇದಿಸುವುದು, ಮುಖವು ವಿವರ್ನವಾಗುವುದು, ದೃಶ್ಮಿಚಲಿಸುವುದು, ಮೈ ಕುಗ್ಗುವುದು. ದುಷ್ಮಬುದ್ದಿ ಎಂಬುವನು ಧನಲೋಭದಿಂದ ತನ್ನ ತಂದೆಯನ್ನು ಕೊಲ್ಲಿ ಸಿಕೊಂಡ ಹಾಗೆ ಲೋಭಗುಣವುಳ್ಳವರು ಕೆಟ್ಟು ಹೋಗುವರು. ಆ ಕಥೆಯನ್ನು ಕೇಳು-ಎಂದು ಕರಟಕನು ಹೇಳತೊಡಗಿದನು. ಒಂದಾನೊಂದು ಪಟ್ಟಣದಲ್ಲಿ ದುಷ್ಕೃಬುದ್ದಿ ಸುಬುದ್ದಿ ಎಂಬ ಇಬ್ಬರು ಕೋಮಟಿಗರಿದ್ದರು. ಅವರು ಚಿಕ್ಕತನದಿಂದ ಬಹಳ ಸ್ನೇಹ ವುಳ್ಳವರಾಗಿದ್ದರು. ಕೆಲವು ಕಾಲದ ತರುವಾಯ ಅವರು ಹಣಗಳಿಸಬೇ ಕೆಂದು ದೇಶಾಂತರಕ್ಕೆ ಹೋದರು. ಅಲ್ಲಿ ಸುಬುದ್ದಿಗೆ ಒಂದು ಕಡೆಯಲ್ಲಿ ವರಹಗಳ ಬಿಂದಿಗೆ ನಿಕ್ಕಿತು, ಅವನು ಸ್ನೇಹವಾತ್ಸಲ್ಯದಿಂದ ಮುಪ್ಪ ಬುದ್ದಿಯ ಹತ್ತಿರಕ್ಕೆ ಹೋಗಿ-ಎಲೈ ಗೆಳಯನೇ, “ನನಗೆ ವರಹ