ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

56 ಪಂಚತಂತ್ರ ಕಥೆಗಳು. ತುಂಬಿದ ಬಿಂದಿಗೆ ಒಂದು ಸಿಕ್ಕಿತು. ನಾವಿಬ್ಬರೂ ಈಬಿಂದಿಗೆಯನ್ನು ತೆಗೆದುಕೊಂಡು ನಮ್ಮ ನಮ್ಮ ಮನೆಗಳಿಗೆ ಹೋಗಿ ಸುಖವಾಗಿರೋಣ, ಬಾ-ಎಂದು ಹೇಳಿದನು. ಒಳ್ಳೆಯದು, ಹಾಗೆಯೇ ಆಗಲಿ ಎಂದು ದುಷ್ಟಬುದ್ದಿ ಸುಬುದ್ದಿಯ ಸಂಗಡ ತನ್ನ ಪಟ್ಟಣಕ್ಕೆ ಬರುತ್ತಾ, ಪಟ್ಟ ಣದ ಹತ್ತಿರ ಸುಬುದ್ದಿಯನ್ನು ನೋಡಿ, --ಎಲೈ ಸ್ನೇಹಿತನೇ ..ನಾವೀಗ ಈ ಧನವನ್ನು ಮನೆಗೆ ತೆಗೆದುಕೊಂಡು ಹೋಗುವುದು ಯುಕ್ತವಲ್ಲ. ಜನರು ಕಂಡರೆ ಅರಸನಿಗೆ ತಿಳಿಸುವರು. ಆಮೇಲೆ ಅರಸನು ನಮ್ಮನ್ನು ಹೊಡಿಸಿ ಸುಲಿದುಕೊಂಡಾನು. ಆದುದರಿಂದ ನಾವು ಈ ಧನದಲ್ಲಿ ವೆಚ್ಚಕ್ಕೆ ನೂರು ವರಹ ತೆಗೆದುಕೊಂಡು ಮಿಕ್ಕುದನ್ನು ಎಲ್ಲಾದರೂ ಬ೯ಟ್ಟುಬಿಟ್ಟು ಹೋಗೋಣ ಎಂದು ನುಡಿಯಲಾಗಿ ಅದಕ್ಕೆ ಸುಬುದ್ದಿ ಸಮ್ಮತಿಸಿದನು. ಬಳಿಕ ಅವರಿಬ್ಬರೂ ಒಂದು ಮರದ ಬಳಿಗೆ ಹೋಗಿ ಆ ಬಿಂದಿಗೆಯಲ್ಲಿ ನೂರು ವರಹ ತೆಗೆದುಕೊಂಡು, ಉಳಿದ ಧನವನ್ನು ಅಲ್ಲಿಯೇ ಹೂಳಿಟ್ಟು, ತಮ್ಮ ಮನೆಗಳಿಗೆ ಹೋಗಿ ಅತಿ ಸ್ನೇಹದಿಂದ ಸುಖವಾಗಿ ಇದ್ದರು. ಹೀಗೆ ಕೆಲವು ದಿನವಾದ ತರುವಾಯ ದುಪ್ಪ, ಬುದ್ದಿ ಆ ಧನವನ್ನೆಲ್ಲಾ ತಾನಪಹರಿಸಬೇಕೆಂದು ಎಣಿಸಿ, ಒಂದು ದಿನ ರಹಸ್ಯವಾಗಿ ಹೋಗಿ ಹೂಳಿಟ್ಟ ಬಿಂದಿಗೆಯನ್ನು ತೊಡಿ ಎತ್ತಿ ತನ್ನ ಮನೆಗೆ ತೆಗೆದುಕೊಂಡು ಬಂದು ಬಚಿ ಟ್ಟನು. ಆ ಮೇಲೆ ಕೆಲವು ದಿವಸಕ್ಕೆ ಅವನು ಸುಬುದ್ದಿಯ ಬಳಿಗೆ ಹೋಗಿ ಎಲೈ ಸ್ನೇಹಿತನೇ, ಅಂದು ನಾವು ಹೂಳಿಟ್ಟ ಧನವನ್ನು ಈಗ ತೆಗೆದುಕೊಳ್ಳೋಣ, ವಿಳಂಬ ಪಡಿಸ ಲೇಕೆ ? ಈ ಅರಸನು ಬಹಳ ಧಾರಿ ಕನು ; ಮಂತ್ರಿ ಅತ್ಯಂತ ಯೋಗ್ಯ ನು, ಪ್ರಜೆಗಳಲ್ಲರೂ ಬಹು ಸಜ್ಜನರು ; ಆದಕಾರಣ ನಾವು ಮನಸ್ಸಿ ನಲ್ಲಿ ಚಿಂತಿಸಬೇಕಾದುದಿಲ್ಲ. ನಾವು ಹಣವನ್ನು ದಕ್ಕಿಸಿಕೊಳ್ಳಬಹುದು, ಹೋಗೋಣ ಬಾ ಎಂದು ಸುಬುದ್ದಿಯನ್ನು ಕರೆದುಕೊಂಡು ಆ ಗಿಡದಬಳಿಗೆ ಹೋಗಿ, ಅಲ್ಲಿ ಅಗೆದು ನೋಡಲಾಗಿ, ಧನವು ಸಿಕ್ಕಲಿಲ್ಲ. ಆಗ ದುಮ್ಮ ಬುದ್ದಿ ಅತ್ತು ಎದೆ ಎದೆ ಬಡಿದುಕೊಳ್ಳುತ್ತಾ ಸುಬುದ್ಧಿಯನ್ನು ನೋಡಿ,-ಸೀನೇ ಈ ಧನವನ್ನು ಎತ್ತಿಕೊಂಡ ಎಂದು ಹೇಳಿದನು. ನಾನು ಅರಿಯಲೇ ಅರಿಯೆನು -ಎಂದು ಸುಬುದ್ದಿ ನುಡಿದನು. ಬಳಿಕ ಒs 3