ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

s ಪಂಚತಂತ್ರ ಕಥೆಗಳು, ದುಷ್ಕಮಿದ್ದಿ ಅರಿಯನು-ಎಂದು ಹೇಳು. ಕೂಡಲೇ ವ್ಯಾಜ್ಯ ನಮ್ಮ ಪಕ್ಷವಾಗಿ ಗೆಲ್ಲುತ್ತದೆ. ಆ ಧನವನ್ನು ಇಟ್ಟುಕೊಂಡು ನಾವು ಚಿರ ಕಾಲ ಬಾಳಬಹುದು ಎಂದು ಹೇಳಿದನು. ಅದಕ್ಕೆ ದುಷ್ಟಬುದ್ದಿಯ ತಂದೆ ಕೆಟ್ಟು ಹೋಗುವ ಕಾಲಕ್ಕೆ ನಿನಗಿಂಥ ಮದ್ದಿ ಮುಟ್ಟಿತು. ಹಣದಾಶೆಗೆ ಅಂತವು ಉಂಟೇ ? ನಿನಗೆ ಹುಚ್ಚು ಹಿಡಿಯಿತು. ಉಪಾ ಯವನ್ನು ಚಿಂತಿಸುವಾಗಲೇ ಅಪಾಯವನ್ನು ಸಹ ಬುದ್ದಿಶಾಲಿಯಾದವನು ಚಿಂತಿಸಬೇಕು. ಹಾಗೆ ಮಾಡದಿದ್ದರೆ ಕೊಕ್ಕರೆಯ ಮರಿಗಳನ್ನು ಮುಂಗಿನಿ ನುಂಗಿದಹಾಗೆ ಆಗುತ್ತದೆ. ಆ ಕಥೆ ಏನೆಂದರೆ The advantage and the disadvantage of a design must be considered together-The Cranes, the Serpent and the Mongoose. ಒಂದು ಮಗುವಿನ ಕಟ್ಟೆಯ ಅಂಚಿನಲ್ಲಿ ಒಂದು ಮರದ ಮೇಲೆ ಬಕದಂಪತಿಗಳು ವಾಸಮಾಡುತ್ತಿದ್ದವು. ಅವುಗಳ ಮರಿಗಳನ್ನು ಆಗಾಗ್ಗೆ ಒಂದು ಸರವು ಕಿಸಿ ಹೋಗುತ್ತಿದ್ದಿತು. ಬಳಿಕ ಒಂದು ದಿನ ಹೆಣ್ಣು ಕೆಕ್ಕರೆ ತನ್ನ ಗಂಡನನ್ನು ನೋಡಿ ನನ್ನ ಮರಿಗಳನ್ನು ಸಲಸಕ್ಕ ಹಾವು ತಿಂದು ಹೋಗುತ್ತದೆ. ಈಗ ನನಗೆ ಪ್ರಸವ ಕಾಲವು ಸಮಿಾಪಿಸಿತು. ಈ ಬಾರಿಯಾದರೂ ಒಂದು ಉಪಾಯವನ್ನು ಪಿಚಾರಿಸದೆ ಉಪೇಕ್ಷಿಸಿದರ ಪುತ್ರಶೋಕವನ್ನು ನಾನು ಹೇಗೆ ಸಹಿಸು ವುದು-ಎಂದು ಕಣ್ಣೀರು ಬಿಟ್ಟಿತು. ಆಗ ಗಂಡು ಕೊಕ್ಕರೆ ಮರದ ಕೆಳಕ್ಕೆ ಇಳಿದ ಮಡುವಿನ ಕಟ್ಟೆಯ ಮೇಲೆ ನಿಂತುಕೊಂಡು ಯೋಚಿ ಸುತ್ತಿರುವ ಸಮಯದಲ್ಲಿ ಅಲ್ಲಿಗೆ ಒಂದು ನಳ್ಳಿ ಬಂದು-ನೀನೇಕೆ ಚಿಂತಿ ಸುತ್ತಾ ಇದ್ದೀಯ ? - ಎಂದು ಕೇಳಿತು. ತನ್ನ ವೃತ್ತಾಂತವನ್ನೆಲ್ಲಾ ಕೊಕ್ಕರೆ ಅದರ ಸಂಗಡ ಹೇಳಿತು. ಆಗ ನಳ್ಳಿ ಸ್ವಲ್ಪ ಹೊತ್ತು ಆಲೋಚಿಸಿ-ಎಲೈ ಬಕ ಶ್ರೇಷ್ಠನೇ, ನಿನಗೆ ನಾನೊಂದು ಉಪಾಯ ವನ್ನು ಹೇಳುತ್ತೇನೆ ಕೇಳು. ಮುಗಿಸಿಯಿರುವ ಬಿಲದ ಹತ್ತಿರದಿಂದ ಆ ಹಾವಿರುವ ಹುತ್ತಿನತನಕ ಅಲ್ಲಲ್ಲಿ ಒಂದೊಂದು ಮಾನನ್ನು ಹಾಕಿ