ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿತ್ರಭೇದತಂತ್ರ. He who intends to deceive another will deceivė himself-The two Merchants, ಒಂದಾನೊಂದು ಪಟ್ಟಣದಲ್ಲಿ ಅಕ್ಷೀಣವಿಭವನೆಂಬ ಹೆಸರುಳ್ಳ ಒಬ್ಬ ಕೋಮತಿಯುಂಟು. ಅವನು ಹಣವನ್ನು ಗಳಿಸಬೇಕೆಂದು ವ್ಯಾಪಾರ ಮಾಡುವುದಕ್ಕಾಗಿ ಪರದೇಶಕ್ಕೆ ಹೋಗುವುದಕ್ಕೆ ಪ್ರಯಾಣಹೊರಟು, ಐವತ್ತು ಭಾರ ಲೋಹವನ್ನು ತನ್ನ ಸ್ನೇಹಿತನ ಬಳಿಯಲ್ಲಿ ಜೋಪಾನ ವಾಗಿಟ್ಟಿರೆಂದು ಕೊಟ್ಟು, ದೇಶಾಂತರಕ್ಕೆ ಹೋಗಿ ಸ್ವಲ್ಪ ಕಾಲ ಇದ್ದು, ಅಲ್ಲಿಂದ ತಿರುಗಿ ಬಂದು ಊರಿಗೆ ಸೇರಿ, ತನ್ನ ಸ್ನೇಹಿತನ ಮನೆಗೆ ಹೋಗಿ-ಗೆಳಯನೇ, ಇಷ್ಟು ದಿನ ಪರದೇಶಕ್ಕೆ ಹೋಗಿದ್ದೆ. ಅಲ್ಲಿ ನನಗೊಂದು ಕಾಸು ಸುದಾ ಲಾಭ ಸಿಕ್ಕದೆ ಸುಮ್ಮನೆ ತಿರುಗಿ ಬರಬೇಕು ಯಿತು. ನಿನ್ನ ಮನೆಯಲ್ಲಿ ಇಟ್ಟು ಹೋದ ಲೋಹವನ್ನು ಕೊಡಿಸುಎಂದು ಕೇಳಿದನು. ಅವನು ದ್ರವ್ಯಲೋಭದಿಂದ ಸೊತ್ತುಗಾರನಿಗೆ ಸೊತ್ತನ್ನು ಕೊಡದೆ ಅದನ್ನು ಇಲಿಗಳು ತಿಂದುಹೋದುವೆಂದು ಹೇಳಿ ದನು. ಆ ಮೇಲೆ ಈ ವರ್ತಕನು ಸ್ವಲ್ಪ ಹೊತ್ತು ತನ್ನ ಮನಸ್ಸಿನಲ್ಲಿ ಆಲೋಚಿಸಿ, “ಇವನು ನನ್ನ ಸೊತ್ತನ್ನು ನನಗೆ ಕೊಡಲಾರದೆ - ಇದ್ದಾನೆ. ಹೇಗಾದರೂ ಇವನನ್ನು ವಂಚಿಸದೆ ಹೋದರೆ ನನ್ನ ಸೊತ್ತು ನನಗೆ ಬರಲಾರದು.-ಎಂದು ನಿಶ್ಚಯಿಸಿ, ಮಾರನೆಯ ದಿನ ಆ ವರ್ತಕನ ಮಗನನ್ನು -ಮಾಯೋಣ ಬಾ ಎಂದು ತನ್ನ ಸಂಗಡ ಕೆರೆಗೆ ಕರೆದುಕೊಂಡು ಹೋಗಿ, ಅಲ್ಲಿ ಮಿಂದು ತಿರುಗಿ ಬರುವಾಗ ಆ ಹುಡಗನನ್ನು ಒಬ್ಬರ ಮನೆಯಲ್ಲಿ ಅವಿತಿಟ್ಟು ತಾನು ಮಾತ್ರವೇ ಬಂವನು. ನಮ್ಮ ಹುಡಗನು ನಿನ್ನ ಸಂಗಡ ಸ್ನಾನಕ್ಕೆ ಕೆರೆಗೆ ಬಂದ ನಲ್ಲಾ, ಎಲ್ಲಿ ಹೋದನು-ಎಂದು ಅವನ ತಾಯಿತಂದೆಗಳು ಕೇಳಿದರು. ನಿಮ್ಮ ಹುಡಗನೂ ನಾನೂ ಕೆರೆಯಲ್ಲಿ ಸ್ನಾನಮಾಡಿ ಹಾದಿಯಲ್ಲಿ ಬರುತ್ತಿ ರುವಾಗ ನಿಮ್ಮ ಹುಡಗನನ್ನು ಹದ್ದು ಎತ್ತಿಕೊಂಡು ಹೋಯಿತುಎಂದು ವರ್ತಕನು ಹೇಳಿದನು. ಆಗ ಲೋಹವನ್ನು ಅಪಹರಿಸಿದವನು ಕಣ್ಣು ಗಳನ್ನು ಕೆಂಪಗೆ ಕೆರಳಿಸಿಕೊಂಡು ಬಲು ಬೇಗ ಅರಸನ ಹತ್ತಿ