ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

62 ಪಂಚತಂತ್ರ ಕಥೆಗಳು, ರಕ್ಕೆ ಹೋಗಿ ಮೊರೆಯಿಟ್ಟುಕೊಂಡನು. ಅರಸನು ಧರಾಧಿಕೃತರನ್ನು ಕರೆಯಕಳುಹಿಸಿ ಆ ಮೊರೆಯನ್ನು ವಿಚಾರಿಸಹೇಳಿ ಅಪ್ರಣೆಮಾಡಿ ದನು. ಅವರು ಆ ವೈಶ್ಯನನ್ನು ಕರೆಯಿಸಿ ನೀನು ಮೊರೆಯಿಡುವುದಕ್ಕೆ ಕಾರಣವೇನು ಎಂದು ಕೇಳಿದರು. ಅವನು ಅಯ್ಯಾ, ನನ್ನ ಸ್ನೇಹಿತ ನೊಬ್ಬನು ನನ್ನ ಮಗನನ್ನು ತನ್ನ ಸಂಗಡ ಕರೆದುಕೊಂಡು ಹೋಗಿ ಹಾದಿಯಲ್ಲಿ ಅವನನ್ನು ಕೊಂದುಬಿಸುಟು, “ ಹುಡುಗನಲ್ಲಿ ' ಎಂದು ಕೇಳಿದರೆ ( ಅವನನ್ನು ಹದ್ದು ಎತ್ತಿಕೊಂಡು ಹೋಯಿತು' ಎಂದು ಹೇಳುತ್ತಾನೆ. ಇಂಥ ಅನ್ಯಾಯ ಭೂಮಿಯಲ್ಲಿ ಎಲ್ಲಾದರೂ ಉಂಟೋ? ಇದನ್ನು ನೀವು ಚೆನ್ನಾಗಿ ವಿಚಾರಿಸಬೇಕು-ಎಂದು ನುಡಿದನು, ಧರಾಧಿಕೃತರು ಇಂಥುದನ್ನು ಈವರೆಗೆ ಎಂದೂ ಕೇಳಲಿಲ್ಲ. ಇದನ್ನು ಚೆನ್ನಾಗಿ ವಿಚಾರಿಸಬೇಕು ಎಂದು ನೆನಸಿ, ಪ್ರತಿವಾದಿಯನ್ನು ಕರೆ ಯಿಸಿ ಈ ಸಂಗತಿ ಏನು?-ಎಂದು ಕೇಳಿದರು. ಅದಕ್ಕೆ ಅವನು ಅಯ್ಯಾ, ಇವತ್ತು ಭಾರ ಲೋಕವನ್ನು ನಾನು ವಾದಿಯ ಮನೆಯಲ್ಲಿ ಇಟ್ಟುಬಿಟ್ಟು ಹೋದೆ. ಅದನ್ನು ಇಲಿಗಳು ತಿಂದುಹೊದುವಂತೆ. ಚಿಕ್ಕ ಹುಡುಗನನ್ನು ಹದ್ದು ಎತ್ತಿಕೊಂಡು ಹೋಗುವುದು ಆಶ್ಚ ರ ವೇ?-ಎಂದು ಕೇಳಿದನು. ಆ ಸಭೆಯವರು ಅವನ ತಾತ್ರವನ್ನು ತಿಳಿದುಕೊಂಡು ಈ ಸೆಟ್ಟಿ ನಿನ್ನ ಲೋಹವನ್ನು ನಿನಗೆ ಕೊಡುತ್ತಾನೆ. ನೀನು ಅವನ ಮಗನನ್ನು ಅವನಿಗೆ ಕೊಡು-ಎಂದು ಹೇಳಿದರು. ಆ ಮೇಲೆ ಅವರಿಬ್ಬರೂ ಸಭೆಯವರ ತೀರ್ಪಿಗೆ ಸಂಮತಿಸಿ ಆ ಪ್ರಕಾರ ನಡೆದುಕೊಂಡರು ಎಂದು ನುಡಿದು, ಕರಟಕನು ಮರಳಿ ಇಂತೆಂದನು. ಹಿತವಾಗಿ ಒಂದು ಮಾತನ್ನು ಹೇಳಿದರೆ ತಿಳಿದು ನಡೆದುಕೊಳು ವವನು ಬುದ್ದಿವಂತನು. ನೀನು ಬೊಂಬೆಯ ಹಾಗೆ ನಿಶ್ಲೇಸ್ಮಿತನಾಗಿ ಭ್ರಮಿಸಿದ್ದೀಯೆ. ನಿನಗೆ ಎಷ್ಟು ಹೇಳಿದರೂ ಪ್ರಯೋಜನವೇನು ? ನಾನು ನಿನ್ನ ಸಂಗಡ ಸೇರಿ ಇರುವುದು ಅನುಚಿತ, ನಾನಾದೇಶದಲ್ಲಿ ಸಂಚರಿಸುತ್ತಿರುವ ವಾಯುವಿಗೆ ಸುಗಂಧ ದುರ್ಗಂಧಗಳು ಉಂಟಾಗುವ ಹಾಗೆ ಸುಜನ ದುರ್ಜನ ಸಹವಾಸ ಮಾಡುತ್ತಿರುವ ಪುರುಷನಿಗೆ ಸುಗುಣ