ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

64 ಪಂಚತಂತ್ರ ಕಥೆಗಳು. ಅರಸನು ಅವರನ್ನು ಶೀಘ್ರವಾಗಿ ಕೊಲ್ಲಬೇಕು, ಅದೂ ಅಲ್ಲದೆ ಯಾವಾ ಗಲೂ, ಸ್ವಲ್ಪವಾದರೂ ದಯೆಯಿಲ್ಲದ ಅರಸನೂ, ಸರ್ವಭಕ್ಷಕನಾದ ಬ್ರಾಹ್ಮಣನೂ, ಗಂಡನಿಗೆ ಯಾವಾಗಲೂ ಪ್ರತಿಕೂಲೆಯಾಗಿರುವ ಹೆಂಗಸ, ಕಪಟವು ಸ್ನೇಹಿತನೂ, ಗರ್ವಿಸಿದ ಕೃತನೂ, ಪ್ರಮತ ನಾದ ಮಂತ್ರಿಯೂ, ಮಾಡಿದ ಮೇಲನ್ನು ಮರೆತವನ್ನೂ, ಈ ಏಳು ಮಂದಿಯೂ ಬುದ್ದಿ ಮಂತನಿಂದ ಬಿಡಲ್ಪಡತಕ್ಕವರು. ಮನುಷ್ಯಮಾತ್ರ ನಿಗೆ ಇರುವ ಗುಣಗಳಲ್ಲಿ ಅರಸನು ರಾಜ್ಯ ಪರಿಪಾಲನೆ ಮಾಡಬೇಕೆಂದರೆ ಆ ದೊರೆತನವು ಪ್ರಕಾಶಿಸದು. ಶತ್ರುಭಯಂಕರವಾದ ಕಾರಣಗಳಿಂದ ಭೂಮಿಯನ್ನೆಲ್ಲಾ ತನ್ನ ವಶಪಡಿಸಿಕೊಂಡು ಕೀರ್ತಿಸಂಪತ್ತುಗಳುಳ್ಳವ ನಾಗಿ ಇದ್ದರೆ ದೊರೆತನವು ಪ್ರಕಾಶಿಸುವುದು. ಯಾವುವು ಮನುಷ್ಯ ಮಾತ್ರನಿಗೆ ದೋಷವೋ, ಅವು ಅರಸನಿಗೆ ಒಳ್ಳೆಯ ಗುಣಗಳು, ಆತನು ಒಂದು ಕಡೆಯಲ್ಲಿ ಸತ್ಯಕ್ಕೆ ತಪ್ಪದೆ ನಡವನು, ಒಂದು ಕಡೆಯಲ್ಲಿ ಸ್ವಲ್ಪ ಸಡಿಲ ಬಿಡುವನು; ಒಂದು ಕಡೆಯಲ್ಲಿ ಒಳ್ಳೆಯ ಮಾತುಗಳನ್ನು ನುಡಿವನು ; ಒಂದು ಕಡೆಯಲ್ಲಿ ಕಠಿನವಾಗಿ ಮಾತನಾಡುವನು; ಒಂದು ಕಡೆಯಲ್ಲಿ ಬಹಳ ದಯೆಯುಳ್ಳವನಾಗಿ ಇರುವನು , ಒಂದು ಕಡೆಯಲ್ಲಿ ದಯೆಯಿಲ್ಲದವನಾಗಿರುವನು; ಒಂದು ಕಡೆಯಲ್ಲಿ ಧನವನ್ನು ಸಂಪಾದಿಸು ವುದೇ ಮುಖ್ಯಪ್ರಯೋಜನವಾಗಿ ಎಣಿಸುವನು ; ಒಂದು ಕಡೆಯಲ್ಲಿ ಬಹಳ ದಾತೃತ್ವವನ್ನುಳ್ಳವನಾಗಿರುವನು. ಈ ಪ್ರಕಾರ ಅನೇಕ ವಿಧ ವಾದ ರೂಪಗಳಿಂದ ರಾಜನೀತಿ ಪ್ರಕಾಶಿಸುತ್ತಿರುವುದು. ಇಂಥ ನೀತಿ ಮಾರ್ಗಗಳನ್ನೆಲ್ಲಾ ತಿಳಿದುಕೊಂಡರೆ ನಿನಗೆ ಬಹಳ ಸಂಪತ್ತು ಉಂಟಾ ಗುವುದು ಎಂದು ದಮನಕನು ಹೇಳಿದನು. ಅದನ್ನು ಕೇಳಿ ಪಿಂಗಳ ಕನು ಮನಸ್ಸಿನಲ್ಲಿಯ ಕಳವಳ ತೀರಿ ಸಂತೋಷಚಿತ್ತನಾಗಿ ತನ್ನ ಮಂತ್ರಿ ನೃತ್ಯರು ಸಹಿತವಾಗಿ ಎಂದಿನಂತೆ ರಾಜ್ಯವನ್ನಾಳುತ್ತಿದ್ದನು. ಎಂದು ವಿಷ್ಣು ಶರನು ನುಡಿದ ಮಿತ್ರಭೇಧವೆಂಬ ಪ್ರಥಮ ತಂತ್ರವನ್ನು ಆ ರಾಜಕುಮಾರರು ಕೇಳಿ ಸಂತೋಷಭರಿತಾಂತರಂಗರಾಗಿದ್ದರು. مممممعحح