ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 ಪಂಚತಂತ್ರ ಕಥೆಗಳು ಮೃಗ ಮೂಷಿಕಗಳ ಹಾಗೆ ಚೆನ್ನಾಗಿ ನೆರವೇರಿಸಿಕೊಳ್ಳುವರು-- ಎಂದು ವಿಷ್ಣು ಶರನು ಹೇಳಲು, ರಾಜಕುಮಾರರು ಕೇಳಿ --ಕಾಕಕೊರಮೃಗ ಮೂತ್ರಿಕೆಗಳಿಗೆ ಹೇಗೆ ಸ್ನೇಹವಾಯಿತು ? ಅವು ಯಾವ ಕಾರಗಳನ್ನು ನೆರವೇರಿಸಿಕೊಂಡುವು? ನಮಗೆ ವಿಶದವಾಗಿ ತಿಳಿಸಬೇಕು-ಎನಲು, ವಿಷ್ಣು ಶರನು ಹೇಳುತ್ತಾನೆ ಮಹಿಳಾಪುರವೆಂಬ ಪಟ್ಟಣಕ್ಕೆ ಸವಿಾಪವಾಗಿದ್ದ ದೊಡ್ಡ ಅಡವಿ ಯಲ್ಲಿ ಒಂದು ಬೂರುಗದ ಮರವುಂಟು, ಆ ಮರದ ಮೇಲೆ ಲಘುಪತ ನಕನೆಂಬ ಹೆಸರುಳ್ಳ ಕಾಗೆ ಒಕ್ಕಲಿದ್ದಿತು. ಆ ಗಿಡದ ಕೆಳಗೆ ಒಬ್ಬ ಬೆಸ್ತನು ಬಂದನು. ಅವನನ್ನು ಕಂಡು ಆ ಕಾಗೆ ಹೆದರಿ 'ಇವನಿಲ್ಲಿಗೆ ಏತಕ್ಕೋಸ್ಕರ ಬಂದನು ? ದುರ್ಜನಸಿರುವ ಸ್ಥಳದಲ್ಲಿ ನಿಲ್ಲಬಾರದು, ಇದೂ ಅಲ್ಲದೆ ಈಗ ನಾನು ಬಹಳ ಹಸಿಗೊಂಡು ಇದ್ದೇನೆ. ಬಹಳ ಹೊತ್ತೇರಿತು. ಶೀಘ್ರವಾಗಿ ಹೋಗಬೇಕು' ಎಂದು ಯತ್ನಿ ಸುತ್ತಿ ರುವಾಗ, ಆ ಬೆಸ್ತನು ಆ ಮರದ ಸುತ್ತಲೂ ಬಲೆಯೊಡ್ಡಿ ಕೆಳಗೆ ಧಾನ್ಯ ವನ್ನು ಚೆಲ್ಲಿ ತಾನು ಕಾಣಿಸದೆ ಆಚೆ ಹೊದರಿನಲ್ಲಿ ಅವಿತುಕೊಂಡು ರೆಪ್ಪೆ ಹಾಕದೆ ನೋಡುತ್ತಿದ್ದನು. The Huntsulan and the prince of Doves. ಆಗ ಚಿತ್ರbವನೆಂಬ ಕಪೋತರಾಜನು ಬಂದು ಆ ಧಾನ್ಯವನ್ನು ತಿನ್ನಬೇಕೆಂಬ ಆಸೆಯಿಂದ ತನ್ನ ಪರಿವಾರಸಮೇತನಾಗಿ ಅವನ ಬಲೆ ಯಲ್ಲಿ ಸಿಕ್ಕುಬಿದ್ದನು. ಅದನ್ನು ಕಂಡು ಬೆಸ್ತನು ಬಹಳ ಸಂತೋಷಿಸಿ ಬಲೆಯ ಹತ್ತಿರಕ್ಕೆ ಬರುತ್ತಿರುವ ಸಮಯದಲ್ಲಿ, ಚಿತ್ರbವನು ತನ್ನ ಪರಿವಾರವನ್ನು ನೋಡಿ ಇಂತೆಂದನು. ಹಸಿವಿನ ಬಾಧೆಯಿಂದ ಮೈಮರೆತು ನಾವೆಲ್ಲರೂ ಬಲೆಯಲ್ಲಿ ಸಿಕ್ಕಿ ಕೊಂಡೆವು. ನಮಗೆ ಈ ಆಪತ್ತನ್ನು ಹೋಗಲಾಡಿಸುವುದಕ್ಕೆ ಮತ್ತಾರಿ ದ್ದಾರೆ? ನಾನೊಂದುಪಾಯವನ್ನು ಹೇಳುತ್ತೇನೆ ಕೇಳಿ, ಅದೇನೆಂದರೆ : ನಾವೆಲ್ಲರೂ ಒಂದೇ ಪಟ್ಟಾಗಿ ಬಲೆಯನ್ನು ಎತ್ತಿಕೊಂಡು ಆಕಾಶಕ್ಕೆ ಖು